Honor: ಸೈಲೆಂಟ್ ಆಗಿ ಎಂಟ್ರಿ ಕೊಟ್ಟ ಹಾನರ್ 90 GT ಸ್ಮಾರ್ಟ್‌ಫೋನ್!..24GB RAM ಸಾಮರ್ಥ್ಯ!
ಇತ್ತೀಚಿನ ದಿನಗಳಲ್ಲಿ ಹಾನರ್ ಕಂಪೆನಿ ಒಂದರ ಹಿಂದೆ ಒಂದರಂತೆ ಹಲವು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿದೆ. ಇದೀಗ ಅದೇ ಹಾದಿಯಲ್ಲಿ ಹೊಸ ಹಾನರ್ 90 GT ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು 5,200mAh ಬ್ಯಾಟರಿಯನ್ನು ಒಳಗೊಂಡಿದೆ.
ಹೌದು, ಹಾನರ್ 90 GT ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ ಸೆನ್ಸಾರ್ ಅನ್ನು ಹೊಂದಿದೆ. ಜೊತೆಗೆ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ 3840Hz PWM ಡಿಮ್ಮಿಂಗ್ ಬೆಂಬಲಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ 90 GT ಡಿಸ್‌ಪ್ಲೇ ರಚನೆ
ಹಾನರ್ 90 GT ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2664 × 1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ನೇರ ಪರದೆಯ ಮೇಲೆ ಹಾನರ್‌ನ ಓಯಸಿಸ್ ಕಣ್ಣಿನ ರಕ್ಷಣೆ ತಂತ್ರಜ್ಞಾನವನ್ನು ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್, 3840Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಮತ್ತು 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ.
ಹಾನರ್ 90 GT ಪ್ರೊಸೆಸರ್ ಯಾವುದು?
ಹಾನರ್ 90 GT ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ MagicOS 7.2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 24GB RAM ಮತ್ತು 1TB ಸ್ಟೋರೇಜ್ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ. 24GB RAM ಅನ್ನು ಆನ್‌ಬೋರ್ಡ್‌ನಲ್ಲಿ ಪ್ಯಾಕ್ ಮಾಡುವ ಹಾನರ್ ಸಂಸ್ಥೆಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಹಾನರ್ 90 GT ಕ್ಯಾಮೆರಾ ಸೆಟಪ್ ಏನಿದೆ?
ಹಾನರ್ 90 GT ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50ಮೆಗಾಪಿಕ್ಸೆಲ್ ಸೋನಿ IMX906 ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಹಾನರ್ 90 GT ಬ್ಯಾಟರಿ ಮತ್ತು ಇತರೆ
ಹಾನರ್ 90 GT ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 100W ವೈರ್ಡ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಸಿ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ RF ವರ್ಧನೆ C1 ಚಿಪ್, X-Axis ಲೀನಿಯರ್ ಮೋಟಾರ್ ಮತ್ತು ಡ್ಯುಯಲ್ ಸ್ಪೀಕರ್‌ಗಳನ್ನು ಒಳಗೊಂಡಿವೆ.

ಹಾನರ್ 90 GT ಬೆಲೆ ಮತ್ತು ಲಭ್ಯತೆ
ಹಾನರ್ 90 GT ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಮಾತ್ರ ಅನಾವರಣಗೊಂಡಿದೆ. ಆದರಿಂದ ಇದರ ಬೇಸ್ ಮಾಡೆಲ್ 12GB + 256GB ರೂಪಾಂತರದ ಆಯ್ಕೆಗೆ CNY 2,599 (ಅಂದಾಜು 31,061ರೂ) ನಲ್ಲಿ ಪ್ರಾರಂಭವಾಗುತ್ತದೆ. 16GB + 256GB ಸ್ಟೋರೇಜ್ ಆಯ್ಕೆಯ ಬೆಲೆ CNY 2,899 (ಅಂದಾಜು 34,014ರೂ) ಮತ್ತು 16GB RAM + 512GB ಸ್ಟೋರೇಜ್ ಆಯ್ಕೆಯು CNY 3,199 (ಅಂದಾಜು 38,244ರೂ)ಬೆಲೆ ಹೊಂದಿದೆ. ಇದರ 24GB + 1TB ಮಾದರಿಯು CNY 3,699 (ಅಂದಾಜು 44,222ರೂ) ಬೆಲೆಯಲ್ಲಿ ಬರಲಿದೆ.


Click it and Unblock the Notifications








