ಶೀಘ್ರವೇ ಮಾರುಕಟ್ಟೆಗೆ ನೋಕಿಯಾ 7 ಸ್ಮಾರ್ಟ್ ಫೋನ್..!
HDM ಗ್ಲೋಬಲ್ ಸಂಸ್ಥೆಯೂ ಮತ್ತೊಂದು ನೋಕಿಯಾ ಫೋನ್ ಲಾಂಚ್ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಮುಂದಿನ 2018ರ ಫೆಬ್ರವರಿಯಲ್ಲಿ ನಡೆಯಲಿರುವ MWC 2017 ಶೋ ನಲ್ಲಿ ಸ್ಮಾರ್ಟ್ ನೋಕಿಯಾ 7 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಸುದ್ದಿ ಲಭ್ಯವಾಗಿದೆ.

ಈಗಾಗಲೇ ನೋಕಿಯಾ 8 ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಈ ಹಿನ್ನಲೆಯಲ್ಲಿ ನೋಕಿಯಾ 7 ಸ್ಮಾರ್ಟ್ ಫೋನ್ ಅನ್ನು ಶೀಘ್ರವೇ ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದರೊಂದಿಗೆ ನೋಕಿಯಾ 9 ಸಹ ಮಾರುಕಟ್ಟೆಗೆ ಬರುವ ಸಾಧ್ಯತೆಗಳಿದೆ.
ಮೊದಲಿಗೆ ಈ ಸ್ಮಾರ್ಟ್ ಫೋನ್ ಗಳು ಚೀನಾ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ನಂತರದಲ್ಲಿ ಇತರೆ ಮಾರುಕಟ್ಟೆಯಲ್ಲಿಯೂ ಸದ್ದು ಶುರು ಮಾಡಲಿದೆ ಎನ್ನಲಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.
ಈ ವರ್ಷದಲ್ಲಿ ನೋಕಿಯಾ ಯಾವುದೇ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿಲ್ಲ. ಈ ಹಿನ್ನಲೆಯಲ್ಲಿ ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಈ ಎರಡು ಸ್ಮಾರ್ಟ್ ಫೋನ್ ಗಳು ಪರಿಚಯಗೊಳ್ಳಲಿದೆ. ನೋಕಿಯಾ 9 ಟಾಪ್ ಎಂಡ್ ಫೋನ್ ಆಗಲಿದ್ದು, ನೋಕಿಯಾ 7 ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ ಆಗಲಿದೆ.
ನೋಕಿಯಾ ಸ್ಮಾರ್ಟ್ ಫೋನ್ ಗಳು ನಿಧಾನವಾಗಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ಎರಡು ಸ್ಮಾರ್ಟ್ ಫೋನ್ ಗಳು ನೋಕಿಯಾಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಸ್ಮಾರ್ಟ್ ಫೋನ್ ಗಳಿಂದ ನೋಕಿಯಾ ಕುಟುಂಬವು ಮತ್ತಷ್ಟು ದೊಡ್ಡದಾಗಲಿದೆ.


Click it and Unblock the Notifications








