ಮಾರುಕಟ್ಟೆಗೆ ಎಂಟ್ರಿ ನೀಡಿದ ಹಾನರ್ 8ಎಕ್ಸ್ ಮತ್ತು ಹಾನರ್ 8ಎಕ್ಸ್ ಮ್ಯಾಕ್ಸ್
ಹಾನರ್ ಸಂಸ್ಥೆ ಇತ್ತೀಚೆಗೆ ಐಎಫ್ಎ 2018 ರಲ್ಲಿ ಹಾನರ್ ಪ್ಲೇ, ಹಾನರ್ 7ಎಸ್, ಹಾನರ್ ಮ್ಯಾಜಿಕ್ 2 ವನ್ನು ಬಿಡುಗಡೆಗೊಳಿಸಿತ್ತು. ಮತ್ತು ಇತ್ತೀಚೆಗಷ್ಟೇ ಹಾನರ್ 7ಎಕ್ಸ್ ನ ಯಶಸ್ವೀ ಫೋನ್ ಹಾನರ್ 8ಎಕ್ಸ್ ಬಿಡುಗಡೆಗೊಳ್ಳುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಕಳೆದ ತಿಂಗಳು ಹಾನರ್ ಸಂಸ್ಥೆ ಸೆಪ್ಟೆಂಬರ್ 5 ಕ್ಕೆ ನಡೆಯುವ ಬಿಡುಗಡೆ ಸಮಾರಂಭವೊಂದರ ಕಾರ್ಯಕ್ರಮಕ್ಕೆ ಆಮಂತ್ರಣವನ್ನೂ ಕಳುಹಿಸಿತು.

ಇದೀಗ ಹಾನರ್ ಬ್ರ್ಯಾಂಡ್ ತನ್ನ ಮಣ್ಣಿನ ನೆಲದಲ್ಲಿ ಅಂದರೆ ಚೀನಾದಲ್ಲಿ ಹೊಸ ಸ್ಮಾರ್ಟ್ ಪೋನ್ ಗಳನ್ನು ಬಿಡುಗಡೆಗೊಳಿಸುವ ತವಕದಲ್ಲಿದೆ. ಅದುವೇ ಹಾನರ್ 8ಎಕ್ಸ್ ಮತ್ತು ಹಾನರ್ 8ಎಕ್ಸ್ ಮ್ಯಾಕ್ಸ್. ಈ ಎರಡು ಫೋನ್ ಗಳು ಹೇಗಿವೆ ಎಂಬ ವಿವರ ಇಲ್ಲಿದೆ ನೋಡಿ.
ಹಾನರ್ 8ಎಕ್ಸ್ ಹೇಗಿದೆ ಗೊತ್ತಾ?
ಎಲ್ಲರ ಕೈಗೆಟುಕುವ ವೇರಿಯಂಟ್ ಆಗಿರುವ ಹಾನರ್ 8ಎಕ್ಸ್ ಬಗ್ಗೆ ಮಾತನಾಡುವುದಾದರೆ ಇದು 6.5-ಇಂಚಿನ ವಾಟರ್ ಪ್ರೂಫ್ ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ಹಾನರ್ “Pearl” ಸ್ಕ್ರೀನ್ ಎಂದು ಕರೆಯುತ್ತದೆ. ಇದರ ಸ್ಕ್ರೀನ್ ರೆಸಲ್ಯೂಷನ್ 2,340 x 1,080 ಪಿಕ್ಸಲ್ಸ್ ಆಗಿದೆ ಮತ್ತು ಅನುಪಾತ 19.5:9 ಆಗಿದೆ. Kirin 710 ಸಾಕೆಟ್ ನ್ನು ಇದು ಹೊಂದಿದೆ.
ಹಾನರ್ 8 ಎಕ್ಸ್ 3 ವಿಭಿನ್ನ ಸ್ಟೋರೇಜ್ ಮತ್ತು ಸ್ಟೋರೇಜ್ ಕಾನ್ಫಿಗರೇಷನ್ ನಲ್ಲಿ ಲಭ್ಯವಾಗಲಿದ್ದು ಗ್ರಾಹಕರು ತಮ್ಮ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. 4GB + 64GB, 6GB + 64GB ಮತ್ತು 6GB + 128GB, ಇನ್ನು ಸ್ಟೋರೇಜ್ ನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಸುಮಾರು 400 ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.

