Home
ಸುದ್ದಿಜಾಲ

Honor...ಭಾರತದಲ್ಲಿ ಶೀಘ್ರವೇ Honor 200 ಸರಣಿ ಮೊಬೈಲ್ ಲಾಂಚ್; ಮಾಹಿತಿ ದೃಢಪಡಿಸಿದ ಅಮೇಜಾನ್

ಹಾನನರ್ ಇತ್ತೀಚಿನ ದಿನಗಳಲ್ಲಿ ತನ್ನ Honor 200 ಮತ್ತು Honor 200 Pro ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ಕುರಿತು ಮಾರುಕಟ್ಟೆಯಲ್ಲಿ ಬಹಳ ಸದ್ದು ಮಾಡುತ್ತಿದೆ. ಇದೀಗ ಈ ಎರಡು ವೇರಿಯಂಟ್‌ಗಳು ಭಾರತದಲ್ಲಿ ಶೀಘ್ರವೇ ಬಿಡುಗಡೆಯಾಗಲಿವೆ ಎಂಬುದನ್ನು ಅಮೆಜಾನ್‌ನಲ್ಲಿ ಮೀಸಲಿಟ್ಟಿರುವ ಮೈಕ್ರೋಸೈಟ್ ದೃಢಪಡಿಸಿದೆ. HTech ಸಂಸ್ಥೆ ಅಧಿಕೃತವಾಗಿ ಈ 2 ಸಾಧನಗಳಿಗೆ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ, ಅಮೆಜಾನ್ ಪಟ್ಟಿಯು ಭಾರತಕ್ಕೆ " ಶೀಘ್ರದಲ್ಲೇ ಬರಲಿದೆ" ಎಂದು ಹೇಳುತ್ತದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್ ಹೊಂದಿರಬಹುದು ಎಂದು ಈ ಲೇಖನದ ಮೂಲ ತಿಳಿದುಕೊಳ್ಳೋಣ.

Honor 200 ಸರಣಿಯ ವಿಶೇಷತೆಗಳು:

ಇದರ ಭಾರತೀಯ ಆವೃತ್ತಿಯ ವಿಶೇಷತೆಗಳ ಕುರಿತು ಯಾವುದೇ ಅಧಿಕೃತ ಮಾಹಿತಿ ನಮಗೆ ಇನ್ನೂ ದೊರಕಿಲ್ಲ ಆದರೆ, ಫೋನ್‌ಗಳ ಚೈನೀಸ್ ಆವೃತ್ತಿಯ ನೋಟವು ಭಾರತಕ್ಕೆ ಬರಬಹುದಾದ ಸಾಧನಗಳ ಕುರಿತು ನಮಗೆ ಸ್ವಲ್ಪ ಸ್ಪಷ್ಟತೆಯನ್ನು ನೀಡಿದೆ.

ಭಾರತದಲ್ಲಿ ಶೀಘ್ರವೇ Honor 200 ಸರಣಿ ಮೊಬೈಲ್ ಲಾಂಚ್!

Honor 200 ಇದು 2664 x 1200 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ ಫುಲ್ HD+ ಬಾಗಿದ OLED ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ 100% DCI-P3 ಬಣ್ಣದ ಹರವು, 4,000 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್ ಮತ್ತು 3,840Hz PWM ಮಬ್ಬಾಗಿಸುವಿಕೆಯನ್ನು ಒಳಗೊಂಡಿದೆ.

ಇದು 4nm ಪ್ರಕ್ರಿಯೆಯ ಆಧಾರದ ಮೇಲೆ Qualcomm Snapdragon 7 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಎಲ್ಲಾ ಗ್ರಾಫಿಕ್ಸ್ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು Adreno 720 GPU ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ 16GB RAM ಮತ್ತು 512GB ಸ್ಟೋರೆಜ್ ಜೊತೆಗೆ ಬರಲಿದೆ.

ಕ್ಯಾಮೆರಾ:

ಇದರ ವೆನಿಲ್ಲಾ ರೂಪಾಂತರವು OIS ಜೊತೆಗೆ 50MP Sony IMX906 ಪ್ರಾಥಮಿಕ ಸೆನ್ಸಾರ್, ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಜೊತೆಗೆ 112° ಫೀಲ್ಡ್ ಆಫ್ ವ್ಯೂ (FoV) ಮತ್ತು 2.5x ಜೊತೆಗೆ 50MP ಟೆಲಿಫೋಟೋ ಲೆನ್ಸ್ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗೆ ಸಂಬಂಧಿಸಿದ ಅಗತ್ಯತೆಗಳನ್ನು ನಿರ್ವಹಿಸಲು ಮುಂಭಾಗದಲ್ಲಿ 50MP Sony IMX906 ಸೆನ್ಸಾರ್ ಕ್ಯಾಮೆರಾ ಹೊಂದಿದೆ.

