'ಹಾನರ್ 20 ಐ' ಮೇಲೆ 4,000 ರೂ. ಬೆಲೆ ಇಳಿಕೆ!..ಖರೀದಿಗೆ ಇದು ಬೆಸ್ಟ್ ಟೈಮ್!

|

ಕಳೆದ ಜೂನ್‌ನಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಹಾನರ್‌ನ ಪ್ರಖ್ಯಾತ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 'ಹಾನರ್ 20 ಐ' ಬೆಲೆ ಭಾರೀ ಇಳಿಕೆಯಾಗಿದೆ. ಶಿಯೋಮಿ, ರಿಯಲ್‌ಮಿ ಕಂಪೆನಿಗಳ ಹಲವು ಬಜೆಟ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಹಾನರ್ ತನ್ನ 'ಹಾನರ್ 20 ಐ' ಫೋನಿನ ಬೆಲೆಯನ್ನು 4,000 ಗಳಷ್ಟು ಇಳಿಕೆ ಮಾಡಿದ್ದು, ಇದೀಗ ಕೇವಲ 10,999 ರೂ.ಗಳ ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದಾಗಿದೆ. ಆದರೆ, ಈ ಬೆಲೆ ಕಡಿತ ಕೇವಲ ಮಿಡ್ನೈಟ್ ಬ್ಲ್ಯಾಕ್ ಕಲರ್ ರೂಪಾಂತರಕ್ಕೆ ಮಾತ್ರ ಸೀಮಿತವಾಗಿದೆ.

ಹಾನರ್

ಹೌದು, ಹಾನರ್ ಕಂಪನಿಯು ತನ್ನ ಮಿಡ್ನೈಟ್ ಬ್ಲ್ಯಾಕ್ ಕಲರ್ ಆಯ್ಕೆಯ 'ಹಾನರ್ 20 ಐ' ಸ್ಮಾರ್ಟ್‌ಫೋನ್ ತಾತ್ಕಾಲಿಕ ಬೆಲೆ ಕಡಿತವನ್ನು ನೀಡಿದೆ. 4 ಜಿಬಿ RAM ಮತ್ತು 128 ಜಿಬಿ ಸಂಗ್ರಹ ಸಾಮರ್ಥ್ಯದ 'ಹಾನರ್ 20 ಐ' ಫೋನ್ ಅನ್ನು ನವೆಂಬರ್ 30 ರವರೆಗೆ ಕಡಿಮೆ ಬೆಲೆಯಲ್ಲಿ ಗ್ರಾಹಕರು ಖರೀದಿಸಬಹುದು ಎಂದು ಹಾನರ್ ಕಂಪೆನಿ ತಿಳಿಸಿದೆ. ಹಾನರ್‌ನ ಅಫಿಷಯಲ್ ವೆಬ್‌ಸೈಟ್, ಅಮೆಜಾನ್ ಇಂಡಿಯಾ ಮತ್ತು ಫ್ಲಿಪ್‌ಕಾರ್ಟ್ ಎರಡೂ ಇ ಕಾಮರ್ಸ್ ತಾಣಗಳಲ್ಲೂ ಪರಿಷ್ಕೃತ ಬೆಲೆಯೊಂದಿಗೆ ಸ್ಮಾರ್ಟ್‌ಫೋನ್ ಅನ್ನು ಪಟ್ಟಿಮಾಡಲಾಗಿದೆ.

ಬಜೆಟ್ ಫೋನ್‌

ಬಜೆಟ್ ಫೋನ್‌ಗಳಲ್ಲೇ ಆಕರ್ಷಕ ಡಿಸೈನ್‌ ಹೊಂದಿದೆ ಎಂದು ಹೇಳಬಹುದಾದ ವಿನ್ಯಾಸದಲ್ಲಿ 'ಹಾನರ್ 20ಐ' ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿ ಸ್ಸು ಮಾಡಿತ್ತು. ಪಂಚ್‌ಹೋಲ್‌ ಸೆಲ್ಫೀ ಕ್ಯಾಮೆರಾ ನೋಚ್ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಗ್ಲಾಸ್ ಬಾಡಿಯ ಮೂಲಕ ಹೆಚ್ಚು ಮೊಬೈಲ್ ಪ್ರಿಯರನ್ನು ಸೆಳೆದಿತ್ತು. ಇದೀಗ ಹಾನರ್ 20 ಐ' ಫೋನಿನ ಬೆಲೆಯು 4,000 ಗಳಷ್ಟು ಇಳಿಕೆಯಾಗಿರುವುದು ಮೊಬೈಲ್ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಹಾಗಾದರೆ, 'ಹಾನರ್ 20 ಐ' ಹೊಂದಿರುವ ಇನ್ನಿತರ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಹಾನರ್ 20ಐ' ಡಿಸ್‌ಪ್ಲೇ

'ಹಾನರ್ 20ಐ' ಡಿಸ್‌ಪ್ಲೇ

1080 x 2340 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.21 ಇಂಚಿನ FHD+ ಡಿಸ್‌ಪ್ಲೇಯನ್ನು 'ಹಾನರ್ 20ಐ' ಹೊಂದಿದೆ. ಸ್ಮಾರ್ಟ್‌ಫೋನ್ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರ ಶೇ.82.91 % ರಷ್ಟಿದ್ದು, ಪಿಕ್ಸಲ್ ಸಾಂದ್ರತೆಯು 415ppi ಮತ್ತು ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ. FHD+ ಡಿಸ್‌ಪ್ಲೇ ವೀಡಿಯೊಗೆ ಮತ್ತು ಗೇಮಿಂಗ್‌ಗೆ ಸರಿಯಾದ ರೆಸಲ್ಯೂಶನ್ ನೀಡಲಿದೆ.

