ಹಾನರ್‌30s ಸ್ಮಾರ್ಟ್‌ಫೋನ್‌ನ ಫೀಚರ್ಸ್ ಬಹಿರಂಗ!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆನೂ ಭರವಿಲ್ಲ. ಪ್ರತಿನಿತ್ಯವೂ ಹೊಸತನದ ಭರಾಟೆ ನಡೆಯುತ್ತಲೇ ಇರುತ್ತದೆ. ಸ್ಮಾರ್ಟ್‌ಫೋನ್‌ಗಳ ಬಿಡುಗಡೆ ಯಿಂದ ಹಿಡಿದು ಹೊಸ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ಘೋಷಣೆಯ ಸುದ್ದಿ ಬರುತ್ತಲೇ ಇರುತ್ತೆ. ಸದ್ಯ ಇದೀಗ ಹುವಾವೇ ಕಂಪೆನಿಯ ಸಬ್‌ಬ್ರ್ಯಾಂಡ್‌ ಹಾನರ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ ಎಂದು ಹೇಳಲಾಗ್ತಿದೆ.

ಹಾನರ್‌

ಹೌದು, ಚೀನಾದ ಟೆಕ್‌ ದೈತ್ಯ ಹುವಾವೇ ಸಂಸ್ಥೆಯ ಸಬ್‌ಬ್ರ್ಯಾಂಡ್‌ ಹಾನರ್‌ ಇದೇ ಏಪ್ರಿಲ್ 30 ರ ವೇಳೆಗೆ ಹಾನರ್ 30 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದೆ. ಈ ಸ್ಮಾರ್ಟ್‌ಫೋನ್‌ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಹಾನರ್ 20sಅ ಸ್ಮಾರ್ಟ್‌ಫೋನ್‌ನ ಮುಂದುವರೆದ ಆವೃತ್ತಿಯಾಗಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಹೇಗಿರಲಿದೆ ಯಾವೆಲ್ಲಾ ಫಿಚರ್ಸ್‌ಗಳನ್ನ ಹೊಂದಿದೆ ಅನ್ನೊದು ಆನ್‌ಲೈನ್‌ನಲ್ಲಿ ಲೀಕ್‌ ಆಗಿದೆ.

ಲೀಕ್‌

ಇನ್ನು ಲೀಕ್‌ ಮಾಹಿತಿ ಪ್ರಕಾರ ಇದು ಹಾನರ್ 30s ಹೆಸರಿನಲ್ಲಿ ಬರುವ ಸ್ಮಾರ್ಟ್‌ಫೋನ್‌ ಆಗಿದ್ದು, ಕ್ಯಾಮೆರಾ ಮಾಡ್ಯೂಲ್‌ ಕನಿಷ್ಟ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವ ಸಾಧ್ಯತೆ ಇದೆ. ಹಾಗೇ ನೋಡಿದ್ರೆ ಈ ಹಿಂದಿನ ಹಾನರ್ 20s ಸರಣಿಯ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿತ್ತು. ಈ ಕಾರಣದಿಂದ ಈ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ. ಅದಾಗ್ಯೂ ಹಾನರ್ 20s ನಲ್ಲಿನ ಟ್ರಿಪಲ್-ಕ್ಯಾಮೆರಾ ಮಾಡ್ಯೂಲ್‌ಗಿಂತ ಹಾನರ್ 30s ‌ನ ರಿಯರ್‌ ಇಮೇಜ್‌ ದೊಡ್ಡ ಗಾತ್ರದಲ್ಲಿದೆ.

ಇದಲ್ಲದೆ

ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಉತ್ತಮ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ ಡಿಸ್‌ಪ್ಲೇ ಮಾದರಿಯನ್ನ ಹೊಂದಿರಲಿದೆ. ಜೊತೆಗೆ ಇದು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಹೊಂದಿರುವ ಸಾಧ್ಯತೆಯನ್ನ ಲೀಕ್‌ ಇಮೇಜ್‌ ತೋರಿಸುತ್ತಿದೆ. ಅಲ್ಲದೆ ಹಾನರ್ 20s ನಲ್ಲಿ ಇರುವಂತೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿರಬಹುದು ಎಂದು ಸಹ ನಿರೀಕ್ಷಿಸಲಾಗಿದೆ. ಅಲ್ಲದೆ ಹಾನರ್ 30s ಕಿರಿನ್ 820 SoC ಪ್ರೊಸೆಸರ್‌ ವೇಗವನ್ನ ಹೊಂದಿರುವ ಸಾಧ್ಯತೆ ಕೂಡ ಇದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ 5G ನೆಟ್‌ವರ್ಕ್‌ ಬೆಂಬಲಿತದೊಂದಿಗೆ ಬರಬಹುದೆಂಬ ನಿರೀಕ್ಷೆ ಇದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ RAM ಹಾಗೂ ಸ್ಟೋರೇಜ್‌ ಸಾಮರ್ಥ್ಯದ ಕುರಿತು ಮಾಹಿತಿ ಇನ್ನು ಲಭ್ಯವಾಗಿಲ್ಲ. ಜೊತೆಗೆ ಈ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಸಾಮರ್ಥ್ಯ ಹಾಗೂ ಕನೆಕ್ಟಿವಿಟಿ ಆಯ್ಕೆಗಳ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿಲ್ಲ. ಆದರೆ ಹಾನರ್20s ಸ್ಮಾರ್ಟ್‌ಫೋನ್‌ 3750mAh ಬ್ಯಾಟರಿ ಸಾಮರ್ಥ್ಯದ ಜೊತೆಗೆ 20W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸಿತ್ತು. ಈ ಕಾರಣಕ್ಕೆ ಇದು ಕೂಡ ಇದೇ ಮಾದರಿಯಲ್ಲಿ ಬರಲಿದೆಯಾ ಅನ್ನೋ ಕುತೂಹಲ ಟೆಕ್‌ ವಲಯದಲ್ಲಿ ಮೂಡಿದೆ.

Best Mobiles in India

English summary
Huawei’s sub-brand Honor will reportedly launch the Honor 30 series of smartphones in April.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X