Home
ಸುದ್ದಿಜಾಲ

ಅಮೇಜಾನ್ ನಲ್ಲಿ ಮಾತ್ರ ದೊರೆಯಲಿದೆ ಹಾನರ 7X : ಡಿಸೆಂಬರ್ 7 ರ 12:00 PM ಗೆ ಶುರುವಾಗಲಿದೆ ಸೇಲ್

By Tejaswini P G

ಹುವಾವೆ ಯ ಸಬ್-ಬ್ರ್ಯಾಂಡ್ ಆದ ಹಾನರ್ ಭಾರತದಲ್ಲಿ ಲಾಂಚ್ ಮಾಡಲಿದೆ ಹೊಸ ಸ್ಮಾರ್ಟ್ಫೋನ್ - ಹಾನರ್ 7X. ಈ ಹಿಂದೆ ಹಾನರ್ 7X ಡಿಸೆಂಬರ್ 5ಕ್ಕೆ ಲಾಂಚ್ ಆಗಲಿದೆ ಎಂಬ ವದಂತಿಗಳಿತ್ತು. ಆದರೆ ಈಗ ಹಾನರ್ 7X ಆ ದಿನ ಲಾಂಚ್ ಆಗುವುದು ಸಂಶಯವೆನಿಸುತ್ತಿದೆ. ಏಕೆಂದರೆ ಅಮೇಜಾನ್ ಇಂಡಿಯಾ ನೂತನ ಹಾನರ್ 7X ಗಾಗಿ ಹೊಸದೊಂದು ಬ್ಯಾನರ್ ಸಿದ್ಧಪಡಿಸಿದೆ. ಅಲ್ಲದೆ ಅಮೇಜಾನ್ ಈ ಮೊಬೈಲ್ ಡಿಸೆಂಬರ್ 7ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ.

ಅಮೇಜಾನ್ ನಲ್ಲಿ ಮಾತ್ರ ದೊರೆಯಲಿದೆ ಹಾನರ 7X


ಅಷ್ಟೇ ಅಲ್ಲದೆ ಅಮೇಜಾನ್ ಹಾನರ್ 7X ಗೆಂದೇ ಮೀಸಲಾದ ಲ್ಯಾಂಡಿಂಗ್ ಪೇಜ್ ಒಂದನ್ನು ಸಿದ್ಧಪಡಿಸಿದ್ದು, ಹಾನರ್ 7X ಅಮೇಜಾನ್ ಇಂಡಿಯಾದಲ್ಲಷ್ಟೇ ಮಾರಾಟವಾಗಲಿರುವುದಂತೂ ಖಂಡಿತ. ಈ ಸೇಲ್ ಡಿಸೆಂಬರ್ 7ಕ್ಕೆ ಮಧ್ಯಾಹ್ನ 12:00 ಘಂಟೆಗೆ ಶುರುವಾಗಲಿದೆ. ಅಲ್ಲದೆ ಅಮೇಜಾನ್ ಈ ಸ್ಮಾರ್ಟ್ಫೋನ್ ಗೆ ನೋಂದಣಿಯನ್ನೂ ಪ್ರಾರಂಭಿಸಿದೆ. ತಮ್ಮನ್ನು ತಾವು ನೋಂದಾಯಿಸಿಕೊಂಡವರು ಸ್ಮಾರ್ಟ್ಫೋನ್,ಪವರ್ ಬ್ಯಾಂಕ್, ಹೆಡ್ಫೋನ್, ಈಗಾಗಲೇ ಪಾವತಿ ಮಾಡಿರುವ ಪ್ರವಾಸಗಳು ಮೊದಲಾದ 1000ಕ್ಕೂ ಅಧಿಕ ಬಹುಮಾನಗಳನ್ನು ಗೆಲ್ಲಬಹುದು.