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಪ್ರೊಸೆಸರ್

'ಹಾನರ್ 20ಐ' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾಕೋರ್ ಹಿಲಿಸಿಲಿಕಾನ್ ಕಿರಿನ್ 710 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB RAM ಮತ್ತು 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್ EMUI 9 ಆಂಡ್ರಾಯ್ಡ್ 9 ಪೈ ಮೂಲಕ ರನ್ ಆಗಲಿದೆ. Mali-G51 MP4 ಸಾಮರ್ಥ್ಯದ ಗ್ರಾಫಿಕ್ ಸೌಲಭ್ಯ ಪಬ್‌ಜಿಯಂತಹ ಗೇಮ್ ಆಡಲು ಸಹಾಯಕ.

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

'ಹಾನರ್ 20ಐ' ಸೆಲ್ಫೀ ಕ್ಯಾಮೆರಾ

ಸೆಲ್ಫೀ ಪ್ರಿರಿಗೆ 'ಹಾನರ್ 20ಐ' ಸ್ಮಾರ್ಟ್‌ಫೋನ್ ಹೇಳಿಮಾಡಿಸಿದಂತಿದ್ದು, 32ಎಂಪಿ ಸಾಮರ್ಥ್ಯದ ಕೃತಕ ಬುದ್ದಿಮತ್ತೆ (ಎಐ) ಸೆಲ್ಫೀ ಕ್ಯಾಮೆರಾವನ್ನು ಫೋನಿನಲ್ಲಿ ಅಳವಡಿಲಾಗಿದೆ. ಬ್ಯೂಟಿ ಪ್ಲಸ್, ಆಟೊ ಫೋಕಸ್ ಸೇರಿದಂತೆ ಎಐಎಸ್ ಸೂಪರ್ ನೈಟ್ ಮೋಡ್‌ಗೆ ಬೆಂಬಲ ನೀಡುವಂತಹ ಹಲವು ಕೃತಕ ಬುದ್ದಿಮತ್ತೆ ಕ್ಯಾಮೆರಾ ತಂತ್ರಜ್ಞಾನಗಳು ಸೆಲ್ಫೀ ಪ್ರಿಯರನ್ನು ಸೆಳೆಯಲಿವೆ.

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ರಿಯರ್ ಕ್ಯಾಮೆರಾ

'ಹಾನರ್ 20ಐ' ಫೋನ್‌ ತ್ರಿವಳಿ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು l f/1.8 ಅಪಾರ್ಚರ್‌ನಲ್ಲಿ 24ಎಂಪಿ ಸಾಮರ್ಥ್ಯದಾಗಿದ್ದರೆ, 8ಎಂಪಿ ವೈಡ್ ಆಂಗಲ್ ಮತ್ತು 2ಎಂಪಿ ಡೆಪ್ತ್ ಕ್ಯಾಮೆರಾಗಳು ರಿಯರ್ ಕ್ಯಾಮೆರಾ ಸಾಮರ್ಥ್ಯ ಎಂದು ಹೇಳಬಹುದು. ಇನ್ನು ರಿಯರ್ ಕ್ಯಾಮೆರಾವು ಸಂಪೂರ್ಣ 'ಎಐ' ಎಂಬುದನ್ನು ಕ್ಯಾಮೆರಾದ ಮೇಲೆಯೇ ಬರೆಯಲಾಗಿದೆ.

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಬ್ಯಾಟರಿ ಸಾಮರ್ಥ್ಯ

'ಹಾನರ್ 20ಐ' ಸ್ಮಾರ್ಟ್‌ಫೋನ್‌ 3,400mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ದೀರ್ಘಕಾಲ ಬಾಳಿಕೆ ಬರುವ ಬಲವನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಈ ಫೋನ್ ಯಾವುದೇ ವೇಗವಾದ ಚಾರ್ಜಿಂಗ್ ಅನ್ನು ಬೆಂಬಲಿಸುವಂತೆ ಕಾಣಿಸುತ್ತಿಲ್ಲ. ಏಕೆಂದರೆ, ಮೊಬೈಲ್ ಬಾಕ್ಸ್ 10W ಚಾರ್ಜರ್ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

'ಹಾನರ್ 20ಐ' ವಿಶೇಷತೆಗಳು

'ಹಾನರ್ 20ಐ' ವಿಶೇಷತೆಗಳು

10,999 ರೂ.ಗಳಲ್ಲಿ ತ್ರಿವಳಿ ಕ್ಯಾಮರಾ ವ್ಯವಸ್ಥೆ ಹಾಗೂ 32 ಎಂಪಿ ಎಐ ಸೆಲ್ಫಿ ಕ್ಯಾಮರಾ ಹೊಂದಿರುವ ಫೋನ್‌ಗಳಲ್ಲಿ 'ಹಾನರ್ 20ಐ' ಮೊದಲ ಸ್ಥಾನದಲ್ಲಿದೆ ಎಂದು ಹೇಳಬಹುದು. ಇನ್ನು ಪ್ರೊಸೆಸರ್ ಕೂಡ ಬೆಲೆಗೆ ತಕ್ಕಂತಂಹ ಶಕ್ತಿಯುತವಾಗಿದೆ. FHD+ ಡಿಸ್‌ಪ್ಲೇ ಮೂಲಕ ಗಮನಸೆಳೆಯುವ ಈ ಫೋನ್ ಖರೀದಿಗೆ ಅತ್ಯುತ್ತಮವಾದ ಒಂದು ಬಜೆಟ್ ಫೋನ್ ಎಂದೆನ್ನಬಹುದು.

Best Mobiles in India

English summary
Honor 20i launch price of the smartphone was Rs. 14,999 with 4GB RAM and 128GB storage. Now, the company has announced a limited period price cut on the Midnight Black color variant. Here are the details:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X