ಹಾನರ್ 100 ಸರಣಿ ಸ್ಮಾರ್ಟ್‌ಫೋನ್ ಎಂಟ್ರಿಗೆ ಮುಹೂರ್ತ ಫಿಕ್ಸ್! ಡಿಸೈನ್ ಹೇಗಿದೆ?
ಹಾನರ್ 100 ಸರಣಿಯ ಬಗ್ಗೆ ಸಾಕಷ್ಟು ಹೈಫ್ ಕ್ರಿಯೆಟ್ ಆಗಿದೆ. ಇದೇ ಕಾರಣಕ್ಕೆ ಹಾನರ್ 100 ಸರಣಿ ಸ್ಮಾರ್ಟ್‌ಫೋನ್‌ಗಳ ರಚನೆ ವಿನ್ಯಾಸದ ಬಗ್ಗೆ ಅನೇಕ ವದಂತಿಗಳು ಕೂಡ ಹರಿದಾಡುತ್ತಿವೆ. ಇದೆಲ್ಲದರ ನಡುವೆ ಇದೀಗ ಅಧಿಕೃತವಾಗಿ ಹಾನರ್ 100 ಸರಣಿ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಇದೇ ನವೆಂಬರ್ 23 ರಂದು ಲಾಂಚ್ ಆಗಲಿದೆ.
ಹೌದು, ಹಾನರ್ 100 ಸರಣಿ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.ಈ ಸರಣಿಯಲ್ಲಿ ಹಾನರ್ 100 ಹಾಗೂ ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುವ ನಿರೀಕ್ಷೆಯಿದೆ. ಇದರಲ್ಲಿ ಹಾನರ್ 100 ಪ್ರೊ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ನಿರೀಕ್ಷೆ ಇಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಹಾನರ್ 100 ಪ್ರೊ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ ನಿರೀಕ್ಷೆ?
ಹಾನರ್ 100 ಪ್ರೊ ಸ್ಮಾರ್ಟ್‌ಫೋನ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1224 x 2700 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರುವ ನಿರೀಕ್ಷೆಯಿದೆ. ಇನ್ನು ಡಿಸ್‌ಪ್ಲೇ 20.5:9 ರಚನೆಯ ಅನುಪಾತದೊಂದಿಗೆ ಬರಲಿದೆ ಎನ್ನಲಾಗಿದೆ.
ಹಾನರ್ 100 ಪ್ರೊ ಪ್ರೊಸೆಸರ್ ಯಾವುದು?
ಹಾನರ್ 100 ಪ್ರೊ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಮ್ಯಾಜಿಕ್ಓಎಸ್ 7.1 UI ಜೊತೆಗೆ ಬಾಕ್ಸ್‌ನ ಹೊರಗೆ ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಸಾಮರ್ಥ್ಯದಲ್ಲಿ ಬರಲಿದೆ. ಇದರೊಂದಿಗೆ ಮೆಮೊರಿ ಕಾರ್ಡ್ ಆಯ್ಕೆಯನ್ನು ನೀಡಲಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಹಾನರ್ 100 ಪ್ರೊ ಕ್ಯಾಮೆರಾ ಸೆಟ್‌ಅಪ್ ಏನಿದೆ?
ಹಾನರ್ 100 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸೆನ್ಸಾರ್ ಇರಲಿದೆ ಎನ್ನಲಾಗಿದೆ. ಇದಲ್ಲದೆ 50 ಮೆಗಾಪಿಕ್ಸೆಲ್ ಸೆನ್ಸಾರ್ ಹಾಗೂ 2ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ನೀಡಲಾಗಿದೆ.
ಹಾನರ್ 100 ಪ್ರೊ ಬ್ಯಾಟರಿ ಮತ್ತು ಇತರೆ ಸಾಮರ್ಥ್ಯ
ಹಾನರ್ 100 ಪ್ರೊ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ನಿರೀಕ್ಷೆಯಿದೆ. ಇದು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.3, ಯುಎಸ್‌ಬಿ ಟೈಪ್ ಸಿ, ಮಾಸ್ ಸ್ಟೋರೇಜ್ ಡಿವೈಸ್, ಯುಎಸ್‌ಬಿ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ಲೈಟ್ ಸೆನ್ಸಾರ್, ಪ್ರಾಕ್ಸಿಮಿಟಿ ಸೆನ್ಸಾರ್, ಅಕ್ಸಿಲೆರೋಮೀಟರ್, ಕಂಪಾಸ್, ಗೈರೋಸ್ಕೋಪ್ ಅನ್ನು ಹೊಂದಿರಲಿದೆ.

ಹಾನರ್ 100 ಪ್ರೊ ಬೆಲೆ ಮತ್ತು ಲಭ್ಯತೆ
ಹಾನರ್ 100 ಪ್ರೊ ಸ್ಮಾರ್ಟ್‌ಫೋನ್ ನವೆಂಬರ್ 23 ರಂದು ಬಿಡುಗಡೆ ಆಗುವುದು ಪಕ್ಕಾ ಆಗಲಿದೆ. ಮೊದಲಿಗೆ ಈ ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆ ಆಗಲಿದ್ದು, ಮುಂಬರುವ ದಿನಗಳಲ್ಲಿ ಭಾರತಕ್ಕೂ ಕೂಡ ಎಂಟ್ರಿ ನೀಡುವ ನಿರೀಕ್ಷೆ ಇಡಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಈ ಸ್ಮಾರ್ಟ್‌ಫೋನ್ ವೈಟ್ ಅಂಡ್ ಪರ್ಪಲ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ.


Click it and Unblock the Notifications








