'ಹಾನರ್ 10 ಲೈಟ್' ಪ್ರೀ ಬುಕ್ ಮಾಡಲು ಮುಗಿಬಿದ್ದ ಯುವಜನತೆ!!

|

ಚೀನಾದಲ್ಲಿ ಬಿಡುಗಡೆಯಾಗಿ ಜನಪ್ರಿಯತೆಗಳಿಸಿದ್ದ ಹುವಾವೆಯ ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ 'ಹಾನರ್ 10 ಲೈಟ್' ಭಾರತದಲ್ಲಿ ಕೇವಲ ಎರಡು ದಿನಗಳ ಹಿಂದಷ್ಟೇ ಭಾರತದಲ್ಲಿ ಬಿಡುಗಡೆ ಕಂಡಿದೆ. ಭಾರತ ಮತ್ತು ಚೀನಾಗಳಲ್ಲಿ ಹೆಚ್ಚು ಸದ್ದು ಮಾಡಿದ್ದ 'ಹಾನರ್ 9 ಲೈಟ್' ಫೋನಿನ ಮುಂದಿನ ಭಾಗವಾಗಿ ಮಾರುಕಟ್ಟೆಗೆ ಕಾಲಿಟ್ಟಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಪೋನ್ ಈಗ ದೇಶದ ಯುವಜನರ ಬೆಸ್ಟ್ ಮೊಬೈಲ್ ಆಯ್ಕೆ ಕೂಡ ಆಗಿದೆ.!

ಹೌದು, 'ಹಾನರ್ 10 ಲೈಟ್' ಇದೇ ತಿಂಗಳು 20ನೇ ತಾರೀಖಿನಿಂದ ಮಾರಾಟಕ್ಕೆ ಬರುತ್ತಿದ್ದು, ಫ್ಲಿಪ್‌ಕಾರ್ಟ್ ಹಾಗೂ ಹುವಾವೆ ಹಾನರ್ ಇಂಡಿಯಾ ವೆಬ್ ತಾಣಗಳಲ್ಲಿ ಮುಂದಿನ ವಾರದಿಂದ ಸ್ಮಾರ್ಟ್‌ಫೋನ್ ಲಭ್ಯವಾಗಲಿದೆ. ಆದರೆ, ಈಗಲೇ ಮುಂಗಡ ಬುಕಿಂಗ್ ಆರಂಭವಾಗಿರುವ ಸ್ಮಾರ್ಟ್‌ಫೋನ್ ಖರೀದಿಗೆ 2,200 ರೂ. ಮೌಲ್ಯದ ಜಿಯೋ ಕ್ಯಾಶ್‌ಬ್ಯಾಕ್ ಹಾಗೂ 2,800 ರೂ. ಮೌಲ್ಯದ ಕ್ಲಿಯರ್‌ಟ್ರಿಪ್ ವೋಚರ್‌ಗಳು ದೊರೆಯುತ್ತಿರುವುದರಿಂದ ಯುವಜನತೆ ಮೊಬೈಲ್ ಖರೀದಿಗೆ ಮುಂದಾಗಿದ್ದಾರೆ.

'ಹಾನರ್ 10 ಲೈಟ್' ಪ್ರೀ ಬುಕ್ ಮಾಡಲು ಮುಗಿಬಿದ್ದ ಯುವಜನತೆ!!

ಚೀನಾ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಮೊಬೈಲ್ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಗೆ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಹಾಗಾದರೆ, ಇಂದು ಭಾರತದಲ್ಲಿ ಲಾಂಚ್ ಆಗಿರುವ ಹಾನರ್ 10 ಲೈಟ್ ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಭಾರತದಲ್ಲಿ ಫೋನ್ ಬೆಲೆಗಳು ಎಷ್ಟು? ಭಾರತದಲ್ಲಿ ಹಾನರ್ 10 ಲೈಟ್ ಫೋನ್ ಬಿಡುಗಡೆ ಯಾವಾಗ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಮಾರ್ಟ್‌ಫೋನ್ ವಿನ್ಯಾಸ!

ಸ್ಮಾರ್ಟ್‌ಫೋನ್ ವಿನ್ಯಾಸ!

