ಹಾನರ್‌ ಸಂಸ್ಥೆಯಿಂದ ''ಹಾನರ್‌20e'' ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಚೀನಾ ಮೂಲದ ಸ್ಮಾರ್ಟಫೋನ್‌ ತಯಾರಕ ಹಾನರ್‌ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದಲೇ ಗ್ರಾಹಕರಿಂದ ಸೈ ಎನಿಸಿಕೊಂಡಿರುವ ಹಾನರ್‌ ಪ್ರತಿ ಭಾರಿಯು ಹೊಸ ನಿರೀಕ್ಷೆಯನ್ನ ಹುಟ್ಟುಹಾಕುತ್ತಲೇ ಇದೆ. ಸದ್ಯ ಇದೀಗ ಬಿಡುಗಡೆ ಆಗಿರುವ ಹಾನರ್‌ 9x ಲೈಟ್‌ ಮತ್ತು ಹಾನರ್‌ 20e ಸ್ಮಾರ್ಟ್‌ಫೋನ್‌ಗಳು ಹೊಸ ವಿನ್ಯಾಸದ ಜೊತೆಗೆ ಹೊಸ ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಹೌದು

ಹೌದು, ಚೀನಾದ ಟೆಕ್‌ ದೈತ್ಯ ಹುವಾವೇ ಸಬ್‌ ಬ್ರ್ಯಾಂಡ್‌ ಹಾನರ್‌ ತನ್ನ ಹೊಸ ಹಾನರ್‌ 9x ಲೈಟ್‌ ಮತ್ತು ಹಾನರ್‌ 20e ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಹಾನರ್‌ 20e ಸ್ಮಾರ್ಟ್‌ಫೋನ್‌ ಹೊಸ ವಿನ್ಯಾಸವನ್ನ ಹೊಂದಿದ್ದು, ಆಕರ್ಷಕ ಮಾದರಿಯನ್ನ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್‌ ಪ್ರೊಸೆಸರ್‌ ವೇಗವನ್ನ ಪಡೆದುಕೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ ಡಿಸೈನ್‌

ಡಿಸ್‌ಪ್ಲೇ ಡಿಸೈನ್‌

ಇನ್ನು ಈ ಸ್ಮಾರ್ಟ್‌ಫೋನ್‌ 1,080x2,340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.21 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇದು ಫುಲ್‌ ಹೆಚ್‌ಡಿ ಪ್ಲಸ್‌ IPS ಸ್ಕ್ರೀನ್‌ ಅನ್ನು ಒಳಗೊಂಡಿದೆ. ಇನ್ನು ಈ ಡಿಸ್‌ಪ್ಲೇಯು 19.5:9 ರಚನೆಯ ಅನುಪಾತವನ್ನ ಹೊಂದಿದೆ. ಇನ್ನು ಪಿಪಿಐ ಪಿಕ್ಸೆಲ್‌ ಸಾಂದ್ರತೆ ಕೂಡ ಉತ್ತಮವಾಗಿದ್ದು, ಗರಿಷ್ಠ ನೀಟ್‌ಗಳನ್ನ ಒಳಗೊಂಡ ಬ್ರೈಟ್‌ನೆಶ್‌ ಅನ್ನು ನೀಡಲಿದೆ. ಅಲ್ಲದೆ ವೀಡಿಯೋ ವೀಕ್ಷಣೆ ಹಾಗೂ ವೀಡಿಯೋ ಕರೆಗಳಿಗೆ ಯೋಗ್ಯವಾದ ಮಾದರಿಯ ಡಿಸ್‌ಪ್ಲೇಯನ್ನ ಹೊಂದಿದೆ

ಪ್ರೊಸೆಸರ್‌

ಪ್ರೊಸೆಸರ್‌

ಹಾನರ್‌ 20e ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್‌ ಹಿಸಿಲಿಕಾನ್‌ ಕಿರಿನ್‌710F ಪ್ರೊಸೆಸರ್‌ ವೇಗವನ್ನ ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 9 ಸಹಯೋಗದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಒಳಗೊಂಡಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನ 512GB ವರೆಗೆ ವಿಸ್ತರಿಸಬಹುದಾದ ಅವಕಾಶವನ್ನು ಸಹ ನೀಡಲಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 24 ಮೆಗಾಪಿಕ್ಸೆಲ್ ಸೆನ್ಸಾರ್‌ f/ 1.8 ಲೆನ್ಸ್‌ ಅನ್ನು ಹೊಮದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ f/ 2.4 ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ f/ 2.4 ಲೆನ್ಸ್‌ ಕ್ಯಾಮೆರಾ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಟಚ್‌ ಟು ಫೋಕಸ್‌, ಎಲ್‌ಇಡಿ ಫ್ಲ್ಯಾಷ್‌, ಅನ್ನು ಸಹ ಹೊಂದಿದೆ.

ಬ್ಯಾಟರಿ ಮತ್ತು ಲಭ್ಯತೆ

ಬ್ಯಾಟರಿ ಮತ್ತು ಲಭ್ಯತೆ

ಹಾನರ್ 20e ಸ್ಮಾರ್ಟ್‌ಫೋನ್‌ 3,400mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 10W ಚಾರ್ಜಿಂಗ್‌ಗೆ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, ಬ್ಲೂಟೂತ್ ವಿ 4.2,NFC ಮತ್ತು ಜಿಪಿಎಸ್ ಹೊಂದಿದೆ. ಅಲ್ಲದೆ ರಿಯರ್‌ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಬೆಲೆ ಯುರೋ 180 (ಸರಿಸುಮಾರು ರೂ. 14,800) ಆಗಿದೆ. ಇದು ಮಿಡ್ನೈಟ್ ಬ್ಲ್ಯಾಕ್ ಮತ್ತು ಫ್ಯಾಂಟಮ್ ಬ್ಲೂ ಎಂಬ ಎರಡು ಬಣ್ಣ ಆಯ್ಕೆಗಳನ್ನು ಹೊಂದಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಮುಂದಿನ ವಾರಗಳಲ್ಲಿ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಸಾದ್ಯತೆ ಇದೆ.

Best Mobiles in India

English summary
Honor 20E comes in a 4GB + 64GB storage option and is priced at EUR 180 (roughly Rs. 14,800). to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X