ಫ್ಲಿಪ್‌ಕಾರ್ಟ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಇತಿಹಾಸದ ಆಫರ್..!
ಭಾರತೀಯ ಇ ಕಾರ್ಮಸ್ ಮಾರುಕಟ್ಟೆಯ ದೈತ್ಯ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಹೊಸದೊಂದು ಸೇಲ್ ಅನ್ನು ಆಯೋಜನೆ ಮಾಡಿದೆ. ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಳವನ್ನು ಆಯೋಜಿಸಿದ್ದು, ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್, ಎಕ್ಸ್‌ಚೇಂಜ್ ಸೇರಿದಂತೆ ಸಾಕಷ್ಟು ಆಫರ್ ಗಳನ್ನು ನೀಡಲು ಮುಂದಾಗಿದೆ. ನೀವು ಹಾನರ್ ಸ್ಮಾರ್ಟ್‌ಪೋನ್‌ಗಳನ್ನು ಕೊಳ್ಳುವ ಪ್ಲಾನ್ ಮಾಡುತ್ತಿದ್ದರೇ ಇದು ಉತ್ತಮ ಸಂದರ್ಭವಾಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸೆಪ್ಟೆಂಬರ್ 18 ರಿಂದ 21ರ ವರಗೆ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಳ ನಡೆಯಲಿದ್ದು, ಇದರಲ್ಲಿ ಬಳಕೆದಾರರಿಗೆ ಹಾನರ್ ಲಾಂಚ್ ಮಾಡಿರುವ ಎಲ್ಲಾ ಸ್ಮಾರ್ಟ್‌ಫೋನ್ ಮೇಲೆ ಖಚಿತ ಡಿಸ್ಕೌಂಟ್ ಇಲ್ಲವೇ ಆಫರ್ ಅನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಹಾನರ್ ಸ್ಮಾರ್ಟ್‌ಫೋನ್ ಕೊಳ್ಳುವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಳದ ಕುರಿತು ಮಾಹಿತಿಯೂ ಮುಂದಿದೆ.

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್:
ಹಾನರ್ 9 ಲೈಟ್ 4 GB RAM / 64 GB ಇಂಟರ್ನಲ್ ಮೆಮೊರಿಯ ಆವೃತ್ತಿಯ ಸ್ಮಾರ್ಟ್‌ಫೋನ್ ರೂ.14999ಕ್ಕೆ ಮಾರಾಟವಾಗುತ್ತಿದ್ದು, ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಳದಲ್ಲಿ ರೂ.3000ದ ವರೆಗೂ ಎಕ್ಸ್‌ಚೇಂಜ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಹಾನರ್ 10 ಸ್ಮಾರ್ಟ್‌ಫೋನ್
ಹಾನರ್ 10 6 GB RAM ಮತ್ತು 128 GB ಇಂಟರ್ನಲ್ ಮೆಮೊರಿಯ ಫೋನ್ ಮೇಲೆ ರೂ.5000 ದರ ಕಡಿತವನ್ನು ಕಾಣಬಹುದಾಗಿದ್ದು, ಇದು ಬೆಲೆ ಕಡಿತದ ನಂತರದಲ್ಲಿ ರೂ.27999ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಒರಿಜಿನಲ್ ಬೆಲೆ ರೂ.32999 ಆಗಿದೆ.

ಹಾನರ್ 9i ಸ್ಮಾರ್ಟ್‌ಫೋನ್;
ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ನಾಲ್ಕು ಕ್ಯಾಮೆರಾದ ಹಾನರ್ 9i ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಕಡಿತವನ್ನು ಕಾಣಬಹುದಾಗಿದ್ದು, ಈ ಸ್ಮಾರ್ಟ್‌ಫೋನ್ ಮೇಳೆ ರೂ.1000 ಕಡಿಮೆ ಮಾಡಲಾಗಿದ್ದು, ರೂ.16999ಕ್ಕೆ ಮಾರಾಟವಾಗುತ್ತಿದೆ.

ಹಾನರ್ 9N:
ಹೊಸದಾಗಿ ಮಾರುಕಟ್ಟೆಗೆ ಕಾಲಿಟ್ಟಿರುವ ಹಾನರ್ 9N ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಕಡಿತವನ್ನು ಮಾಡಲಾಗಿಲ್ಲ., ಆದರೆ ಎರಡು ಆವೃತ್ತಿಯ ಸ್ಮಾರ್ಟ್‌ಫೋನ್ ಮೇಳೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಲಾಗಿದೆ. ಹಳೇಯ ಫೋನ್ ಅನ್ನು ನೀಡಿ ಕ್ರಮವಾಗಿ ರೂ.10999 ಹಾಗೂ ರೂ.12999ಕ್ಕೆ ಈ ಸ್ಮಾರ್ಟ್‌ಫೋನ್ ಖರೀದಿಸಬಹುದಾಗಿದೆ.

ಹಾನರ್ 7S:
ಮಾರುಕಟ್ಟೆಯಲ್ಲಿ ಮೊನ್ನೆ ಕಾಣಿಸಿಕೊಂಡ ಹಾನರ್ 7S ಸ್ಮಾರ್ಟ್‌ಫೋನ್ ರೂ.6999ಕ್ಕೆ ಮಾರಾಟವಾಗುತ್ತಿದ್ದು, ಸೆಪ್ಟೆಂಬರ್ 19 -21 ರಂದು ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ.


Click it and Unblock the Notifications