Home
ಸುದ್ದಿಜಾಲ

ನೋಕಿಯಾದಿಂದ ಶೀಘ್ರವೇ ಎರಡು ಸ್ಮಾರ್ಟ್ ಫೋನ್ ಗಳು ಲಾಂಚ್.!

By Lekhaka

HMD ಗ್ಲೋಬಲ್ ಸಂಸ್ಥೆಯೂ ನೋಕಿಯಾ ಬ್ರಾಂಡ್ ಸ್ಮಾರ್ಟ್ ಫೋನ್ ಗಳ ಮಾರಾಟದ ಹಕ್ಕನ್ನು ಸಂಪೂರ್ಣವಾಗಿ ಯಶಸ್ವಿಯಾಗಿ ನಿರ್ವಹಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ HMD ಗ್ಲೋಬಲ್ ಸಂಸ್ಥೆ ನೋಕಿಯಾದ ಮತ್ತೇರಡು ಸ್ಮಾರ್ಟ್ ಫೋನ್ ಗಳನ್ನು ಮಾರಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳನ್ನು ಚೀನಾ ಮೂಲಕ ಟೆಕ್ ಸೈಟ್ ಗಳು ವರದಿ ಮಾಡಿವೆ ಎನ್ನಲಾಗಿದೆ.

ನೋಕಿಯಾದಿಂದ ಶೀಘ್ರವೇ ಎರಡು ಸ್ಮಾರ್ಟ್ ಫೋನ್ ಗಳು ಲಾಂಚ್.!

ಜನವರಿ 2018ರಲ್ಲಿ ನೋಕಿಯಾ 9 ಲಾಂಚ್ ಆಗಲಿದ್ದು, ಇದರ ಬೆನ್ನ ಹಿಂದೆಯೇ ಎರಡನೇ ತಲೆಮಾರಿನ ನೋಕಿಯಾ 8 ಸ್ಮಾರ್ಟ್ ಫೋನ್ ಸಹ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ. ಈ ಸ್ಮಾರ್ಟ್ ಫೋನ್ ಗಳು ಸದ್ಯ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್ ಫೋನ್ ಗಳಿಗೆ ಭಾರೀ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ನೋಕಿಯಾ 8 ಸ್ಮಾರ್ಟ್ ಫೋನ್ ಸದ್ಯ ಮಾರುಕಟ್ಟೆಯಲ್ಲಿ ಒನ್ ಪ್ಲಸ್ 5T ಮತ್ತು ಶಿಯೋಮಿ ಮಿ ಮಿಕ್ಸ್ 2 ಸ್ಮಾರ್ಟ್ ಫೋನ್ ಗಳಿಗೆ ನೇರಾ ಸ್ಪರ್ಧೆಯನ್ನು ನೀಡಲಿದೆ. ಅಲ್ಲದೇ ನೋಕಿಯಾ 9 ಸ್ಮಾರ್ಟ್ ಫೋನ್ ಟಾಪ್ ಎಂಡ್ ಫೋನ್ ಗಳಾಗದ ನೋಟ್ 8. ಗ್ಯಾಲೆಕ್ಸಿS8 ಮಾದರಿಯ ಫೋನ್ ಗಳಿಗೆ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಜನವರಿ 19ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನೋಕಿಯಾ 9 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಾದ ನಂತರ ನೋಕಿಯಾ 8 ಲಾಂಚ್ ಆಗಲಿದೆ. ನೋಕಿಯಾ 9 ಸ್ಮಾರ್ಟ್ ಫೋನ್ 5.5 ಇಂಚಿನ 2K ಗುಣಮಟ್ಟದ ಡುಯಲ್ ಎಡ್ಜ್ ಡಿಸೈನ್ ನಲ್ಲಿ ಕಾಣಿಸಿಕೊಳ್ಳಿದೆ.

ನೋಕಿಯಾ 8 ಸ್ಮಾರ್ಟ್ ಫೋನ್ ಫುಲ್ ಸ್ಕ್ರಿನ್ ಡಿಸ್ ಪ್ಲೇಯನ್ನು ಹೊಂದಿರಲಿದೆ. ಅಲ್ಲದೇ 18:9 ಅನುಪಾತದಲ್ಲಿ ಕೂಡಿರಲಿದೆ. ಈ ಎರಡು ಸ್ಮಾರ್ಟ ಫೋನಿನಲ್ಲಿ ಸ್ನಾಪ್ ಡ್ರಾಗನ್ 835 ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ನೋಕಿಯಾ 9 ಎರಡು ಆವೃತ್ತಿಯಲ್ಲಿ ದೊರೆಯಲಿದೆ. ರೂ. 36,000ದ ಅಸುಪಾಸಿನಲ್ಲಿ ಮಾರಾಟವಾಗಲಿದೆ.

Best Mobiles in India

English summary
Nokia 9 and Nokia 8 second-generation model are slated to be launched at an event on January 19, 2018 by HMD.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+