ಏನೇ ಆಗಲಿ, ಹಾನರ್ 7X ಭಾರತಕ್ಕೆ ಬರುತ್ತಿರುವುದೇ ವಿಶೇಷ. ಈ ಸ್ಮಾರ್ಟ್ಫೋನ್ ಚೀನಾದಲ್ಲಿ ಈಗಾಗಲೇ ಲಾಂಚ್ ಆಗಿದ್ದು ಉತ್ತಮ ಫೀಚರ್ಗಳನ್ನು ಹೊಂದಿದೆ. ಹಾನರ್ 7Xನಲ್ಲಿದೆ 5.93 ಇಂಚ್ ಫುಲ್ HD+ ರೆಸೊಲ್ಯೂಶನ್ ನ ಡಿಸ್ಪ್ಲೇ 18:9 ಆಸ್ಪೆಕ್ಟ್ ಅನುಪಾತ ಮತ್ತು 1080x2160 ಪಿಕ್ಸೆಲ್ ರೆಸೊಲ್ಯೂಶನ್ ಜೊತೆಗೆ. ಅಲ್ಲದೆ ಇದರ ಡಿಸ್ಪ್ಲೇ ಮೇಲೆ 2.5D ಗ್ಲಾಸ್ ನ ಹೊರ ಕವಚವೂ ಇದೆ.

ಹಾನರ್ 7X ಕಿರಿನ್ 659 ಒಕ್ಟಾ-ಕೋರ್ SoC ಜೊತೆಗೆ 4GB RAM ಹೊಂದಿದೆ.ಅಲ್ಲದೆ 32GB ಅಥವಾ 64GB ಸ್ಟೋರೇಜ್ ನ ಎರಡು ಆವೃತ್ತಿಗಳಲ್ಲಿ ಇದು ದೊರೆಯಲಿದೆ. ಹಾನರ್ 7X ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, 16MP ಮತ್ತು 2MP ಯ ಎರಡು ಸೆನ್ಸರ್ಗಳನ್ನು ಹೊಂದಿದೆ.ಇನ್ನು ಇದರ ಫ್ರಂಟ್ ಕ್ಯಾಮೆರಾ 8MP ರೆಸೊಲ್ಯೂಶನ್ ಹೊಂದಿದೆ.

ಹಾನರ್ 7X 3340 mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, ಆಂಡ್ರಾಯ್ಡ್ 7.0 ನುಗಾಟ್ ಓಎಸ್ EMUI 5.1 ಜೊತೆಗೆ ಹೊಂದಿದೆ. ಅಲ್ಲದೆ 156.50x7530x7.60 mm(ಉದ್ದxಅಗಲxದಪ್ಪ) ಸುತ್ತಳತೆ ಹೊಂದಿದ್ದು, 165.00 ಗ್ರಾಂ ತೂಕವಿದೆ.

ಹುವಾವೆ ಹಾನರ್ 7X ಡ್ಯುಯಲ್ ಸಿಮ್(GSM ಮತ್ತು GSM) ಸ್ಮಾರ್ಟ್ಫೋನ್ ಆಗಿದ್ದು ಎರಡು ನ್ಯಾನೋ-ಸಿಮ್ ಗಳನ್ನು ಇದರಲ್ಲಿ ಬಳಸಬಹುದಾಗಿದೆ. ವೈಫೈ, GPS, ಬ್ಲೂಟೂತ್,USB OTG, 3G ಮತ್ತು 4G ಮೊದಲಾದ ಕನೆಕ್ಟಿವಿಟಿ ಫೀಚರ್ಗಳಿದೆ. ಅಲ್ಲದೆ ಕಂಪಾಸ್, ಮ್ಯಾಗ್ನಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಆಕ್ಸೆಲರೋಮೀಟರ್, ಆಂಬಿಯಂಟ್ ಲೈಟ್ ಸೆನ್ಸರ್ ಮತ್ತು ಗೈರೋಸ್ಕೋಪ್ ಮೊದಲಾದ ಸೆನ್ಸರ್ಗಳನ್ನೂ ಹೊಂದಿದೆ.

ಹಾನರ್ 7X ಬ್ಲ್ಯಾಕ್, ಬ್ಲೂ ಮತ್ತು ಗೋಲ್ಡ್ ನ ಮೂರು ವಿಭಿನ್ನ ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Amazon has also created a dedicated landing page for the Honor 7X and it suggests that the device will be Amazon India exclusive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+