ಶಿಯೋಮಿ, ರಿಯಲ್‌ಮಿಗೆ ಭಯಹುಟ್ಟಿಸಿರುವ 'ಹಾನರ್ 8ಸಿ' ಸೇಲ್ ಇಂದಿನಿಂದ ಆರಂಭ!!

|

ಭಾರತದ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿರುವ 'ಹಾನರ್ 8ಸಿ' ಸ್ಮಾರ್ಟ್‌ಫೋನಿನ ಮೊದಲ ಸೇಲ್ ಇಂದಿನಿಂದ ಆರಂಭವಾಗಿದೆ. ಪ್ರಮುಖ ಇ ಕಾಮರ್ಸ್ ಜಾಲತಾಣ ಅಮೆಜಾನ್ ಮತ್ತು ಹಾನರ್ ಸ್ಟೋರ್‌ ಸೇರಿದಂತೆ ಆಫ್‌ಲೈನ್ ಮಾರುಕಟ್ಟೆಯಲ್ಲಿಯೂ 'ಹಾನರ್ 8ಸಿ' ಸ್ಮಾರ್ಟ್‌ಫೋನ್ ಮಾರಾಟಕ್ಕಿರುವ ಬಗ್ಗೆ ಕಂಪೆನಿ ತಿಳಿಸಿದೆ.

ಭಾರತದಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾಗಿ ಜನರನ್ನು ಸೆಳೆಯಲು ತಯಾರಾಗಿರುವ ರೆಡ್‌ಮಿ ನೋಟ್ 6 ಪ್ರೊ ಮತ್ತು ರಿಯಲ್‌ಮಿ ಯು1 ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ 'ಹಾನರ್ 8ಸಿ' ಇದೀಗ ಎಂಟ್ರಿ ನೀಡಿದೆ. ಸ್ಟೈಲ್,ಫೀಚರ್ಸ್ ಮತ್ತು ಬೆಲೆಗಳು ಎಲ್ಲದರಲ್ಲಿಯೂ ಭಾರತದ ಬೆಸ್ಟ್ ಬಜೆಟ್ ಸ್ಮಾರ್ಟ್‌ಫೋನ್ ಆಗುವ ಲಕ್ಷಣಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

 ಶಿಯೋಮಿ, ರಿಯಲ್‌ಮಿಗೆ ಭಯಹುಟ್ಟಿಸಿರುವ 'ಹಾನರ್ 8ಸಿ' ಸೇಲ್ ಇಂದಿನಿಂದ ಆರಂಭ!!

ವಿಶ್ವದಲ್ಲೇ ಮೊದಲ ಬಾರಿಗೆ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಹೊತ್ತು ಬಂದಿರುವ ಈ ಸ್ಮಾರ್ಟ್‌ಫೋನ್‌ 6.26 ಹೆಚ್‌ಡಿ+ ಡಿಸ್‌ಪ್ಲೇ, 4000mAh ಬ್ಯಾಟರಿ ಸಾಮರ್ಥ್ಯ ಹಾಗೂ ಇನ್ನಿತರ ಅತ್ಯುತ್ತಮ ಫೀಚರ್ಸ್ ಹೊಂದಿದೆ. ಹಾಗಾದರೆ, ಇಂದು ಬಿಡುಗಡೆಯಾದ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ ಹೇಗಿದೆ? ಸ್ಮಾರ್ಟ್‌ಫೋನ್ ಬೆಲೆಗಳು ಎಷ್ಟು? ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ಹಾನರ್ 8ಸಿ' ವಿನ್ಯಾಸ!

'ಹಾನರ್ 8ಸಿ' ವಿನ್ಯಾಸ!

ಮೊಬೈಲ್ ಮಾರುಕಟ್ಟೆಯಲ್ಲಿ ಈ ವಾರ ಬಿಡುಗಡೆಯಾಗಿರುವ ಮೂರನೇ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಇದಾದರೂ ವಿನ್ಯಾಸದಲ್ಲಿ ಪ್ರೀಮಿಯಮ್ ಸ್ಮಾರ್ಟ್‌ಫೋನ್‌ಗಳನ್ನು ಹೋಲುತ್ತಿದೆ. ಡಿಸ್‌ಪ್ಲೇ ನೋಚ್, ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹಾಗೂ ಫೀಂಗರ್‌ಪ್ರಿಂಟ್ ಲಾಕ್ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಹೈ ಎಂಡ್ ಲುಕ್ ಹೊಂದಿದೆ ಎಂದು ಹೇಳಬಹುದು.

'ಹಾನರ್ 8ಸಿ' ಡಿಸ್‌ಪ್ಲೇ!

