50MP ಸೆಲ್ಫಿ ಕ್ಯಾಮೆರಾ.. 256GB ಸ್ಟೋರೇಜ್.. ಬರಲಿದೆ ಹೊಸ HMD ಫೋನ್! ಯಾವಾಗ ಲಾಂಚ್?
50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 6.56 ಇಂಚಿನ ದೊಡ್ಡ ಡಿಸ್ಪ್ಲೇ, 128GB ಸ್ಟೋರೇಜ್.. ಸ್ಮಾರ್ಟ್‌ಫೋನ್ ಪ್ರಿಯರಿಗೆ ಇಷ್ಟು ಸಾಕು! ಶೀಘ್ರದಲ್ಲೇ ಈ ಹೊಸ HMD ಫೋನ್ ಗ್ರಾಹಕರ ಕೈ ಸೇರಲಿದೆ. ಹೌದು, ಪ್ರಸಿದ್ಧ ಟೆಕ್ ಬ್ರಾಂಡ್ ಹೆಚ್‌ಎಂಡಿ ಗ್ಲೋಬಲ್ (HMD Global) ತನ್ನದೇ ಆದ ಬ್ರ್ಯಾಂಡಿಂಗ್‌ನೊಂದಿಗೆ ಹೊಸ ಮೊಬೈಲ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಹೆಚ್‌ಎಂಡಿ ಪಲ್ಸ್ 2 ಪ್ರೊ (HMD Pulse 2 Pro) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬನ್ನಿ, ಮುಂಬರುವ ಹೊಸ ಫೋನ್ ಯಾವೆಲ್ಲಾ ವಿಶೇಷತೆಗಳನ್ನು ಹೊಂದಿದೆ ತಿಳಿಯೋಣ.
ಕಂಪನಿಯು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ತನ್ನ 'ಪಲ್ಸ್' (Pulse) ಸರಣಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಹೆಚ್‌ಎಂಡಿ ಪಲ್ಸ್ (HMD Pulse), ಹೆಚ್‌ಎಂಡಿ ಪಲ್ಸ್ ಪ್ಲಸ್ (HMD Pulse Plus) ಮತ್ತು ಹೆಚ್‌ಎಂಡಿ ಪಲ್ಸ್ ಪ್ರೊ (HMD Pulse Plus Pro) ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಇದೀಗ, ಕಂಪನಿಯು ಈ ಸರಣಿಯ ಅಡಿಯಲ್ಲಿ ಹೆಚ್‌ಎಂಡಿ ಪಲ್ಸ್ 2 ಪ್ರೊ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಹೆಚ್‌ಎಂಡಿ ಪಲ್ಸ್ 2 ಪ್ರೊ ವಿಶೇಷತೆಗಳೇನು?
ಕಂಪನಿಯು ಹೆಚ್‌ಎಂಡಿ ಪಲ್ಸ್ 2 ಪ್ರೊ ಮೊಬೈಲ್ ಅನ್ನು ಯುನಿಸೊಕ್ T612 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಹೊಸ ಫೋನ್ 6GB ಮತ್ತು 8GB RAM ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಇದು 128GB ಮತ್ತು 256GB ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ವರದಿಯ ಪ್ರಕಾರ, ಕಂಪನಿಯು ಮುಂಬರುವ ಹೆಚ್‌ಎಂಡಿ ಸ್ಮಾರ್ಟ್‌ಫೋನ್ ಹಸಿರು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಮಾರಾಟ ಮಾಡಲಿದೆ.
ಹೆಚ್‌ಎಂಡಿ ಪಲ್ಸ್ 2 ಪ್ರೊ ಫೋನಿನ ಕ್ಯಾಮೆರಾ ಅದ್ಭುತವಾಗಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ನೂತನ ಹೆಚ್‌ಎಂಡಿ ಪಲ್ಸ್ 2 ಪ್ರೊ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿರುತ್ತದೆ. ಹೆಚ್‌ಎಂಡಿ ಪಲ್ಸ್ ಪ್ರೊ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿತ್ತು. ವರದಿಯ ಪ್ರಕಾರ, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ.
ದೊಡ್ಡ ಬ್ಯಾಟರಿ.. 20W ವೇಗದ ಚಾರ್ಜಿಂಗ್
ಕಂಪನಿಯು ಹೆಎಚ್‌ಎಂಡಿ ಪಲ್ಸ್ 2 ಪ್ರೊ ಮೊಬೈಲ್‌ನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸುವ ಸಾಧ್ಯತೆಯಿದೆ. ಇದನ್ನು ಚಾರ್ಜ್ ಮಾಡಲು, 20W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ. ವರದಿಯ ಪ್ರಕಾರ, ಈ ಹೆಚ್‌ಎಂಡಿ ಫೋನನ್ನು ಹೆಚ್‌ಡಿ ಪ್ಲಸ್ ಡಿಸ್ಪ್ಲೇಯಲ್ಲಿ ಬಿಡುಗಡೆ ಮಾಡಲಾಗುವುದು. ಇದು ಐಪಿಎಸ್ ಎಲ್‌ಸಿಡಿ ಪ್ಯಾನೆಲ್ ಆಗಿರಲಿದೆ. ಆದರೆ, ಕಂಪನಿಯು ಈವೆರೆಗೂ ಹೊಸ ಫೋನಿನ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ.
ಹೆಎಚ್‌ಎಂಡಿ ಪಲ್ಸ್ ಪ್ರೊ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ಹೆಎಚ್‌ಎಂಡಿ ಪಲ್ಸ್ ಪ್ರೊ ಮೊಬೈಲ್ 6.65 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1612 × 720 ಪಿಕ್ಸೆಲ್ ರೆಸಲ್ಯೂಶನ್, 90Hz ರಿಫ್ರೆಶ್ ದರ ಮತ್ತು 480 ನಿಟ್ಸ್ ಬ್ರೈಟ್‌ನೆಸ್ ಬೆಂಬಲ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ಹೆಎಚ್‌ಎಂಡಿ ಪಲ್ಸ್ ಪ್ರೊ ಸ್ಮಾರ್ಟ್‌ಫೋನನ್ನು ಯುನಿಸೊಕ್ T606 ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಓಎಸ್‌ನಲ್ಲಿ ಕೆಲಸ ನಿರ್ವಹಿಸುತ್ತದೆ.
ಕ್ಯಾಮೆರಾ ಸೆಟಪ್
ಹೆಎಚ್‌ಎಂಡಿ ಪಲ್ಸ್ ಪ್ರೊ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಇದು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್‌ನೊಂದಿಗೆ ಕೆಲಸ ಮಾಡುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 50 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಕಂಪನಿಯು ಹೆಎಚ್‌ಎಂಡಿ ಪಲ್ಸ್ ಪ್ರೊ ಮೊಬೈಲ್‌ನಲ್ಲಿ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 20W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.


Click it and Unblock the Notifications








