ಒಂದು ರುಪಾಯಿಗೆ ಹಾನರ್ 8 ಪ್ರೋ ಸ್ಮಾರ್ಟ್‌ಫೋನ್, ಯಾರಿಗುಂಟು ಯಾರಿಗಿಲ್ಲ ಆಫರ್..!
ಒಂದು ರುಪಾಯಿ ಅಕ್ಕಿ, ಒಂದು ರುಪಾಯಿ ಎಣ್ಣೆ ಕಥೆ ಅಲ್ಲ ಇದು.30,000 ದ ಫೋನ್ ಒಂದು ರುಪಾಯಿಗೆ ಸಿಕ್ಕುವ ಬಂಪಲ್ ಡೀಲ್ ಇದು. ನಿಮಗೆ ಆಶ್ಚರ್ಯ ಹುಟ್ಟಿಸೋ ಮತ್ತು ನಂಬಲು ಅಸಾಧ್ಯವಾದ ಒಂದು ಆಫರ್ ಇದು. ಹೌದು. ಹುವಾಯಿ ಸಬ್ ಬ್ರ್ಯಾಂಡ್ ಆಗಿರುವ ಹಾನರ್ ತನ್ನ ಒಂದು ವರ್ಷದ ಹಿಂದಿನ ಫೋನ್ ಹಾನರ್ 8 ಪ್ರೋ ಅನ್ನು ಕೇವಲ ಒಂದು ರುಪಾಯಿಗೆ ಮಾರಾಟ ಮಾಡಿದೆ.
ಆದರೆ, ಅದು ಯಾರಿಗೆ ಸಿಕ್ಕಿದೆಯೋ ಗೊತ್ತಿಲ್ಲ. ಹೌದು ಇಂದು ಅಧಿಕೃತ ಹಾನರ್ ಇಂಡಿಯಾ ವೆಬ್ ಸೈಟ್ www.hihonor.com/in ನಲ್ಲಿ ಬೆಳಿಗ್ಗೆ 11.45ಕ್ಕೆ ಹಾನರ್ 8 ಪ್ರೋ ಸ್ಮಾರ್ಟ್‌ಫೋನ್ ಸೂಪರ್ ಸೇಲ್ ಆಯೋಜಿಸಲಾಗಿತ್ತು. ಸ್ಟಾಕ್ ಮುಗಿಯುವವರೆಗೆ ಈ ಸೇಲ್ ಇತ್ತು ಎಂದು ಕಂಪನಿ ಹೇಳಿದೆ. ಆದರೆ, ಯಾರಿಗೆ ರೂ.1ಕ್ಕೆ ಹಾನರ್ 8 ಪ್ರೋ ಸಕ್ಕಿದೆ ಎನ್ನುವುದು ಮಾತ್ರ ಬಹಿರಂಗವಾಗಿಲ್ಲ.

ಫ್ಲ್ಯಾಶ್ ಸೇಲ್ ನ ಭಾಗವಾಗಿದ್ದ ಒಂದು ರುಪಾಯಿಗೆ ಹಾನರ್ 8 ಪ್ರೋ ಮಾರಾಟ ಇತ್ತು. ಕೆಲವೇ ಕೆಲವು ಫೋನ್‌ಗಳು ಲಭ್ಯವಿತ್ತು ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಗ್ರಾಹಕರು ಬುಕ್ ಮಾಡುವುದು ಬಹಳ ಕಷ್ಟ. ನೀಲಿ ಬಣ್ಣದ 6ಜಿಬಿ ಮೆಮೊರಿ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಹಾನರ್ 8 ಪ್ರೋ ಮಾಡೆಲ್ ಮಾತ್ರ ರೂ. 1ಕ್ಕೆ ಯಾರಿಗೆ ಸಿಕ್ಕಿದೆ ಎಂಬುದೇ ಪ್ರಶ್ನೆ.
ಕಳೆದ ವರ್ಷ ಜುಲೈ ನಲ್ಲಿ ಬಿಡುಗಡೆಯಾಗಿದ್ದ ಈ ಫೋನಿನ ಭಾರತೀಯ ಮಾರುಕಟ್ಟೆಯ ಬೆಲೆ 29,999 ರುಪಾಯಿಗಳು. ಈ ಫೋನ್ ಒಂದು ರುಪಾಯಿಗೆ ಸಿಗುವುದನ್ನ ಖಂಡಿತ ಯಾರೂ ಮಿಸ್ ಮಾಡಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಆದರೆ ಯಾರಿಗಾದರೂ ಸಿಕ್ಕಿದಿಯಾ, ಅಥವಾ ಕೇವಲ ಪ್ರೊಮೋಷನಲ್ ಆಫರ್? ಎಂಬುದು ಗೊತ್ತಾಗುತ್ತಿಲ್ಲ.


Click it and Unblock the Notifications