Home
ಸುದ್ದಿಜಾಲ

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹಾನರ್ 100 ಫೋನ್‌ ಸರಣಿ...ಮಸ್ತ್ ಕ್ಯಾಮೆರಾ!

ಜನಪ್ರಿಯ ಹಾನರ್ ಮೊಬೈಲ್‌ ಸಂಸ್ಥೆಯು ಈ ವರ್ಷದ ಆರಂಭದಲ್ಲಿ ಹಾನರ್90 ಮತ್ತು ಹಾನರ್ 90 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿತ್ತು. ಅದರ ಮುಂದುವರಿದ ಭಾಗವಾಗಿ ಸಂಸ್ಥೆಯು ಈಗ ಹಾನರ್ 100 ಸರಣಿಯನ್ನು ಅನಾವರಣ ಮಾಡಿದ್ದು, ಈ ನೂತನ ಸರಣಿಯು ಹಾನರ್ 100 ಹಾಗೂ ಹಾನರ್ 100 ಪ್ರೊ ಹೆಸರಿನ ಎರಡು ಮಾಡೆಲ್‌ಗಳನ್ನು ಒಳಗೊಂಡಿದೆ.

ಹೌದು, ಹಾನರ್ ಮೊಬೈಲ್ ಸಂಸ್ಥೆಯು ಚೀನಾದಲ್ಲಿ ಹೊಸದಾಗಿ ಹಾನರ್ 100 ಹಾಗೂ ಹಾನರ್ 100 ಪ್ರೊ ಫೋನ್‌ಗಳನ್ನು ಅನಾವರಣ ಮಾಡಿದೆ. ಹಾನರ್ 100 ಫೋನ್‌ ಸ್ನ್ಯಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಪಡೆದಿದ್ದರೆ, ಹಾನರ್ 100 ಪ್ರೊ ಫೋನ್‌ ಸ್ನಾಪ್‌ಡ್ರಾಗನ್ 8 ಸರಣಿಯನ್ನು ಪಡೆದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹಾನರ್ 100 ಫೋನ್‌ ಸರಣಿ...ಮಸ್ತ್ ಕ್ಯಾಮೆರಾ!

ಸಂಸ್ಥೆಯ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ಲಾಸ್ ಬ್ಲ್ಯಾಕ್, ಮೂನ್ ಶಾಡೋ ವೈಟ್, ಮೊನೆಟ್ ಪರ್ಪಲ್ ಮತ್ತು ಬಟರ್‌ಫ್ಲೈ ಬ್ಲೂ ಕಲರ್‌ ಶೇಡ್‌ಗಳ ಆಯ್ಕೆ ಪಡೆದಿವೆ. ಹಾಗೆಯೇ ಈ ಎರಡು ಫೋನ್‌ಗಳು 12 GB RAM + 256 GB, 16 GB RAM + 256GB ಹಾಗೂ 16 GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿವೆ. ಉಳಿದಂತೆ ಈ ಎರಡು ಫೋನ್‌ಗಳ ಇತರೆ ಫೀಚರ್ಸ್ ಮುಂದೆ ತಿಳಿಯೋಣ ಬನ್ನಿರಿ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹಾನರ್ 100 ಫೋನ್‌ ಸರಣಿ...ಮಸ್ತ್ ಕ್ಯಾಮೆರಾ!

ಡಿಸ್‌ಪ್ಲೇ ಡಿಸೈನ್ ಹಾಗೂ ರಚನೆ

ಹಾನರ್ 100 ಮತ್ತು ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ಗಳು ಭಿನ್ನ ವಿನ್ಯಾಸಗಳನ್ನು ಹೊಂದಿವೆ. ಈ ಎರಡು ವೇರಿಯಂಟ್‌ಗಳು ಕರ್ವ್ಡ್ ಮಾದರಿಯ OLED ಡಿಸ್‌ಪ್ಲೇ ಪಡೆದಿದ್ದರೂ, ತಮ್ಮ ಮುಂಭಾಗದ ಕ್ಯಾಮೆರಾ ರಚನೆಯಲ್ಲಿ ಭಿನ್ನತೆ ಪಡೆದಿವೆ. ಹಾನರ್ 100 ಒಂದೇ ಪಂಚ್ ಹೋಲ್ ಅನ್ನು ಹೊಂದಿದ್ದು, ಹಾನರ್ 100 ಪ್ರೊ ಫೋನ್ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸಿಸ್ಟಮ್ ಗಾಗಿ ಮಾತ್ರೆ ಆಕಾರದ ರಚನೆ ಪಡೆದಿದೆ.

