Home
ಸುದ್ದಿಜಾಲ

Honor: ಹಾನರ್‌ ಸಂಸ್ಥೆಯ ಈ ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌! 200 MP ಕ್ಯಾಮೆರಾ ವಿಶೇಷ!

ಹಾನರ್‌ ಕಂಪೆನಿ ಇತ್ತೀಚಿಗೆ ಬಿಡುಗಡೆ ಮಾಡಿದ್ದ ಹಾನರ್‌ 90 5G ಫೋನ್‌ ಸಾಕಷ್ಟು ಸದ್ದು ಮಾಡುತ್ತಿದೆ. 200 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಒಳಗೊಂಡಿರುವುದು ಇದರ ಮೇನ್‌ ಹೈಲೈಟ್‌ ಆಗಿದೆ. ಇದೇ ಸ್ಮಾರ್ಟ್‌ಫೋನ್‌ ಇದೀಗ ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಪಡೆಯುವ ಮೂಲಕ ಗ್ರಾಹಕರನ್ನು ಅಚ್ಚರಿಗೆ ದೂಡಿದೆ.

ಹೌದು, ಹಾನರ್‌ 90 5G ಸ್ಮಾರ್ಟ್‌ಫೋನ್‌ ಅಮೆಜಾನ್‌ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಆಕರ್ಷಕ ವಿನ್ಯಾಸ ಹಾಗೂ ಅತ್ಯಾಕರ್ಷಕ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಈ ವರ್ಷ ಅತಿ ಹೆಚ್ಚು ಸದ್ದು ಮಾಡಿದ ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಹಾನರ್‌ 90 5G ಫೋನ್‌ ಮೇಲೆ ಅಮೆಜಾನ್‌ ನೀಡುತ್ತಿರುವ ಡಿಸ್ಕೌಂಟ್‌ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Honor: ಹಾನರ್‌ ಸಂಸ್ಥೆಯ ಈ ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌! 200 MP ಕ್ಯಾಮೆರಾ

ಹಾನರ್‌ 90 5G ಮೇಲೆ ಬಿಗ್‌ ಡಿಸ್ಕೌಂಟ್‌
ಹಾನರ್‌ 90 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ 47,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಮೇಲೆ ಇದೀಗ 27% ಡಿಸ್ಕೌಂಟ್‌ ನೀಡಲಾಗ್ತಿದೆ. ಆದರಿಂದ ಇದನ್ನು ನೀವು ಕೇವಲ 34,999ರೂ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ರಿಯಾಯಿತಿಯು 8GB + 256GB ಸ್ಟೋರೇಜ್‌ ಆಯ್ಕೆಗೆ ಮಾತ್ರ ಅನ್ವಯವಾಗಲಿದೆ. ಇನ್ನು ಇದನ್ನು ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಖರೀದಿಸಬಹುದು.

ಹಾನರ್‌ 90 5G ಡಿಸ್‌ಪ್ಲೇ ರಚನೆ ಹೇಗಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 120Hz ನ ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದ್ದು, 1,600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಒಳಗೊಂಡಿದೆ.

Honor: ಹಾನರ್‌ ಸಂಸ್ಥೆಯ ಈ ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌! 200 MP ಕ್ಯಾಮೆರಾ

ಹಾನರ್‌ 90 5G ಫೋನ್‌ ಪ್ರೊಸೆಸರ್‌ ಯಾವುದು?
ಹಾನರ್‌ 90 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಈ ಫೋನ್‌ ಆಂಡ್ರಾಯ್ಡ್‌ 13 ಆಧಾರಿತ ಮ್ಯಾಜಿಕ್‌ ಒಎಸ್‌ 7.1 ಸಪೋರ್ಟ್ ಹೊಂದಿದೆ. ಇದು 8GB + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಹಾನರ್‌ 90 5G ಕ್ಯಾಮೆರಾ ಸೆಟಪ್‌ ಏನಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 200 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಎರಡನೆ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್ ಮತ್ತು ಮ್ಯಾಕ್ರೋ 2-in-1 ಕ್ಯಾಮೆರಾ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಲೆನ್ಸ್‌ ಅನ್ನು ಒಳಗೊಂಡಿದೆ. ಹಾಗೆಯೇ 50 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.

Honor: ಹಾನರ್‌ ಸಂಸ್ಥೆಯ ಈ ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌! 200 MP ಕ್ಯಾಮೆರಾ

ಹಾನರ್‌ 90 5G ಬ್ಯಾಟರಿ ಸಾಮರ್ಥ್ಯ ಏನಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಕೂಡಾ ಪಡೆದುಕೊಂಡಿದ್ದು, ಇದಕ್ಕೆ ಸಪೋರ್ಟ್‌ ಆಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಒಳಗೊಂಡಿದೆ.

ಹಾನರ್‌ 90 5G ಕಲರ್‌ ಮತ್ತು ಲಭ್ಯತೆ
ಹಾನರ್‌ 90 5G ಮೊಬೈಲ್‌ 8GB + 256 GB ಸ್ಟೋರೇಜ್‌ ಆಯ್ಕೆಯು ಡಿಸ್ಕೌಂಟ್‌ನಲ್ಲಿ ದೊರೆಯುತ್ತಿದೆ. ಇದನ್ನು ನೀವು ಗ್ರೀನ್‌, ಸಿಲ್ವರ್ ಹಾಗೂ ಬ್ಲ್ಯಾಕ್‌ ಕಲರ್‌ ಆಯ್ಕೆ ಪಡೆದುಕೊಂಡಿದೆ.

Best Mobiles in India

English summary
Honor 90 Smartphone Gets a Massive Discount Offer In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+