ಮತ್ತೆ ಮಾರುಕಟ್ಟೆಗೆ ನೋಕಿಯಾ 2010 ಸ್ಮಾರ್ಟ್ ಫೋನ್ ಲಾಂಚ್..!

By Precilla Dias

  ಮಾರುಕಟ್ಟೆಗೆ ಮತ್ತೆ ನೋಕಿಯಾ ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ HMD ಗ್ಲೊಬಲ್ ಸಂಸ್ಥೆಯೂ ಹಳೇ ಫೋನ್ ಗಳಿಗೆ ಮರು ಜೀವವನ್ನು ನೀಡಲು ಮುಂದಾಗಿದೆ. ಈಗಾಗಲೇ ಹಲವು ಹಳೇ ನೋಕಿಯಾ ಫೋನ್ ಗಳಿಗೆ ಹೊಸ ರೂಪ ನೀಡಿ ಲಾಂಚ್ ಮಾಡಿರುವ ಮಾದರಿಯಲ್ಲಿ ಮತ್ತೊಂದು ಫೋನ್ ಆದ ನೋಕಿಯಾ 2010 ಪೋನ್ ಅನ್ನು ಮತ್ತೇ ಬಿಡುಗಡೆ ಮಾಡಲು ಮುಂದಾಗಿದೆ.

  ಮತ್ತೆ ಮಾರುಕಟ್ಟೆಗೆ ನೋಕಿಯಾ 2010 ಸ್ಮಾರ್ಟ್ ಫೋನ್ ಲಾಂಚ್..!

  2017ರಲ್ಲಿ ನೋಕಿಯಾ 3310 ಹಾಗೂ 2018ರಲ್ಲಿ ನೋಕಿಯಾ 8110 ಪೋನ್ ಗಳನ್ನು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಮತ್ತೊಂದು ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. 1994ರಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 2010 ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿ ಹಾಕಿತ್ತು. ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಮತ್ತೇ ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

  ಮುಂದಿನ ವರ್ಷ ಈ ಫೋನ್ ಬಿಡುಗಡೆಯಾಗಿ 25ವರ್ಷಗಳಾಗಿದಲಿದೆ ಈ ಹಿನ್ನಲೆಯಲ್ಲಿ ಮತ್ತೆ ಬಿಡುಗಡೆ ಮಾಡಲು ಯೋಜನೆಯನ್ನು ರೂಪಿಸಲಾಗಿದೆ. '4G ಸೇರಿದಂತೆ ಎಲ್ಲಾ ಮಾದರಿಯ ಹೊಸ ಸೇವೆಗಳನ್ನು ಇದರಲ್ಲಿ ಕಾಣಬಹುದಾಗಿದ್ದು, ಫೀಚರ್ ಪೋನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ ಎನ್ನುವ ಮಾಹಿತಿಯು ಲಭ್ಯವಾಗಿದೆ.

  ಅಲ್ಲದೇ ಇದೇ ಮಾದರಿಯಲ್ಲಿ ಹಳೇಯ ನೋಕಿಯಾ ಫೋನ್ ಗಳಿಗೆ ಒಂದೊಂದಾಗಿಯೆ ಹೊಸ ಜೀವನ್ನು ನೀಡಲು HMD ಯೋಜನೆಯನ್ನು ರೂಪಿಸಿದ್ದು, ನೋಕಿಯಾ 1100 ಸಹ ಮತ್ತೆ ಬಂದರೆ ಆಶ್ಚರ್ಯವನ್ನು ಪಡಬೇಕಾಗಿಲ್ಲ. ಇದರೊಂದಿಗೆ ಇನ್ನು ಹಲವು ಸ್ಮಾರ್ಟ್ ಫೋನ್ ಗಳನ್ನು ನೋಕಿಯಾ ಮಾರುಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ.

  ಹೊಸ ಸಿಮ್ ಖರೀದಿಸುವಾಗ ಆದ ಒಂದು ತಪ್ಪಿಗೆ ಜೈಲು ಸೇರಿದ!!.ಎಚ್ಚರ ಇಂತಹ ತಪ್ಪು ಮಾಡಬೇಡಿ!!

  ಎಪ್ರಿಲ್ 4ರಂದು ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ 6, ನೋಕಿಯಾ 7 ಪ್ಲಸ್, ನೋಕಿಯಾ 8 (21018) ಸ್ಮಾರ್ಟ್ ಫೊನ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಹೊಸ ಆಲೆಯನ್ನು ಸೃಷ್ಠಿಸಲಿದೆ ಎನ್ನುವ ಮಾತು ಮಾರುಕಟ್ಟೆಯಲ್ಲಿ ಕೇಳಿ ಬಂದಿದೆ.

  Source

  Read more about:
  English summary
  HMD Global is reportedly working on the revamped version of the iconic Nokia 2010, which was announced in 1994. The modern version of Nokia 2010 is said to launch next year to mark the 25th anniversary of the handset. As for the features, the refreshed Nokia 2010 will have a slightly updated design, a color screen, and 4G LTE connectivity.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more