ಹಾನರ್ 8s (2020) ಸ್ಮಾರ್ಟ್‌ಫೋನ್ ಬಿಡುಗಡೆ!
ಚೀನಾದ ಟೆಕ್ ದೈತ್ಯ ಹುವಾವೇ ತನ್ನ ಸಬ್ ಬ್ರಾಂಡ್ ಹಾನರ್ ಮೂಲಕ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿರುವ ಹಾನರ್ ಇದೀಗ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಹುವಾವೆ ಸಬ್ ಬ್ರಾಂಡ್ ಹಾನರ್ ತನ್ನ ಹೊಸ ಹಾನರ್ 8S (2020) ಅನ್ನು ಯುಕೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬಿಡುಗಡೆಯ ಬಗ್ಗೆ ಕಂಪನಿಯ ವೆಬ್‌ಸೈಟ್ ನಲ್ಲಿ ವರದಿ ಆಗಿದ್ದು, ಇದು ಜೆಟ್ ಬೆಲೆಯ ಶ್ರೇಣಿಯಲ್ಲಿ ಬಿಡುಗಡೆ ಆಗಿದೆ ಎನ್ನಲಾಗ್ತಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ಇನ್ನು ಈ ಸ್ಮಾರ್ಟ್‌ಫೋನ್ 720x1,520 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನ ಹೊಂದಿದ್ದು, ಇದು 5.71-ಇಂಚಿನ ಎಚ್‌ಡಿ + ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 295 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಅಲ್ಲದೆ ಇದು ಡಿಸ್‌ಪ್ಲೇ ರಚನೆಯ ಅನುಪಾತ 19:9 ಅನ್ನು ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು ಸ್ಕ್ರೀನ್-ಟು-ಬಾಡಿ ಅನುಪಾತ 77.86% ಅನ್ನು ಹೊಂದಿದೆ.

ಪ್ರೊಸೆಸರ್
ಹಾನರ್ 8S (2020) ಸ್ಮಾರ್ಟ್‌ಫೋನ್ ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A22 SoC ಪ್ರೊಸೆಸರ್ ವೇಗವನ್ನ ಪಡೆದುಕೊಂಡಿದೆ. ಅಲ್ಲದೆ ಇದು ಆಂಡ್ರಾಯ್ಡ್ 9 ಫೈ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 3GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಇನ್ನು ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಇದು 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್ ಟು ಫೋಕಸ್. ಫೀಚರ್ಸ್‌ಗಳನ್ನ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ಹಾನರ್ 8s ಸ್ಮಾರ್ಟ್‌ಫೋನ್ 3020 mAh ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್, ಜಿಪಿಎಸ್, ವೋಲ್ಟ್ , ಮೈಕ್ರೋ-ಯುಎಸ್ಬಿ 2.0 ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಇನ್ನು ಈ ಸ್ಮಾರ್ಟ್‌ಫೋನ್ ಯುಕೆ ಮಾರುಕಟ್ಟೆಯಲ್ಲಿ GBP 100 (ಸುಮಾರು 9,600 ರೂ.)ಗೆ ನಿಗದಿಪಡಿಸಲಾಗಿದೆ. ಇನ್ನು ಈ ಫೋನ್ ಈಗಾಗಲೇ ಹಾನರ್ ಯುಕೆ ಸೈಟ್ ಮೂಲಕ ಮಾರಾಟಕ್ಕೆ ಸಿದ್ಧವಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಕಪ್ಪು, ನೀಲಿ ಮತ್ತು ಗೋಲ್ಡ್ ಬಣ್ಣದ ಆಯ್ಕೆಗಳಲ್ಲಿ ಲಬ್ಯವಾಗಲಿದೆ.


Click it and Unblock the Notifications





