'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

|

ವಿಶ್ವದಲ್ಲೇ ಎರಡನೇ ಅತ್ಯಂತ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿ ಬೆಳೆದಿರುವ ಭಾರತದಲ್ಲಿ ಈಗೇನಿದ್ದರೂ ಬಜೆಟ್ ಸ್ಮಾರ್ಟ್‌ಪೋನ್‌ಗಳದ್ದೇ ಪಾರುಪತ್ಯ. ಹಾಗಾಗಿ, ಇಂದು ಬಹುತೇಕ ಎಲ್ಲಾ ಮೊಬೈಲ್ ಕಂಪೆನಿಗಳು ಕೂಡ ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ ತಯಾರಿಕೆಯಲ್ಲಿ ತೊಡಗಿಸಿಕೊಂಡಿವೆ. ಆದರೆ, ಬಜೆಟ್ ಬೆಲೆಯ ಸ್ಮಾರ್ಟ್‌ಪೋನ್‌ ತಯಾರಿಕೆಯಲ್ಲಿ ಕೆಲವೇ ಕೆಲವು ಮೊಬೈಲ್ ಕಂಪೆನಿಗಳು ಮಾತ್ರ ಯಶಸ್ವಿಯಾಗಿವೆ ಎನ್ನಬಹುದು.

ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಮೊಬೈಲ್ ಪ್ರಿಯರನ್ನು ಸೆಳೆಯತ್ತಿರುವ 'ಹಾನರ್ 8C' ಸ್ಮಾರ್ಟ್‌ಫೋನ್ ಕೂಡ ಹಾನರ್ ಕಂಪೆನಿಯ ಮಾರುಕಟ್ಟೆಯನ್ನು ಉತ್ತುಂಗಕ್ಕೇರಿಸಲು ಸಿದ್ದವಾಗಿದೆ. ರೆಡ್‌ಮಿ ನೋಟ್ 6 ಪ್ರೊ ಮತ್ತು ರಿಯಲ್‌ಮಿ ಯು1 ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆದು ನಿಂತಿರುವ 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಇದೀಗ ಬಜೆಟ್ ಬೆಲೆಯ ಅತ್ಯುತ್ತಮ ಫೋನ್ ಆಗಲಿದೆ. ಏಕೆಂದರೆ, ಡಿಸೈನ್, ಫೀಚರ್ಸ್ ಮತ್ತು ಬೆಲೆ ಎಲ್ಲದರಲ್ಲಿಯೂ ಭಾರತದ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಇದಾಗಿದೆ.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

ಹಾಗಾದರೆ, ವಿಶ್ವದಲ್ಲೇ ಮೊದಲ ಬಾರಿಗೆ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಹೊತ್ತು ಬಂದಿರುವ 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಖರೀದಿಗೆ ಮೊಬೈಲ್ ಪ್ರಿಯರು ಕ್ಯೂ ನಿಲ್ಲುತ್ತಿರುವುದು ಏಕೆ? 'ಹಾನರ್ 8ಸಿ' ಫೋನಿನಲ್ಲಿ 6.26 ಹೆಚ್‌ಡಿ+ ಡಿಸ್‌ಪ್ಲೇ, 4000mAh ಬ್ಯಾಟರಿ ಸಾಮರ್ಥ್ಯಗಳಂತಹ ಇನ್ನಿತರ ಅತ್ಯುತ್ತಮ ಫೀಚರ್ಸ್ ಯಾವುವು?, 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

'ಹಾನರ್ 8ಸಿ' ವಿನ್ಯಾಸ!
ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾಗಿರುವ ಮೂರನೇ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾದರೂ ವಿನ್ಯಾಸದಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಹೋಲುತ್ತಿದೆ. ಡಿಸ್‌ಪ್ಲೇ ನೋಚ್, ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫೀಂಗರ್‌ಪ್ರಿಂಟ್ ಲಾಕ್ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ ಎಂದು ಹೇಳಬಹುದು.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

'ಹಾನರ್ 8ಸಿ' ಡಿಸ್‌ಪ್ಲೇ!
ಮೊದಲೇ ಹೇಳಿದಂತೆ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ 6.26 ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. 720x1520 ಪಿಕ್ಸೆಲ್‌ ಟಿಎಫ್‌ಟಿ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದಾಗಿದ್ದು, ಫಲಕ 19:9 ಆಕಾರ ಅನುಪಾತದಲ್ಲಿ 86.6 ಪ್ರತಿಶತ ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 2.D ಕರ್ವಡ್ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದನ್ನು ಸಹ ನಾವು ನೋಡಬಹುದು.
'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

ಪ್ರೊಸೆಸರ್ ಮತ್ತು RAM!
ಆಕ್ಟಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಪೋನ್ ಎಂಬ ಖ್ಯಾತಿಗೆ 'ಹಾನರ್ 8ಸಿ' ಪಾತ್ರವಾಗಿದೆ. ಕ್ವಾಲ್ಕಂ ಚಿಪ್‌ಸೆಟ್, ಅಡ್ರಿನೊ 506 ಜಿಪಿಯು ಹಾಗೂ 4GB RAM ಸಹಯೋಗದಲ್ಲಿ, 4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

ಕ್ಯಾಮೆರಾ ಹೇಗಿವೆ?
ಎಲ್ಇಡಿ ಫ್ಲಾಶ್ ಜೊತೆಯಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಅದು f/2.0 ಅಪಾರ್ಚರ್ ಮತ್ತು ಸೆಲ್ಫ್ ಟೂನಿಂಗ್ ಲೈಟ್ನೊಂದಿಗೆ ಸ್ಥಿರ ಫೋಕಸ್ ಲೆನ್ಸ್ ಅನ್ನು ಹೊಂದಿದೆ ಎಂದು ಹಾನರ್ ಕಂಪೆನಿ ತಿಳಿಸಿದೆ.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

ಬ್ಯಾಟರಿ ಮತ್ತು ಇತರೆ ಫೀಚರ್ಸ್?
5V/2A (10W) ಚಾರ್ಜಿಂಗ್ ಅನ್ನು ಬೆಂಬಲಿಸುವ 4,000mAh ಬ್ಯಾಟರಿಯನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಬ್ಲೂಟೂತ್ v4.2 ಎಲ್ಎಲ್, ಎಪಿಟಿಎಕ್ಸ್, ಜಿಪಿಎಸ್ / ಎ-ಜಿಪಿಎಸ್, ಗ್ಲೋನಾಸ್, ಮೈಕ್ರೋ-ಯುಎಸ್ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಜೊತೆಗೆ SD ಕಾರ್ಡ್ ಮೂಲಕ 256GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯೂ ಸಹ ಇದೆ.

'ಹಾನರ್ 8ಸಿ' ಈಗ ಭಾರತದ ನಂಬರ್ 1 ಬಜೆಟ್ ಸ್ಮಾರ್ಟ್‌ಪೋನ್!?

ಫೋನ್ ಬೆಲೆ ಎಷ್ಟು?
4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು, ಭಾರತದಲ್ಲಿ 4GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ 11,999 ರೂ.ಗಳಾದರೆ, 4GB RAM ಮತ್ತು 64GBಯ ಮೆಮೊರಿ ವೆರಿಯಂಟ್ ಫೋನ್ ಬೆಲೆ 12,999 ರೂಪಾಯಿಗಳು ಮಾತ್ರ.

Best Mobiles in India

English summary
Honor 8C comes at a starting price of Rs. 11,999 for 4GB/32GB variant. The smartphone will go on sale exclusively via Amazon.in and HiHonor Store starting December 10. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X