ಹಾನರ್ 100 ಫೋನ್‌ 6.7 ಇಂಚಿನ OLED ಪ್ಯಾನೆಲ್ ಅನ್ನು ಪಡೆದಿದ್ದು, ಹಾನರ್ 100 ಪ್ರೊ 6.78 ಇಂಚಿನ OLED ಸ್ಕ್ರೀನ್‌ ರಚನೆ ಅನ್ನು ಹೊಂದಿದೆ. ಈ ಎರಡೂ ಡಿಸ್‌ಪ್ಲೇಗಳು 1.5K ರೆಸಲ್ಯೂಶನ್, 120Hz ರಿಫ್ರೆಶ್ ರೇಟ್‌ ಪಡೆದಿವೆ ಹಾಗೆಯೇ, 3840Hz PWM ಬ್ಲರ್ ಮತ್ತು 2,600 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಕೂಡಾ ಪಡೆದಿವೆ.

ಪ್ರೊಸೆಸರ್‌ ಪವರ್ ಮಾಹಿತಿ

ಹಾನರ್ 100 ಮತ್ತು ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ಗಳು ಭಿನ್ನ ಪ್ರೊಸೆಸರ್‌ ಪವರ್ ಹೊಂದಿವೆ. ಹಾನರ್ 100 ಫೋನ್‌ ಸ್ನ್ಯಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ ಪಡೆದಿದ್ದರೆ, ಹಾನರ್ 100 ಪ್ರೊ ಫೋನ್‌ ಸ್ನಾಪ್‌ಡ್ರಾಗನ್ 8 ಸರಣಿಯನ್ನು ಪಡೆದಿದೆ.

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹಾನರ್ 100 ಫೋನ್‌ ಸರಣಿ...ಮಸ್ತ್ ಕ್ಯಾಮೆರಾ!

ಕ್ಯಾಮೆರಾ ಸೆನ್ಸಾರ್ ಮಾಹಿತಿ

ಹಾನರ್ 100 ಮತ್ತು ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಆಕರ್ಷಕ ಎನಿಸುವಂತಿವೆ. ಹಾನರ್ 100 ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಪಡೆದಿದ್ದು, ಮುಂಭಾಗದಲ್ಲಿ ಸಿಂಗಲ್ ಸೆಲ್ಫಿ ಕ್ಯಾಮೆರಾ ರಚನೆ ಪಡೆದಿದೆ. ಇನ್ನು ಹಾನರ್ 100 ಪ್ರೊ ಫೋನ್‌ ಸಹ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಮುಖ್ಯ ಕ್ಯಾಮೆರಾ ಪಡೆದಿದ್ದು, ಮುಂಭಾಗದಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ರಚನೆ ಒಳಗೊಂಡಿದೆ.

ಬ್ಯಾಟರಿ ಸಾಮರ್ಥ್ಯ

ಹಾನರ್ 100 ಫೋನ್‌ 5,450mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, 100W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದಿದೆ. ಇನ್ನು ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬಲ ಪಡೆದಿದ್ದು, ಇದು 100W ಚಾರ್ಜಿಂಗ್ ಸೌಲಭ್ಯದ ಜೊತೆಗೆ 66W ವಾಯರ್‌ಲೆಸ್‌ ಚಾರ್ಜಿಂಗ್ ಸಫೋರ್ಟ್‌ ಕೂಡಾ ಪಡೆದಿದೆ.

Best Mobiles in India

English summary
Honor 100 and Honor 100 Pro launches in China. specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+