ಹೊಸ ನೋಕಿಯಾ X100 ಫೋನ್ ಅನಾವರಣ!..ಫೀಚರ್ಸ್ ಏನು?
ಮೊಬೈಲ್ ಮಾರುಕಟ್ಟೆಯಲ್ಲಿ ಎವರ್‌ಗ್ರೀನ್ ಕಂಪನಿಯಾಗಿ ಗುರುತಿಸಿಕೊಂಡಿರುವ ನೋಕಿಯಾ ಈಗಾಗಲೇ ಹಲವು ಆಂಡ್ರಾಯ್ಡ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಆ ಪೈಕಿ ಬಜೆಟ್ ದರದಿಂದ ಹೈ ಎಂಡ್ ಮಾಡೆಲ್ ವರೆಗೂ ಭಿನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಹೊಂದಿದೆ. ನೋಕಿಯಾದ X ಸರಣಿಯ ಸ್ಮಾರ್ಟ್‌ಫೋನ್‌ಗಳು ಬಜೆಟ್ ಪ್ರೈಸ್‌ಟ್ಯಾಗ್ ಹೊಂದದ್ದು, ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿವೆ. ಅದರ ಮುಂದಿನ ಭಾಗವಾಗಿ ಕಂಪನಿಯ X ಸರಣಿಯ ಈಗ ಮತ್ತೊಂದು ಬಜೆಟ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ತಯಾರಾಗಿದೆ.

ಹೌದು, ನೋಕಿಯಾ ಹೆಚ್‌ಎಮ್‌ಡಿ ಗ್ಲೋಬಲ್ ನೂತನವಾಗಿ ನೋಕಿಯಾ X100 ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಜ್ಜಾಗಿದೆ. ಈ ಫೋನ್ 5G ಸಪೋರ್ಟ್ ಪಡೆದಿರಲಿದೆ ಜೊತೆಗೆ ಬಜೆಟ್ ಪ್ರೈಸ್ ಟ್ಯಾಗ್‌ನೊಂದಿಗೆ ಎಂಟ್ರಿ ಕೊಡಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 480 ಪ್ರೊಸೆಸರ್ ಹೊಂದಿರಲಿದ್ದು, 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ ಎಂದು ಹೇಳಲಾಗಿದೆ. ಹಾಗಾದರೇ ನೂತನ

ಬರಲಿರುವ ಹೊಸ ನೋಕಿಯಾ X100 ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಒಳಗೊಂಡಿರಲಿದ್ದು, ಈ ಡಿಸ್‌ಪ್ಲೇಯು 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಡಿಸ್‌ಪ್ಲೇಯು 20:9 ರ ಆಕಾರ ಅನುಪಾತವನ್ನು ಹೊಂದಿರಲಿದೆ. ವಿಡಿಯೋ ವೀಕ್ಷಣೆ ಹಾಗೂ ಗೇಮಿಂಗ್‌ಗೆ ಪೂರಕ ರಚನೆಯನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.

ಜೊತೆಗೆ ಈ ಫೋನ್ 6GB RAM ಮತ್ತು 128GB ಆಂತರಿಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಹೊಂದಿರಲಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿಯನ್ನು 1TB ವರೆಗೆ ವಿಸ್ತರಿಸಲು ಅವಕಾಶ ನೀಡಲಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 480 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್ ಇರಲಿದೆ ಎಂದು ನಿರೀಕ್ಷಿಸಲಾಗಿದೆ.

ಇನ್ನು ನೋಕಿಯಾ X100 ಫೋನಿನ ಕ್ಯಾಮೆರಾ ಫೀಚರ್ಸ್ ನೋಡುವುದಾದರೇ ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ. ಅದರಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಸೆಕೆಂಡರಿ ಕ್ಯಾಮೆರಾವು 5 ಮೆಗಾ ಪಿಕ್ಸೆಲ್ ಆಗಿರಲಿದೆ. ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿರಲಿದೆ. ಇನ್ನು ಸೆಲ್ಫಿಗಾಗಿ, ಫೋನ್ ಡಿಸ್ಪ್ಲೇಯಲ್ಲಿ ಪಂಚ್-ಹೋಲ್ ವಿನ್ಯಾಸದೊಳಗೆ 16 ಮೆಗಾ ಪಿಕ್ಸೆಲ್ ಶೂಟರ್ ಅನ್ನು ನೀಡಲಿದೆ ಎನ್ನಲಾಗಿದೆ.

ನೋಕಿಯಾ X100 ಫೋನ್ 4470mAh ಬ್ಯಾಟರಿಯನ್ನು ಹೊಂದಿರಲಿದ್ದು, ಬಂಡಲ್ ಚಾರ್ಜರ್ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನೋಕಿಯಾ X100 ಫೋನ್ ಆಂಡ್ರಾಯ್ಡ್ 11 ಓಎಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 ಓಎಸ್‌ಗೆ ಅಪ್‌ಡೇಟ್ ಸಪೋರ್ಟ್ ಪಡೆದಿರಲಿದೆ. ಹಾಗೆಯೇ ಈ ಫೋನ್ OZO ಆಡಿಯೋ ತಂತ್ರಜ್ಞಾನವನ್ನು ಹೊಂದಿದ್ದು, ಅದು ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಅನ್ನು ಉತ್ತಮಗೊಳಿಸುತ್ತದೆ. ಇದು 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ.

ಇನ್ನು ನೋಕಿಯಾ ಸಂಸ್ಥೆಯ ಹೊಸ ನೋಕಿಯಾ X100 ಫೋನ್ 6GB RAM/128GB ಸ್ಟೋರೇಜ್ ವೇರಿಯಂಟ್ ಬೆಲೆಯು $252 ಎನ್ನಲಾಗಿದೆ. (ಭಾರತದಲ್ಲಿ ಅಂದಾಜು 18,700ರೂ.) ಎಂದು ಊಹಿಸಲಾಗಿದೆ. ಭಿನ್ನ ಬಣ್ಣಗಳ ಆಯ್ಕೆ ಹೊಂದಿರಲಿದೆ.

ನೋಕಿಯಾ ಕಂಪನಿಯು ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ಬಿಡುಗಡೆ ಮಾಡಿರುವ ನೋಕಿಯಾ XR20 ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಈ ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.67-ಇಂಚಿನ ಫುಲ್ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ನೋಕಿಯಾ XR20 ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಸ್ಟಾಕ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಡ್ಯುಯೆಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ ಈ ಫೋನ್ 4,630mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದೆ. ಅದಕ್ಕೆ ಪೂರಕವಾಗಿ ಈ ಫೊನ್ 18W ವೈರ್ಡ್ ಮತ್ತು 15W ವೈರ್‌ಲೆಸ್ (Qi ಸ್ಟ್ಯಾಂಡರ್ಡ್) ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.


Click it and Unblock the Notifications








