ಹಾನರ್‌ನಿಂದ ಭಾರತದಲ್ಲಿ ಹಾನರ್ 9X ಸ್ಮಾರ್ಟ್‌ಫೋನ್‌ ಲಾಂಚ್‌!

|

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಎಂಟ್ರಿ ಕೊಟ್ಟಿದೆ. ಈಗಾಗ್ಲೆ ಹಲವು ಸ್ಮಾರ್ಟ್‌ಫೋನ್‌ ಗಳನ್ನ ಬಿಡುಗಡೆ ಮಾಡಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿರುವ ಚೀನಾ ಮೂಲದ ಹಾನರ್‌ ಕಂಪೆನಿ ಇದೀಗ ಹಾನರ್ 9X ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. 48 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 6.59-ಇಂಚಿನ ಡಿಸ್ಪ್ಲೇ, ಹೊಂದಿರುವ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಹೌದು

ಹೌದು ಹಾನರ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಹಾನರ್‌ 9X ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು ಕಡಿಮೆ ಬಜೆಟ್‌ನಲ್ಲಿ ದೊರೆಯಲಿದೆ. ಅಲ್ಲದೆ ಇದೇ ಜನವರಿ 19ರಿಂದ ಫ್ಲಿಪ್‌ಕಾರ್ಟ್ ತಾಣದಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನ ಖರೀದಿಸಬಹುದಾಗಿದೆ. ಯುವ ಜನತೆಯನ್ನು ಆಕರ್ಷಿಸುವಂತ ವೈಶಿಷ್ಟ್ಯತೆಗಳನ್ನ ಒಳಗೊಂಡಿರುವ ಹಾನರ್ 9X ಸ್ಮಾರ್ಟ್‌ಫೋನ್‌ ಇನ್ನು ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ 1080 x 2340 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 6.59 ಇಂಚಿನ ಎಲ್‌ಸಿಡಿ ಫುಲ್‌ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು. ಬೆಝೆಲ್‌ ಲೆಸ್‌ ಡಿಸ್‌ಪ್ಲೇ ಇದಾಗಿದೆ. ಈ ಡಿಸ್‌ಪ್ಲೇ 19.5:9 ಆಸ್ಪೆಕ್ಟ್‌ ರೇಶಿಯೋ ಹೊಂದಿದೆ. ಸ್ಕ್ರೀನ್-ಟು-ಬಾಡಿ ಅನುಪಾತ 91% ರಷ್ಟಿದ್ದು, 391 ಪಿಪಿ ಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಅಲ್ಲದೆ ಡಿಸ್‌ಪ್ಲೇ ವಿನ್ಯಾಸ ಉತ್ತಮವಾಗಿದ್ದು ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವ ನೀಡಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಹಾನರ್ 9X ಸ್ಮಾರ್ಟ್‌ಫೋನ್‌ ಹಿಸಿಲಿಕಾನ್ ಕಿರಿನ್ 710f ಆಕ್ಟಾ-ಕೋರ್ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು ಮೆಮೊರಿ ಕಾರ್ಡ್‌ ಮೂಲಕ 512GB ವರೆಗೂ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. Mali-G51 MP4 ಅನ್ನು ಒಳಗೊಂಡಿದೆ.

ಕ್ಯಾಮೆರಾ ಮಾದರಿ

ಕ್ಯಾಮೆರಾ ಮಾದರಿ

ಹೊಸ ಮಾದರಿಯ ಹಾನರ್ 9X ಸ್ಮಾರ್ಟ್‌ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದ್ದು, ಡಿಜಿಟಲ್ ಜೂಮ್, ಆಟೋ ಫ್ಲ್ಯಾಶ್, ಫೇಸ್ ಡಿಟೆಕ್ಷನ್, ಟಚ್‌ ಆಂಡ್‌ ಫೋಕಸ್ ಸೆನ್ಸಾರ್‌ ಅನ್ನ ಒಳಗೊಂಡಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಹಾನರ್ 9X ಸ್ಮಾರ್ಟ್‌ಫೋನ್‌ 4,000Mah ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5, ಜಿಪಿಎಸ್, ವೈ-ಫೈ, ಟೈಪ್-ಸಿ ಮತ್ತು ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳನ್ನು ಬೆಂಬಲಿಸಲಿದ್ದು, USB Type-C ಯನ್ನ ಹೊಂದಿದೆ. ಅಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಸ್ಯಾಫೈರ್ ಬ್ಲೂ ಮತ್ತು ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಬೆಲೆ

ಬೆಲೆ

ಹಾನರ್ 9X ಸ್ಮಾರ್ಟ್‌ಫೋನ್‌ ಬೆಲೆ ಭಾರತದಲ್ಲಿ 13,999 ರೂ ಆಗಿದ್ದು, ಜನವರಿ 19 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಅಲ್ಲದೆ ಪ್ರಾರಂಭಿಕ ಮಾರಾಟದಲ್ಲಿ ಈ ಸ್ಮಾರ್ಟ್‌ಫೋನ್‌ ಮೇಲೆ 12,999 ರೂ.ಗಳ ರಿಯಾಯಿತಿ ದರ ದೊರೆಯಲ್ಲಿದೆ, ಅಲ್ಲದೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಶಾಪಿಂಗ್‌ ಮಾಡಿದರೆ ಶೇಕಡಾ 10 ರಷ್ಟು ಇನ್‌ಸ್ಟಂಟ್‌ ಡಿಸ್ಕೌಂಟ್‌ ದೊರೆಯಲಿದೆ.

Best Mobiles in India

English summary
The Honor 9X has been launched in India. This handset was first launched in China alongside the Honor 9X Pro in July 2019. Some of the key highlights of the Honor 9X are a 48-megapixel triple rear camera setup, 6.59-inch display, 4,000mAh battery and more. It is the cheapest phone in India to offer a pop-up selfie camera. Interested buyers will be able to buy the new Honor device via Flipkart. Read on to find out everything about the Honor 9X.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X