ಮಧ್ಯಮ ವರ್ಗದ ಮೊಬೈಲ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಹಾನರ್ ಕಂಪೆನಿ ಬಜೆಟ್ ಬೆಲೆಯ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್‌ಗೆ ಪ್ರೀಮಿಯಮ್ ಟಚ್ ನೀಡಿದೆ. ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಬಹುತೇಕ ಬೆಜೆಲ್ ಲೆಸ್ ಆಗಿದ್ದು, ವಾಟರ್‌ಡ್ರಾಪ್ ಶೈಲಿಯ ನೋಚ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ಲುಕ್ ಅನ್ನು ಹೆಚ್ಚಿಸಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯ ವಿನ್ಯಾಸವನ್ನು ಹೊಂದಿದೆ.

ಡಿಸ್‌ಪ್ಲೇ ಸಾಮರ್ಥ್ಯ

ಡಿಸ್‌ಪ್ಲೇ ಸಾಮರ್ಥ್ಯ

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 21-ಇಂಚಿನ ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಮೊದಲೇ ಹೇಳಿದಂತೆ ಡಿಸ್‌ಪ್ಲೇ ಬಹುತೇಕ ಬೆಜೆಲ್‌ಲೆಸ್ ಆಗಿದೆ. 1080x2340 ಸಾಮರ್ಥ್ಯದ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. 415ppi ಪಿಕ್ಸೆಲ್ ಸಾಂದ್ರತೆಯ ಈ ಡಿಸ್‌ಪ್ಲೇ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವುದು ಇದಕ್ಕೆ ಕಾರಣ ಎನ್ನಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ ಆಕ್ಟಕೋರ್ 'ಹಿಸಿಲಿಕಾನ್ ಕಿರಿನ್ 710' ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB ಮತ್ತು 6GB RAM ವೆರಿಯಂಟ್‌ಗಳೊಂದಿಗೆ 64GB ಮತ್ತು 128GB ಸಂಗ್ರಹಣಾ ಆಯ್ಕೆಗಳನ್ನು ಬಿಡುಗಡೆಯಾಗಿರುವ ಎರಡೂ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ವಿಶೇಷತೆ ಎಂದು ಹೇಳಬಹುದು.

ಕ್ಯಾಮೆರಾಗಳು ಹೇಗಿವೆ?

ಕ್ಯಾಮೆರಾಗಳು ಹೇಗಿವೆ?

'ಹಾನರ್ 10 ಲೈಟ್' ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ f/1.8 ಅಪಾರ್ಚರ್‌ನ 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗೆಯೇ, ಮುಂಭಾಗದಲ್ಲಿ f/2.0 ಅಪಾರ್ಚರ್‌ನೊಂದಿಗೆ 24 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಕ್ಯಾಮೆರಾ ತಂತ್ರಜ್ಞಾನ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3,400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನಲ್ಲಿ 4ಜಿ ವೋಲ್ಟ್, ವೈ-ಫೈ 802.11 802.11, ಬ್ಲೂಟೂತ್ 4.2 ಎಲ್‌ಇ, 3.5 ಎಂಎಂ ಆಡಿಯೋ ಜಾಕ್, ಜಿಪಿಎಸ್ / ಎಜಿಪಿಎಸ್‌ನಂತರ ಸಾಮಾನ್ಯ ಫೀಚರ್ಸ್‌ಗಳನ್ನು ನೋಡಬಹುದು. ಬೆಳಕಿನ ಸಂವೇದಕ, ದಿಕ್ಸೂಚಿ, ಗುರುತ್ವ ಸಂವೇದಕ, ಗೈರೋಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ 162 ಗ್ರಾಂ ತೂಕವನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ.

'ಹಾನರ್ 10 ಲೈಟ್' ಬೆಲೆ ಎಷ್ಟು?

'ಹಾನರ್ 10 ಲೈಟ್' ಬೆಲೆ ಎಷ್ಟು?

ಭಾರತದಲ್ಲಿ ಇಂದು ಬಿಡುಗಡೆಯಾಗಿರುವ 'ಹಾನರ್ 10 ಲೈಟ್' ಸ್ಮಾರ್ಟ್‌ಫೋನಿನ 4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಇರುವ ಆವೃತ್ತಿಯ ಬೆಲೆ 13,999 ರೂ.ಗಳಾಗಿವೆ. ಹಾಗೂ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಮೆಮೊರಿ ಇರುವ ಆವೃತ್ತಿಯ ಬೆಲೆ 17,999 ರೂ.ಗಳಾಗಿವೆ. ಜನವರಿ 20ರಿಂದ ಇದು ಫ್ಲಿಪ್‌ಕಾರ್ಟ್ ಹಾಗೂ ಹಾನರ್ ವೆಬ್ ತಾಣಗಳ ಮೂಲಕ ಲಭ್ಯವಾಗಲಿದೆ ಎಂದು ಕಂಪೆನಿ ಮಾಹಿತಿ ನೀಡಿದೆ.