ಹಾನರ್ 8ಎಕ್ಸ್ ನ ಕ್ಯಾಮರಾಗಳು:
ಇನ್ನು ಇದರ ಕ್ಯಾಮರಾ ವಿಭಾಗವನ್ನು ಗಮನಿಸಿದರೆ, ನಿಮಗೆ 20MP (f/1.8) + 2MP ಸೆಟ್ ಅಪ್ ಹಿಂಭಾಗದಲ್ಲಿ ಲಭ್ಯವಿರುತ್ತದೆ ಮತ್ತು 16MP ಮುಂಭಾಗದ ಕ್ಯಾಮರಾ ಇದರಲ್ಲಿದೆ. ಹಾನರ್ ನ ಕ್ಯಾಮರಾಗಳು ಮಾಸ್ಟರ್ AI ವೈಶಿಷ್ಟ್ಯತೆಗಳಿಂದ ಕೂಡಿದ್ದು ಸ್ವಯಂಚಾಲಿತವಾಗಿ ವಸ್ತು ಅಥವಾ ದೃಶ್ಯಗಳನ್ನು ಗುರುತಿಸಿ ಅತ್ಯುತ್ತಮ ಛಾಯಾಚಿತ್ರವನ್ನು ತೆಗೆಯಲು ಅನುವು ಮಾಡುತ್ತದೆ.ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.1 ಓರಿಯೋ ಬೇಸ್ಡ್ EMUI ನಿಂದ ರನ್ ಆಗುತ್ತದೆ ಮತ್ತು ಇದರ ಬ್ಯಾಟರಿ ಸಾಮರ್ಥ್ಯವು 3,750mAh ಆಗಿದೆ. ಭದ್ರತೆಯ ದೃಷ್ಟಿಯಿಂದ ಇದರಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹಿಂಭಾಗದಲ್ಲಿ ಅಳಡಿಸಲಾಗಿದೆ.
ಹಾನರ್ 8ಎಕ್ಸ್ ಮ್ಯಾಕ್ಸ್ ಹೇಗಿದೆ ಗೊತ್ತಾ?
ದೊಡ್ಡ ವೇರಿಯಂಟ್ ಫೋನ್ ಹಾನರ್ 8ಎಕ್ಸ್ ಮ್ಯಾಕ್ಸ್ ನ್ನು ಪರಿಗಣಿಸಿದರೆ ದೊಡ್ಡದಾದ ಅಂದರೆ 7.12-ಇಂಚಿನ ಡಿಸ್ಪ್ಲೇಯನ್ನು ಇದು ಹೊಂದಿದ್ದು 'pearl’ ನಾಚ್ ಮತ್ತು 2,244 x 1,080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಇನ್ನು ಇದರ ಫರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ ಇದು ಸ್ನ್ಯಾಪ್ ಡ್ರ್ಯಾಗನ್ 660/ ಸ್ನ್ಯಾಪ್ ಡ್ರ್ಯಾಗನ್ 636 ಸಾಕೆಟ್ ನಿಂದ ಕೆಲಸ ಮಾಡುತ್ತದೆ. ಇದರ ಚಿಪ್ ಸೆಟ್ 4GB RAM ಮತ್ತು 128GB ಎಕ್ಸರ್ಟನಲ್ ಸ್ಟೋರೇಜ್ ನೊಂದಿಗೆ ಪೇರ್ ಆಗಿರುತ್ತದೆ.