'ಹಾನರ್ 8ಸಿ' ಡಿಸ್‌ಪ್ಲೇ!

ಮೊದಲೇ ಹೇಳಿದಂತೆ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ 6.26 ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. 720x1520 ಪಿಕ್ಸೆಲ್‌ ಟಿಎಫ್‌ಟಿ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಇದಾಗಿದ್ದು, ಫಲಕ 19:9 ಆಕಾರ ಅನುಪಾತದಲ್ಲಿ 86.6 ಪ್ರತಿಶತ ಸ್ಕ್ರೀನ್-ಟು-ದೇಹ ಅನುಪಾತವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 2.D ಕರ್ವಡ್ ಗ್ಲಾಸ್ ರಕ್ಷಣೆಯನ್ನು ಹೊಂದಿರುವುದನ್ನು ಸಹ ನಾವು ನೋಡಬಹುದು.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಆಕ್ಟಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 632 ಚಿಪ್‌ಸೆಟ್ ಅಳವಡಿಸಿಕೊಂಡಿರುವ ವಿಶ್ವದ ಮೊದಲ ಪೋನ್ ಎಂಬ ಖ್ಯಾತಿಗೆ 'ಹಾನರ್ 8ಸಿ' ಪಾತ್ರವಾಗಿದೆ. ಕ್ವಾಲ್ಕಂ ಚಿಪ್‌ಸೆಟ್, ಅಡ್ರಿನೊ 506 ಜಿಪಿಯು ಹಾಗೂ 4GB RAM ಸಹಯೋಗದಲ್ಲಿ, 4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

 ಕ್ಯಾಮೆರಾ ಹೇಗಿವೆ?

ಕ್ಯಾಮೆರಾ ಹೇಗಿವೆ?

ಎಲ್ಇಡಿ ಫ್ಲಾಶ್ ಜೊತೆಯಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಸಾಮರ್ಥ್ಯದ ಎರಡು ಕ್ಯಾಮೆರಾಗಳನ್ನು ಹಿಂಬದಿಯಲ್ಲಿ ನೀಡಲಾಗಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಅದು f/2.0 ಅಪಾರ್ಚರ್ ಮತ್ತು ಸೆಲ್ಫ್ ಟೂನಿಂಗ್ ಲೈಟ್ನೊಂದಿಗೆ ಸ್ಥಿರ ಫೋಕಸ್ ಲೆನ್ಸ್ ಅನ್ನು ಹೊಂದಿದೆ ಎಂದು ಹಾನರ್ ಕಂಪೆನಿ ತಿಳಿಸಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

5V/2A (10W) ಚಾರ್ಜಿಂಗ್ ಅನ್ನು ಬೆಂಬಲಿಸುವ 4,000mAh ಬ್ಯಾಟರಿಯನ್ನು ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಬ್ಲೂಟೂತ್ v4.2 ಎಲ್ಎಲ್, ಎಪಿಟಿಎಕ್ಸ್, ಜಿಪಿಎಸ್ / ಎ-ಜಿಪಿಎಸ್, ಗ್ಲೋನಾಸ್, ಮೈಕ್ರೋ-ಯುಎಸ್ಬಿ ಪೋರ್ಟ್ ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಜೊತೆಗೆ SD ಕಾರ್ಡ್ ಮೂಲಕ 256GB ವರೆಗೆ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಆಯ್ಕೆಯೂ ಸಹ ಇದೆ.

 ಫೋನ್ ಬೆಲೆ ಎಷ್ಟು?

ಫೋನ್ ಬೆಲೆ ಎಷ್ಟು?

4GB RAM ಮತ್ತು 32GB ಮೆಮೊರಿ ಹಾಗೂ 4GB RAM ಮತ್ತು 64GBಯ ಎರಡು ಮೆಮೊರಿ ವೆರಿಯಂಟ್‌ಗಳಲ್ಲಿ 'ಹಾನರ್ 8ಸಿ' ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದ್ದು, ಭಾರತದಲ್ಲಿ 4GB RAM ಮತ್ತು 32GB ಮೆಮೊರಿ ವೆರಿಯಂಟ್ ಫೋನ್ ಬೆಲೆ 11,999 ರೂ.ಗಳಾದರೆ, 4GB RAM ಮತ್ತು 64GBಯ ಮೆಮೊರಿ ವೆರಿಯಂಟ್ ಫೋನ್ ಬೆಲೆ 12,999 ರೂಪಾಯಿಗಳು ಮಾತ್ರ.

Best Mobiles in India

English summary
Australia is mulling a strict law that gives enforcement agencies power to trackmessages on platforms like WhatsApp and Telegram that offer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X