ಭಾರತದಲ್ಲಿ 9,300 ರೂ.ಗೆ 'ರೆಡ್‌ಮಿ ನೋಟ್ 7' ಬಿಡುಗಡೆ ಫಿಕ್ಸ್!..ಇಲ್ಲಿದೆ ಫುಲ್ ಡೀಟೇಲ್ಸ್!

ಭಾರತದಲ್ಲಿ 9,300 ರೂ.ಗೆ 'ರೆಡ್‌ಮಿ ನೋಟ್ 7' ಬಿಡುಗಡೆ ಫಿಕ್ಸ್!..ಇಲ್ಲಿದೆ ಫುಲ್ ಡೀಟೇಲ್ಸ್!

ಇತ್ತೀಚೆಗಷ್ಟೇ ಚೀನಾದಲ್ಲಿ 48 ಮೆಗಾಪಿಕ್ಸೆಲ್ ಸಾಮರ್ಥ್ಯದ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಆಶ್ಚರ್ಯ ಮೂಡಿಸಿದ್ದ ಶಿಯೋಮಿ ಇದೀಗ ಭಾರತೀಯರಿಗೆ ಭಾರೀ ಸಿಹಿಸುದ್ದಿಯನ್ನು ನೀಡಿದೆ. ಚೀನಾದಲ್ಲಿ 10 ಸಾವಿರದ ಆಸುಪಾಸಿನಲ್ಲಿ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟದ್ದ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್‌ ಬೆಲೆ ಭಾರತದಲ್ಲಿ ಭಾರೀ ಇಳಿಕೆಯಾಗಲಿದೆ.!

ಹೌದು, ಭಾರತದಲ್ಲಿ ಶೀಘ್ರವೇ ರೆಡ್‌ಮಿ ನೋಟ್ 7 ಫೋನ್ ಬಿಡುಗಡೆ ಮಾಡುವ ಸೂಚನೆಯನ್ನು ಶಿಯೋಮಿ ಕಂಪೆನಿ ನೀಡಿದ್ದು, ಶಿಯೋಮಿ ಕಂಪೆನಿಯ ಸಿಇಒ (CEO) 'ಲೀ ಜುನ್' ಅವರು ಹಂಚಿಕೊಂಡಿರುವ ವೈಬೊ ಪೋಸ್ಟ್ ಪ್ರಕಾರ, ಭಾರತ ಸೇರಿದಂತೆ ಜಾಗತಿಕವಾಗಿ ಶಿಯೋಮಿ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಕೇವಲ ಸುಮಾರು 9,300 ರೂ.ಗಳಿಂದ ಆರಂಭವಾಗಲಿದೆ.

'ಲೀ ಜುನ್' ಅವರು ಶೇರ್ ಮಾಡಿರುವ ಫೋಸ್ಟ್‌ನಲ್ಲಿ ಜಾಗತಿಕವಾಗಿ ರೆಡ್‌ಮಿ ನೋಟ್ 7 ಬೆಲೆ 900 ಯುವಾನ್ (ಸುಮಾರು 9,300 ರೂ.) ಮತ್ತು 1000 ಯುವಾನ್(ಸುಮಾರು 10,300 ) ಆಗಿರಲಿದೆ ಎಂದು ಹೇಳಲಾಗಿದೆ. ಆದರೆ, ಜಾಗತಿಕವಾಗಿ ಫೋನ್ ಬಿಡುಗಡೆಯಾಗುವ ಸಮಯವನ್ನು ಮಾತ್ರ ತಿಳಿಸಿಲ್ಲ.! ಹಾಗಾದರೂ, ಇತ್ತೀಚಿಗಷ್ಟೇ ಚೀನಾ ಮೊಬೈಲ್ ಮಾರುಕಟ್ಟೆಗೆ ಎಂಟ್ರಿ ನೀಡಿರುವ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ರೆಡ್‌ಮಿ ನೋಟ್ 7' ಲಾಂಚ್!

'ರೆಡ್‌ಮಿ ನೋಟ್ 7' ಲಾಂಚ್!