ಹಾನರ್ 8ಎಕ್ಸ್ ಮ್ಯಾಕ್ಸ್ ನ ಕ್ಯಾಮರಾ:
ಕ್ಯಾಮರಾ ವಿಚಾರವನ್ನು ಪ್ರಸ್ತಾಪಿಸುವುದಾದರೆ ಹಾನರ್ 8ಎಕ್ಸ್ ಮ್ಯಾಕ್ಸ್ ನಲ್ಲಿ 16MP + 2MP ಹಿಂಭಾಗದ ಕ್ಯಾಮರಾ ಇದೆ. ಕಂಪ್ಲೀಟ್ ಮಲ್ಟಿಮೀಡಿಯಾ ಡಿವೈಸ್ ನಂತೆ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶದಿಂದಾಗಿ ಇದರಲ್ಲಿ Dolby ಸರೌಂಡ್ ಸೌಂಡ್ ವ್ಯವಸ್ಥೆ ಇದೆ. ಇನ್ನು ಈ ಮೊಬೈಲ್ ನ ಬ್ಯಾಟರಿ ಸಾಮರ್ಥ್ಯವು 5,000mAh ಆಗಿದೆ.
ಹಾನರ್ 8ಎಕ್ಸ್ ನ ಬೆಲೆ:
ಹಾನರ್ 8ಎಕ್ಸ್ ನ ಚೀನಾದ ಪ್ರಾರಂಭಿಕ ಬೆಲೆಯು RMB 1,399 (Rs 14,693) ಅಂದರೆ ಇದು ಎಂಟ್ರಿ ಲೆವೆಲ್ ಫೋನ್ ಅಂದರೆ 4GB + 64GB ಮಾಡೆಲ್ ನ ಬೆಲೆ ಇಷ್ಟಾಗಿರುತ್ತದೆ. 6GB + 64GB ಸ್ಟೋರೇಜ್ ಆಯ್ಕೆಯ ಬೆಲೆಯು RMB 1,599 (~Rs 16,793). ಇನ್ನು ಟಾಪ್ ಎಂಡ್ ಅಂದರೆ 6GB + 128GB ಸ್ಟೋರೇಜ್ ಆಯ್ಕೆಯ ಬೆಲೆಯು RMB 1,899 (~Rs 19,944) ಆಗಿದೆ. ಇದು ಕಪ್ಪು, ಕೆಂಪು, ನೀಲಿ ಬಣ್ಣಗಳ ವೇರಿಯಲ್ಲಿ ಲಭ್ಯವಾಗಲಿದ್ದು ಸೆಪ್ಟೆಂಬರ್ 6 ರಿಂದ ಪ್ರೀಆರ್ಡರ್ ಮಾಡಲು ಗ್ರಾಹಕರಿಗೆ ಅವಕಾಶವಿರುತ್ತದೆ.
ಹಾನರ್ 8ಎಕ್ಸ್ ಮ್ಯಾಕ್ಸ್ ಬೆಲೆ:
ಇನ್ನು ಇದರ ಸಹೋದರ ಮೊಬೈಲ್ ಎಂತಲೇ ಕರೆಸಿಕೊಳ್ಳುವ ಹಾನರ್ 8 ಎಕ್ಸ ಮ್ಯಾಕ್ಸ್ ನ ಬೇಸ್ ವೇರಿಯಂಟ್ ನ ಬೆಲೆಯು RMB 1,499 (~Rs 15,743) ಆಗಿದೆ ಇನ್ನು ಟಾಪ್ ಎಂಡ್ ಮಾಡೆಲ್ ನ ಬೆಲೆ RMB 1,799 (~Rs 18,894). ಇದು ಕೂಡ ಸೆಪ್ಟೆಂಬರ್ 6 ರ ನಂತರದ ದಿನಗಳಲ್ಲಿ ಆರ್ಡರ್ ಮಾಡಲು ಲಭ್ಯವಾಗುತ್ತದೆ. ಸ್ನ್ಯಾಪ್ ಡ್ರ್ಯಾಗನ್ 660 ವೇರಿಯಂಟ್ ಜೊತೆಗೆ 6GB + 64GB ಸ್ಟೋರೇಜ್ ವ್ಯವಸ್ಥೆ ಇರುವ ಫೋನ್ ಮಾತ್ರ ಅಕ್ಟೋಬರ್ ನಲ್ಲಿ ಮಾರಾಟಕ್ಕೆ ಲಭ್ಯವಾಗುತ್ತದೆ ಎಂದು ತಿಳಿದುಬಂದಿದೆ.


Click it and Unblock the Notifications








