Home
ಸುದ್ದಿಜಾಲ

Honor: ಬರಲಿದೆ ಹೊಸ 5G ಫೋನ್.. 108MP ಕ್ಯಾಮೆರಾ.. 16GB RAM.. ಬೆಲೆಯೂ ಲೀಕ್!

ಹಾನರ್ ಮೊಬೈಲ್‌ಗಳು ಭಾರತೀಯ ಗ್ರಾಹಕರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಕಂಪನಿಯು ಕಳೆದ ವರ್ಷ ಹಲವು ಹೊಸ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ, ಮತ್ತೊಂದು ಹೊಸ 5G ಫೋನ್ ಬಿಡುಗಡೆಗೆ ಸಜ್ಜಾಗಿದೆ. ಹೌದು, ಇತ್ತೀಚೆಗೆ ಹಾನರ್ X9c (Honor X9c) ಅನ್ನು ಅಮೆಜಾನ್‌ನಲ್ಲಿ ಟೀಸ್ ಮಾಡಲಾಗಿತ್ತು. ಆದರೆ, ಇದರ ಬಿಡುಗಡೆ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇದೀಗ, ಕಂಪನಿಯ ಮತ್ತೊಂದು ಹೊಸ ಮೊಬೈಲ್ ಹಾನರ್ 400 ಲೈಟ್ 5G (HONOR 400 Lite 5G) ಬಿಡುಗಡೆ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಮುಂಬರುವ ಹಾನರ್ 400 ಲೈಟ್ 5G ಫೋನಿನ ಬೆಲೆ ಮತ್ತು ವಿಶೇಷತೆಗಳು ಬಹಿರಂಗಗೊಂಡಿವೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಪ್ರೊಸೆಸರ್ ಹೊಂದಿರುತ್ತದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 6.70 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಇದರೊಂದಿಗೆ 16GB RAM + 256GB ಸ್ಟೋರೇಜ್, 5230mAh ಬ್ಯಾಟರಿ ಮತ್ತು 35W ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ.

Honor: ಬರಲಿದೆ ಹೊಸ 5G ಫೋನ್.. 108MP ಕ್ಯಾಮೆರಾ.. 16GB RAM.. ಬೆಲೆಯೂ ಲೀಕ್!

ಹಾನರ್ 400 ಲೈಟ್ 5G ಬೆಲೆ (ಸೋರಿಕೆ)

ವರದಿಯ ಪ್ರಕಾರ, ಹಾನರ್ 400 ಲೈಟ್ 5G ಸ್ಮಾರ್ಟ್‌ಫೋನ್‌ 16GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಲಿದೆ. ಇದರ ಬೆಲೆ ಸಹ ಬಹಿರಂಗವಾಗಿದೆ. ಈ ಫೋನಿನ ಬೆಲೆ 27,675 ರೂ. (EUR 299) ಆಗಿರಲಿದೆ. ಹಾನರ್ 400 ಲೈಟ್ 5G ಫೋನಿನ ​​ಆರಂಭಿಕ ಬೆಲೆ 20,000 ರೂ.ನಿಂದ 22,000 ರೂ. ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವೆಂದರೆ, ಹಾನರ್ ಕಂಪನಿಯು ಹಲವು ತಿಂಗಳುಗಳಿಂದ ಭಾರತದಲ್ಲಿ ತನ್ನ ಹೊಸ ಮೊಬೈಲ್ ಬಿಡುಗಡೆ ಮಾಡಿಲ್ಲ.

Take a Poll

ಹಾನರ್ 400 ಲೈಟ್ 5G ವೈಶಿಷ್ಟ್ಯಗಳು (ನಿರೀಕ್ಷಿತ)

ಡಿಸ್ಪ್ಲೇ ವಿವರ

ಹಾನರ್ 400 ಲೈಟ್ 5G ಸ್ಮಾರ್ಟ್‌ಫೋನ್‌ 6.70 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ. ಇದು ಪಂಚ್ ಹೋಲ್ ಶೈಲಿಯ ಫುಲ್ ಎಚ್‌ಡಿ ಪ್ಲಸ್ ಅಮೋಲೆಡ್ ಸ್ಕ್ರೀನ್ ಆಗಿರಲಿದೆ. ಈ ಡಿಸ್ಪ್ಲೇಯು 2412 x 1080 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಈ ಫೋನಿನ ಸ್ಕ್ರೀನ್ 120Hz ರಿಫ್ರೆಶ್ ದರದ ಬೆಂಬಲ ಪಡೆದಿರಲಿದೆ. ಇದು ಅಲ್ಟ್ರಾಸಾನಿಕ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಹ ಹೊಂದಿರಲಿದೆ.

ಪ್ರೊಸೆಸರ್ ಸಾಮರ್ಥ್ಯ

ಹಾನರ್ 400 ಲೈಟ್ 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 7025 ಅಲ್ಟ್ರಾ ಆಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗಲಿದೆ. ಇದನ್ನು 6 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಮ್ಯಾಜಿಕ್ ಓಎಸ್ 9.0 ಜೊತೆಗೆ ಕೆಲಸ ನಿರ್ವಹಿಸುತ್ತದೆ. ಇದು 2.5 GHz ವರೆಗಿನ ಗಡಿಯಾರದ ವೇಗದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ.

RAM ಮತ್ತು ಸ್ಟೋರೇಜ್

ಹಾನರ್ 400 ಲೈಟ್ 5G ಫೋನ್ 16GB RAM ಹೊಂದಿರಲಿದೆ. ಇದರೊಂದಿಗೆ 256GB ಆಂತರಿಕ ಸ್ಟೋರೇಜ್ ಲಭ್ಯವಿರಲಿದೆ. ಇದು ಹಾನರ್ 400 ಲೈಟ್ 5G ಫೋನಿನ ​​ಟಾಪ್ ರೂಪಾಂತರವಾಗಿರಲಿದೆ. ಈ ಫೋನಿನ ಮೂಲ ರೂಪಾಂತರವನ್ನು 8GB RAM ನೊಂದಿಗೆ ಬಿಡುಗಡೆ ಮಾಡಲಾಗುವುದು.

ಕ್ಯಾಮೆರಾ ಸೆಟಪ್

ಹಾನರ್ 400 ಲೈಟ್ 5G ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರಲಿದೆ. ಇದರೊಂದಿಗೆ ಎರಡನೇ ಕ್ಯಾಮೆರಾವು 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಹೊಂದಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಹಾನರ್ ಫೋನಿನಲ್ಲಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇರುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹಾನರ್ 400 ಲೈಟ್ 5G ಫೋನ್ 5,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಈ ಬ್ಯಾಟರಿಯನ್ನು ತ್ವರಿತವಾಗಿ ಚಾರ್ಜ್ ಮಾಡಲು, 35W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒದಗಿಸಲಾಗುವುದು. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಬ್ಲೂಟೂತ್ 5.3 ಮತ್ತು ಎನ್‌ಎಫ್‌ಸಿ ಹೊಂದಿದೆ. ಐಫೋನ್ 16 ಫೋನಿನಂತೆಯೇ ಇದರಲ್ಲಿ ಎಐ (AI) ಕ್ಯಾಮೆರಾ ಬಟನ್ ಸಹ ಕಾಣಬಹುದು. ಈ ಫೋನಿನ ತೂಕ ಕೇವಲ 171 ಗ್ರಾಂ ಮತ್ತು ದಪ್ಪ ಕೇವಲ 7.29 ಮಿಮೀ ಇರಲಿದೆ.

Best Mobiles in India

English summary
HONOR 400 Lite 5G price and specifications leaked: What to Expect?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+