ವಿಶ್ವ ಮೊಬೈಲ್ ಮಾರುಕಟ್ಟೆ ಊಹಿಸಲು ಸಾಧ್ಯವಿಲ್ಲದಂತೆ ಶಿಯೋಮಿ ಕಂಪೆನಿ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಾಟರ್ಡ್ರಾಪ್ ನೋಚ್, ಸ್ಲಿಮ್ ಬೆಜೆಲ್, 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಸೇರಿದಂತೆ, 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ಊಹಿಸಲು ಸಾಧ್ಯವಿಲ್ಲದಂತಹ 48MP ಕ್ಯಾಮೆರಾ ಹೊತ್ತು ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ.

'ರೆಡ್‌ಮಿ ನೋಟ್ 7' ವಿನ್ಯಾಸ

'ರೆಡ್‌ಮಿ ನೋಟ್ 7' ವಿನ್ಯಾಸ

ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸದ ಡಿಸ್‌ಪ್ಲೇ, ಡ್ಯುಯಲ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಆಯ್ಕೆ ಸೇರಿದಂತೆ ಹಿಂಬಾಗದಲ್ಲಿ 2.5 ಡಿ ಬಾಗಿದ ಗಾಜಿನ ರಕ್ಷಣೆ ವಿನ್ಯಾಸವನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ. ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳಿಗೂ ಸೆಡ್ಡು ಹೊಡೆಯುವಂತಹ ಲುಕ್‌ನಲ್ಲಿ ಬಿಡುಗಡೆಯಾಗ ಮೊದಲ ಬಜೆಟ್ ಫೋನಿನಂತೆ ಕಾಣುತ್ತಿದೆ.

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಡಿಸ್‌ಪ್ಲೇ !

'ರೆಡ್‌ಮಿ ನೋಟ್ 7' ಫೋನ್ 19.5: 9 ಆಕಾರ ಅನುಪಾತದಲ್ಲಿ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯದ 6.3-ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿರುವ ಡಿಸ್‌ಪ್ಲೇ ವಾಟರ್‌ಡ್ರಾಪ್ ಚಿಕ್ಕ ನೋಚ್ ವಿನ್ಯಾಸವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಇದು ಮಲ್ಟಿಮೀಡಿಯಾ ಪ್ರಿಯರ ಮನಗೆಲ್ಲಲು ಯಶಸ್ವಿಯಾಗಿದೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ 2.2GHz ಸ್ನಾಪ್ಡ್ರಾಗನ್ 660 ಎಸ್‌ಒಸಿ ಪ್ರೊಸೆಸರ್, ಅಡ್ರಿನೋ 512 ಗ್ರಾಫಿಕ್ಸ್, ಮತ್ತು 3 ಜಿಬಿ, 4 ಜಿಬಿ, ಮತ್ತು 6 ಜಿಬಿ RAM ಆಯ್ಕೆಗಳೊಂದಿಗೆ ಬಿಡುಗಡೆಯಾಗಿದೆ. 32GB ಮತ್ತು 64GB ಮೆಮೊರಿ ಆಯ್ಕೆಗಳ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿಯನ್ನು 256GB ವರೆಗೆ ವಿಸ್ತರಿಸುವ ಆಯ್ಕೆಯೂ ಸಹ ಲಭ್ಯವಿದೆ.

48MP ಕ್ಯಾಮೆರಾ!

48MP ಕ್ಯಾಮೆರಾ!

ಶಿಯೋಮಿ ಕಂಪೆನಿ ಇದೇ ಮೊದಲ ಬಾರಿಗೆ 48MP ಸಾಮರ್ಥ್ಯದ ಕ್ಯಾಮೆರಾವನ್ನು ತನ್ನ ಸ್ಮಾರ್ಟ್‌ಪೋನಿನಲ್ಲಿ ಅಳವಡಿಸಿದೆ. 48 ಮೆಗಾಪಿಕ್ಸೆಲ್ ಸೋನಿ IMX586 ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬಾಗದಲ್ಲಿ ನೀಡಲಾಗಿದೆ. ಡ್ಯುಯಲ್-ಎಲ್ಇಡಿ ಫ್ಲಾಶ್ ಬೆಂಬಲ, ಪಿಡಿಎಎಫ್ ಅನ್ನು ಸಹ ಹಿಂಬಾಗದಲ್ಲಿ ನೋಡಬಹುದಾಗಿದೆ.

13MP ಸೆಲ್ಫಿ ಕ್ಯಾಮೆರಾ!

