ಹಾನರ್‌ ಸಂಸ್ಥೆಯಿಂದ ಹಾನರ್‌ 9A, 9C, ಮತ್ತು 9S ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಚೀನಾದ ಟೆಕ್‌ ದೈತ್ಯ ಹುವಾವೇ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಹುವಾವೇ ತನ್ನ ಸಬ್‌ ಬ್ರ್ಯಾಂಡ್‌ ಹಾನರ್‌ ಸ್ಮಾರ್ಟ್‌ಫೋನ್‌ಗಳ ಮೂಲಕವು ಸೌಂಡ್‌ ಮಾಡ್ತಿದೆ. ಈಗಾಗಲೇ ಹಾನರ್‌ ಬ್ರ್ಯಾಂಡ್‌ ಅಡಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದ್ದು, ಸದ್ಯ ಇದೀಗ ಹಾನರ್‌ ತನ್ನ ಹಾನರ್‌ 9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ.

ಹುವಾವೇ

ಹೌದು, ಹುವಾವೇ ಸಬ್‌ಬ್ರ್ಯಾಂಡ್‌ ಹಾನರ್‌ ಕಂಪೆನಿ ತನ್ನ ಹಾನರ್‌ 9 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಈ ಸರಣಿಯಲ್ಲಿ ಹಾನರ್ 9A, ಹಾನರ್ 9C, ಮತ್ತು ಹಾನರ್ 9S ಎಂಬ ಮೂರು ಹೊಸ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್‌ ಮಾಡಿದೆ. ಅಲ್ಲದೆ ಈ ಮೂರು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಲಭ್ಯವಾಗಲಿವೆ. ಇನ್ನು ಹಾನರ್ 9C ಸ್ಮಾರ್ಟ್‌ಫೋನ್‌ ಕಿರಿನ್ 710A SoC ಪ್ರೊಸೆಸರ್‌ ಹೊಂದಿದ್ದರೆ, ಹಾನರ್ 9A ಮತ್ತು ಹಾನರ್ 9S ಎರಡು ಸ್ಮಾರ್ಟ್‌ಫೋನ್‌ಗಳು ಮೀಡಿಯಾ ಟೆಕ್ MT6762 R ಪ್ರೊಸೆಸರ್ ಅನ್ನು ಒಳಗೊಂಡಿವೆ. ಇದಲ್ಲದೆ ಈ ಮೂರು ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಹಾನರ್‌9C ಸ್ಮಾರ್ಟ್‌ಫೋನ್‌

ಹಾನರ್‌9C ಸ್ಮಾರ್ಟ್‌ಫೋನ್‌

ಹಾನರ್‌ 9C ಸ್ಮಾರ್ಟ್‌ಫೋನ್‌ 720x1,560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದ್ದು, 6.39 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು 269 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಅಲ್ಲದೆ ಈ ಡಿಸ್‌ಪ್ಲೇಯು ಪಂಚ್‌ ಹೋಲ್‌ ವಿನ್ಯಾಸವನ್ನ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು ವೀಡಿಯೋ ಕರೆ ಹಾಗೂ ವೀಡಿಯೊ ವೀಕ್ಷಣೆಗೆ ಯೋಗ್ಯವಾದ ಡಿಸ್‌ಪ್ಲೆ ವಿನ್ಯಾಸವನ್ನ ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್ ನಾಲ್ಕು ಕಾರ್ಟೆಕ್ಸ್-ಎ 73 ಕೋರ್‌ಗಳನ್ನು 2.0GHz ಗಡಿಯಾರದಲ್ಲಿ ಮತ್ತು ನಾಲ್ಕು ಕಾರ್ಟೆಕ್ಸ್-ಎ 53 ಕೋರ್‌ಗಳನ್ನು ಹೊಂದಿರುವ ಆಕ್ಟಾ-ಕೋರ್ ಕಿರಿನ್ 710A SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಇನ್ನು ಹಾನರ್‌ 9C ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಈ ಸ್ಮಾರ್ಟ್‌ಫೋನ್‌ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ , 4G VOLTE, ಬ್ಲೂಟೂತ್ ವಿ 5.0, ಜಿಪಿಎಸ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಹಾನರ್ 9A ಸ್ಮಾರ್ಟ್‌ಫೋನ್‌

ಹಾನರ್ 9A ಸ್ಮಾರ್ಟ್‌ಫೋನ್‌

ಹಾನರ್‌ 9A ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 6.3 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು 278PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ MT6762R SoC ಪ್ರೊಸೆಸರ್‌ ವೇಗವನ್ನ ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 3GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮತ್ತು ಬ್ಯಾಟರಿ

ಕ್ಯಾಮೆರಾ ಮತ್ತು ಬ್ಯಾಟರಿ

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಶೂಟರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ, 4G LTE, ಬ್ಲೂಟೂತ್ ವಿ 5.0, ಜಿಪಿಎಸ್ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಹಾನರ್ 9S ಸ್ಮಾರ್ಟ್‌ಫೋನ್‌

ಹಾನರ್ 9S ಸ್ಮಾರ್ಟ್‌ಫೋನ್‌

ಇನ್ನು ಹಾನರ್‌ 9S ಸ್ಮಾರ್ಟ್‌ಫೋನ್‌ 720x1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ 5.45 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ MT6762R SoC ಪ್ರೊಸೆಸರ್‌ ವೇಗವನ್ನ ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ 2GB RAM ಮತ್ತು 32GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನ ಹೊಂದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 3,020mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಹಾನರ್‌9C ಸ್ಮಾರ್ಟ್‌ಫೋನ್‌ 4GB RAM + 64GB ಸಂಗ್ರಹ ಸಾಮರ್ಥ್ಯದಲ್ಲಿ ಲಬ್ಯವಾಗಲಿದೆ ಇದರ ಬೆಲೆ RUB 12,990 (ಸುಮಾರು 13,300 ರೂ.) ಆಗಿದೆ. ಇದು ನೀಲಿ ಮತ್ತು ಮಿಡ್ನೈಟ್ ಕಪ್ಪು ಬಣ್ಣ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದಲ್ಲದೆ ಹಾನರ್ 9A 3GB RAM + 64GB ಶೇಖರಣಾ ರೂಪಾಂತರದಲ್ಲಿ ಲಭ್ಯವಿದೆ, ಇದರ ಬೆಲೆಯನ್ನು RUB 10,990 (ಸರಿಸುಮಾರು 11,300 ರೂ.)ಗೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ನೀಲಿ, ಹಸಿರು ಮತ್ತು 'ದಿ ಬ್ಲ್ಯಾಕ್' ಎಂಬ ಮೂರು ಬಣ್ಣ ಆಯ್ಕೆಗಳನ್ನು ಹೊಂದಿದೆ. ಹಾನರ್ 9S 2GB RAM+32GB ಸಂಗ್ರಹ ಸಾಮರ್ಥ್ಯದ RUB 6,990 (ಸುಮಾರು 7,200 ರೂ.)ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ನೀಲಿ, ಕೆಂಪು ಮತ್ತು 'ದಿ ಬ್ಲ್ಯಾಕ್' ಬಣ್ಣ ಆಯ್ಕೆಗಳನ್ನು ಲಬ್ಯವಾಗಲಿದೆ.

Best Mobiles in India

English summary
Honor 9C, Honor 9A, and Honor 9S come with a different set of cameras on the back and different battery capacities.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X