ಹಾನರ್‌ ನಿಂದ ಸದ್ಯದಲ್ಲೇ ಹಾನರ್‌ 9Xಫೋನ್ ಮತ್ತು ಮ್ಯಾಜಿಕ್ ವಾಚ್ ಲಾಂಚ್‌!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹೊಸ ಸ್ಮಾರ್ಟ್‌ಫೋನ್‌ಗಳ ಭರಾಟೆ ನಡೆಯುತ್ತಲೇ ಇರುತ್ತೆ. ಹೊಸ ಫಿಚರ್ಸ್‌ಗಳ ಸ್ಮಾರ್ಟ್‌ಫೊನ್‌ಗಳನ್ನ ಹೊರ ತರೋದಕ್ಕೆ ಸ್ಮಾರ್ಟ್‌ಫೋನ್‌ ಕಂಪೆನಿಗಳ ನಡುವೆ ಪೈಪೋಟಿಯುತ ಮಾರುಕಟ್ಟೆ ಇದೆ. ಸದ್ಯ ಇದೀಗ ಹಾನರ್‌ ಕಂಪೆನಿ ಕೂಡ 2020ರ ಜನವರಿ ತಿಂಗಳಲ್ಲಿ ಭಾರತದಲ್ಲಿ ಹಾನರ್ 9 ಎಕ್ಸ್ ಮತ್ತು ಹಾನರ್ ಮ್ಯಾಜಿಕ್ ವಾಚ್ 2 ಅನ್ನು ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸಿಕೊಂಡಿರೋದಾಗಿ ಹೇಳಿದೆ.

ಸ್ಮಾರ್ಟ್‌ಫೋನ್‌

ಹೌದು ಸ್ಮಾರ್ಟ್‌ಫೋನ್‌ ಕಂಪೆನಿಗಳಲ್ಲಿ ಒಂದಾದ ಹಾನರ್‌ ಕಂಪೆನಿ ತನ್ನ ಮುಂದಿನ ಹೊಸ ಆವೃತ್ತಿಯಾದ ಹಾನರ್ 9X ಸ್ಮಾರ್ಟ್‌ಫೋನ್‌ ಜೊತೆಗೆ ಹಾನರ್ ಮ್ಯಾಜಿಕ್ ವಾಚ್ 2 ಡಿವೈಸ್‌ ಅನ್ನ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದೆ. ಇನ್ನು ಈಗಾಗ್ಲೇ ಹಾನರ್ 9X ಚೀನಾದಲ್ಲಿ ಬಿಡುಗಡೆ ಆಗಿತ್ತು. ಹಾನರ್ 9X ಕಿರಿನ್ 710SOC ಪ್ರೊಸೆಸರ್‌ ಒಳಗೊಂಡಿದ್ದು ಸುಧಾರಿತ ವಿನ್ಯಾಸ ಮತ್ತು ಕ್ಯಾಮೆರಾಗಳನ್ನು ಹೊಂದಿದೆ. ಹಾಗಾದ್ರೆ ಹಾನರ್ 9X ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಹಾನರ್ 9X ಸ್ಮಾರ್ಟ್‌ಫೋನ್‌ 6.59-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಜೊತೆಗೆ ಎಲ್‌ಸಿಡಿ ಡಿಸ್ಪ್ಲೇಯನ್ನು ಒಳಗೊಂಡಿದೆ. ಫುಲ್ ವ್ಯೂ ನಾಚ್‌ಲೆಸ್ ಡಿಸ್ಪ್ಲೇ ಇದಾಗಿದ್ದು,
ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವ ನೀಡುತ್ತದೆ. ಜೊತೆಗೆ ಚೆವ್ರಾನ್‌ಮಾದರಿಯ ಬಾಗಿದ ಗಾಜಿನ ಡಿಸ್‌ಪ್ಲೇ ಇದಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಈ ಸ್ಮಾರ್ಟ್‌ಫೋನ್‌ ಕಿರಿನ್ 710F SOC ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್ 9 ಪೈ ಆಧಾರಿತ EMUI 9.1F SOC ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಅಲ್ಲದೆ 64GBRAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು ಮೆಮೊರಿ ಕಾರ್ಡ್‌ ಮೂಲಕ 512 GBವರೆಗೂ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಹಾನರ್ 9X ಟ್ರಪಲ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌ ಎರಡನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್‌ ಮೂರನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನ ಒಳಗೊಂಡಿದೆ. ಅಲ್ಲದೆ 16 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಹಾನರ್‌ನ ಮೊದಲ ಪಾಪ್-ಅಪ್ ಕ್ಯಾಮೆರಾ ಫೋನ್ ಆಗಿದ್ದು, ಸ್ಮಾರ್ಟ್‌ಫೋನ್‌ ಹಿಂಭಾಘದಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಅನ್ನ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹಾನರ್ 9X 6.4,000MAH ಬ್ಯಾಟರಿ ಪ್ಯಾಕ್‌ ಆಪ್‌ನ ಹೊಂದಿದ್ದು ಟೈಪ್-ಸಿ ಪೋರ್ಟ್ ಮೂಲಕ ವೇಗವಾಗಿ ಚಾರ್ಜಿಂಗ್ ಅನ್ನ ಬೆಂಬಲಿಸಲಿದೆ. ಇನ್ನು ವೈಫೈ, ಬ್ಲೂಟೂತ್‌, ಕನೆಕ್ಟಿವಿಟಿಯನ್ನ ಒಳಗೊಂಡಿದ್ದು, ಮಿಡ್‌ನೈಟ್‌ ಬ್ಲ್ಯಾಕ್‌ ಹಾಗೂ ಸಫೈರ್‌ ಬ್ಲೂ ಕಲರ್‌ನಲ್ಲಿ ಬರಲಿದೆ.

ಹಾನರ್ ಮ್ಯಾಜಿಕ್ ವಾಚ್ 2

ಹಾನರ್ ಮ್ಯಾಜಿಕ್ ವಾಚ್ 2

ಇನ್ನು ಹಾನರ್‌ ಬಿಡುಗಡೆ ಮಾಡಲಿರುವ ಹಾನರ್ ಮ್ಯಾಜಿಕ್ ವಾಚ್ 2 15 ಫಿಟ್‌ನೆಸ್ ಟ್ರ್ಯಾಕಿಂಗ್ ಮೋಡ್‌, ಹಾರ್ಟ ಬೀಟಿಂಗ್‌ ಕೌಂಟ್‌ ಮಾನಿಟರ್ ಮತ್ತು ಸ್ಲೀಪ್ ಟ್ರ್ಯಾಕಿಂಗ್‌ ಅನ್ನ ಒಳಗೊಂಡಿರಲಿದೆ. ಅಲ್ಲದೆ ಈ ಸ್ಮಾರ್ಟ್‌ ವಾಚ್‌ 1.2 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿರಲಿದ್ದು ಹ್ಯಾಂಡ್ಸ್-ಫ್ರೀ ಬ್ಲೂಟೂತ್ ಕರೆ, ಆಫ್‌ಲೈನ್ ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು ಒತ್ತಡ ಮಾನಿಟರ್‌ ಮಾಡುವ ಫೀಚರ್ಸ್‌ಗಳನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

Read more about:
English summary
Honor will be launching the Honor 9X and Honor Magic Watch 2 in India next month. The company confirmed the India launch of these two products to 91mobiles at a briefing in Shenzhen, China. To recall, Honor 9X was launched in China back in July, while the Magic Watch 2 made its debut last month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X