Home
ಸುದ್ದಿಜಾಲ

200MP ಕ್ಯಾಮೆರಾ ಹೊಂದಿರುವ ಈ ಫೋನ್‌ ಮೇಲೆ ಬರೋಬ್ಬರಿ 40% ಡಿಸ್ಕೌಂಟ್‌!

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಶುರುವಾಗಿದೆ. ಈಗಾಗಲೇ ಲೈವ್‌ ಅಗಿರುವ ಈ ಸೇಲ್‌ನಲ್ಲಿ ವ್ಯಾಪಕ ಉತ್ಪನ್ನಗಳ ಮೇಲೆ ಹಿಂದೆಂದೂ ನೋಡಿರದ ಡಿಸ್ಕೌಂಟ್‌ ನಿಡಲಾಗ್ತಿದೆ. ಅದರಲ್ಲೂ ಇತ್ತೀಚಿಗೆ ಬಿಡುಗಡೆ ಅಗಿದ್ದ ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಆಫರ್‌ ನೀಡುತ್ತಿದೆ. ಇದರಲ್ಲಿ ಹಾನರ್‌ 90 5G ಸ್ಮಾರ್ಟ್‌ಫೋನ್‌ ಕೂಡ ಸೇರಿದ್ದು, ಬಿಗ್‌ ಡಿಸ್ಕೌಂಟ್‌ನಲ್ಲಿದೆ.

ಹೌದು, ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಇದೀಗ ಎಲ್ಲರಿಗೂ ಲೈವ್‌ ಆಗಿದೆ. ಸೇಲ್‌ ಪ್ರಾರಂಭವಾಗ್ತಿದ್ದ ಹಾಗೇ ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದು, ಸ್ಮಾರ್ಟ್‌ಫೋನ್‌ಗಳ ಮೇಲಿನ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಹಾನರ್‌ 90 5G ಸ್ಮಾರ್ಟ್‌ಫೋನ್‌ (HONOR 90)ಮೇಲೆ ಬರೋಬ್ಬರಿ 40% ಡಿಸ್ಕೌಂಟ್‌ ನೀಡುತ್ತಿರುವುದು ಅಚ್ಚರಿ ಮೂಡಿಸಿದೆ. ಹಾಗಾದ್ರೆ ಹಾನರ್‌ 90 5G ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ನಂತರದ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

200MP ಕ್ಯಾಮೆರಾ ಹೊಂದಿರುವ ಈ ಫೋನ್‌ ಮೇಲೆ ಬರೋಬ್ಬರಿ 40% ಡಿಸ್ಕೌಂಟ್‌!

ಡಿಸ್ಕೌಂಟ್‌ ನಂತರದ ಬೆಲೆ ಎಷ್ಟಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ತಾಣದಲ್ಲಿ 47,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಆದರೆ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಬರೋಬ್ಬರಿ 40% ಡಿಸ್ಕೌಂಟ್‌ ಪಡೆದಿರುವುದರಿಂದ ಇದರ ಬೆಲೆ 28,999ರೂ ಬೆಲೆಗೆ ಇಳಿಕೆಯಾಗಿದೆ. ಈ ಡಿಸ್ಕೌಂಟ್‌ 8GB + 256GB ಸ್ಟೋರೇಜ್‌ ಅಯ್ಕೆಗೆ ಅನ್ವಯವಾಗಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಮೇಲೆ ವಿವಿಧ ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಖರೀದಿಸುವವರಿಗೆ ಇನ್ನಷ್ಟು ಹೆಚ್ಚಿನ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. ಎಕ್ಸ್‌ಚೆಂಜ್‌ ಆಫರ್‌ ಕೂಡ ದೊರೆಯಲಿದೆ.

ಹಾನರ್‌ 90 5G ಫೀಚರ್ಸ್‌ ಹೇಗಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ 1,200 x 2,664 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಡಿಸ್‌ಪ್ಲೇ 120Hz ನ ರಿಫ್ರೆಶ್ ರೇಟ್‌ ಸಪೋರ್ಟ್‌ ಪಡೆದಿದ್ದು, 1,600 ನೀಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಪಡೆದುಕೊಂಡಿದೆ.

200MP ಕ್ಯಾಮೆರಾ ಹೊಂದಿರುವ ಈ ಫೋನ್‌ ಮೇಲೆ ಬರೋಬ್ಬರಿ 40% ಡಿಸ್ಕೌಂಟ್‌!

ಹಾನರ್‌ 90 5G ಪ್ರೊಸೆಸರ್‌ ಯಾವುದು?
ಹಾನರ್‌ 90 5G ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು Adreno 644 GPU ಸಪೋರ್ಟ್‌ ಪಡೆದಿದ್ದು, ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ ಓಎಸ್ 7.1 ನೊಂದಿಗೆ ರವಾನಿಸುತ್ತದೆ. ಹಾಗೆಯೇ 8GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿದೆ.

ಹಾನರ್‌ 90 5G ಕ್ಯಾಮೆರಾ ಸೆಟಪ್‌ ಏನಿದೆ?
ಹಾನರ್‌ 90 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

200MP ಕ್ಯಾಮೆರಾ ಹೊಂದಿರುವ ಈ ಫೋನ್‌ ಮೇಲೆ ಬರೋಬ್ಬರಿ 40% ಡಿಸ್ಕೌಂಟ್‌!

ಹಾನರ್‌ 90 5G ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹಾನರ್‌ 90 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ. ಇದು 66W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 6, ಬ್ಲೂಟೂತ್ 5.2, ಜಿಪಿಎಸ್‌, NFC, ಮತ್ತು ಯುಎಸ್‌ಬಿ ಟೈಪ್-C ಪೋರ್ಟ್ ಅನ್ನು ಸಪೋರ್ಟ್ ಒಳಗೊಂಡಿದೆ.
Best Mobiles in India

English summary
Honor 90 5G features a 200 MP primary sensor supported by the Honor Image Engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+