100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,200mAh ಬ್ಯಾಟರಿಯಿಂದ ಸ್ಮಾರ್ಟ್‌ಫೋನ್ ಚಾಲಿತವಾಗಿದೆ. Honor 200 ಆಂಡ್ರಾಯ್ಡ್ 14 ಆಧಾರಿತ ಮ್ಯಾಜಿಕ್ OS 8.0 ನಲ್ಲಿ ಕಾರ್ಯನಿರ್ವಹಿಸುತ್ತದೆ.

Honor 200 Pro ವಿಶೇಷತೆಗಳು:

ಪ್ರೋ ಮಾದರಿಯು ಚೀನಾದಲ್ಲಿ 6.78 ಇಂಚಿನ OLED ಪ್ಯಾನೆಲ್‌ ಜೊತೆಗೆ ಅದರ ವೆನಿಲ್ಲಾ ರೂಪಾಂತರದೊಂದಿಗೆ ಪ್ರಾರಂಭಿಸಲಾಯಿತು. ಇದು 16GB RAM ಮತ್ತು 1TB ಸಂಗ್ರಹಣೆ ಜೊತೆಗೆ ಬರುತ್ತದೆ. ಇತ್ತೀಚಿನ Honor ಸಾಧನವು Qualcomm Snapdragon 8s Gen 3 ಚಿಪ್‌ಸೆಟ್‌ನಿಂದ ರನ್ ಆಗಲಿದೆ. ಮತ್ತು ಎಲ್ಲಾ ಗ್ರಾಫಿಕ್ಸ್ ಸಂಬಂಧಿತ ಕಾರ್ಯಗಳನ್ನು ನಿರ್ವಹಿಸಲು Adreno 735 GPU ನೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ:

ಇದು 50MP Omnvision OV50H ಸೆನ್ಸಾರ್, 12MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಲೆನ್ಸ್ ಸೆಟಪ್‌ನೊಂದಿಗೆ ಹಿಂಭಾಗಕ್ಕೆ ಟ್ರಿಪಲ್ ಕ್ಯಾಮೆರಾ ಸೆಟಪ್ ಇದೆ. ವೆನಿಲ್ಲಾ ರೂಪಾಂತರದಂತೆಯೇ, ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 50MP ಮುಂಭಾಗದ ಶೂಟರ್ ಕೂಡ ಇದೆ.

Honor 200 ಸರಣಿಯ ನಿರೀಕ್ಷಿತ ಬೆಲೆ:

Honor 200 ವೆನಿಲ್ಲಾ ವೇರಿಯಂಟ್ ಅನ್ನು 12GB RAM/256GB ಸ್ಟೋರೇಜ್ ರೂಪಾಂತರಕ್ಕಾಗಿ 2699 ಯುವಾನ್ ಅಂದರೆ ಅಂದಾಜು ₹31,000 ಬೆಲೆಗೆ ಚೀನಾದಲ್ಲಿ ಬಿಡುಗಡೆ ಮಾಡಲಾಯಿತು, ಆದರೆ 16GB RAM ಮತ್ತು 512GB ಸ್ಟೋರೇಜ್ ಹೊಂದಿರುವ ಟಾಪ್ ರೂಪಾಂತರವು 3199 ಯುವಾನ್ (ಅಂದಾಜು ₹37,000) ಬೆಲೆ ಹೊಂದಿರಲಿದೆ.

Honor 200 Pro ಇದರ 12GB RAM/256GB ಸ್ಟೋರೇಜ್ ರೂಪಾಂತರವು 3,499 ಯುವಾನ್ (ಸುಮಾರು ₹ 40,000) ದರದಲ್ಲಿ ಪ್ರಾರಂಭವಾಯಿತು. 16GB RAM/1TB ಸಂಗ್ರಹಣೆಯ ಟಾಪ್ ರೂಪಾಂತರವು 4,499 ಯುವಾನ್ (ಸುಮಾರು ₹ 51,000) ಬೆಲೆ ಹೊಂದಿದೆ.

Best Mobiles in India

English summary
A dedicated microsite on Amazon has confirmed that these two variants, Honor 200 and Honor 200 Pro, will soon be launched in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+