13MP ಸೆಲ್ಫಿ ಕ್ಯಾಮೆರಾ!

ಹಿಂಬಾಗದಲ್ಲಿ 48MP+5MP ಸಾಮರ್ಥ್ಯದ ಕ್ಯಾಮೆರಾಗಳನ್ನು ಹೊಂದಿರುವ 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಪೊರ್ಟ್ರೇಟ್ ಮೋಡ್, , ಹೆಚ್‌ಡಿಆರ್, ಎಐ ಫೇಸ್ ಅನ್ಲಾಕ್, ಎಐ ಸ್ಮಾರ್ಟ್ ಬ್ಯೂಟಿ, ಎಐ ಸಿಂಗಲ್ ಶಾಟ್ ಬ್ಲರ್, ಫ್ರಂಟ್ ಹೆಚ್‌ಡಿಆರ್‌ನಂತಹ ವಿಶೇಷತೆಗಳನ್ನು ಈ ಕ್ಯಾಮೆರಾ ತಂತ್ರಜ್ಞಾನದಲ್ಲಿವೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಕ್ವಿಕ್ ಚಾರ್ಜ್ 4 ತಂತ್ರಜ್ಞಾನ ಬೆಂಬಲದೊಂದಿಗೆ 4,000 mAh ಬ್ಯಾಟರಿಯನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ. ಇದು 251 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯ, 23 ಗಂಟೆಗಳ ಟಾಕ್ ಟೈಮ್, 13 ಗಂಟೆಗಳ ವೀಡಿಯೋ ಪ್ಲೇಬ್ಯಾಕ್, ಮತ್ತು 7 ಗಂಟೆಗಳ ಗೇಮಿಂಗ್‌ವರೆಗೆ ಬ್ಯಾಟರಿ ಸಾಮರ್ಥ್ಯವನ್ನು ನೀಡಲಿದೆ ಎಂದು ಶಿಯೋಮಿ ಕಂಪೆನಿ ಹೇಳಿಕೊಂಡಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

ಟೈಪ್ ಸಿ ಪೋರ್ಟ್, 3.5mm ಆಡಿಯೋ ಜ್ಯಾಕ್, 4ಜಿ ವೋಲ್ಟ್, ಜಿಪಿಎಸ್, ಎಜಿಪಿಎಸ್, ಗ್ಲೋನಾಸ್, ಬ್ಲೂಟೂತ್ ವಿ5, ಮತ್ತು ವೈ-ಫೈ 802.11 ಎ / ಬಿ / ಜಿ / ಎನ್ / ಎಸಿ. ಸೇರಿದಂತೆ 450 ನಿಟ್ಸ್ ಬ್ರೈಟ್ನೆಸ್, 84 ಶೇಕಡಾ ಎನ್ ಟಿ ಎಸ್ ಸಿ ಕಲರ್ ಗ್ಯಾಮೆಟ್‌ನಂತಹ ಇತ್ತೀಚಿನ ಹಲವು ನೂತನ ತಂತ್ರಜ್ಞಾನಗಳನ್ನು 'ರೆಡ್‌ಮಿ ನೋಟ್ 7' ಸ್ಮಾರ್ಟ್‌ಪೋನಿನಲ್ಲಿ ತರಲಾಗಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಚೀನಾದಲ್ಲಿ ಮಾತ್ರ ಮೊದಲು ಬಿಡುಗಡೆಯಾಗಿದ್ದ 'ರೆಡ್‌ಮಿ ನೋಟ್ 7' ಪೋನ್ ಬೆಲೆ '999 CNY' ( 10,200 ರೂ.)ಗಳಿಂದ ಆರಂಭವಾಗಿತ್ತು.. 3GB RAM + 32GB ಫೋನ್ ಬೆಲೆ '999 ಸಿಎನ್‌ವೈ'( 10,200 ರೂ.)ಗಳಾದರೆ, 4GB RAM + 64GB ಫೋನ್ ಬೆಲೆ CNY 1,199 (ರೂ. 12,400)ಗಳಾಗಿದ್ದವು. ಈಗ ಭಾರತದಲ್ಲಿ ಇದಕ್ಕಿಂತಲೂ ಕಡಿಮೆ ಬೆಲೆಗೆ ರೆಡ್‌ ಮಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿದೆ.

Best Mobiles in India

English summary
Honor 10 Lite review: Attractive design and display at an affordable price. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X