ಹಾನರ್‌ನಿಂದ ಬ್ಯಾಂಡ್ 5i ಮತ್ತು ಹಾನರ್ ಮ್ಯಾಜಿಕ್ ವಾಚ್ 2 ಬಿಡುಗಡೆ!

|

ಚೀನಾ ಮೂಲದ ಹಾನರ್‌ ಕಂಪೆನಿ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ ಅನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆಯಾಗಿರುವ ಹಾನರ್ ಬ್ಯಾಂಡ್ 5I ಫಿಟ್ನೆಸ್ ಬ್ಯಾಂಡ್ ಮತ್ತು ಹಾನರ್ ಮ್ಯಾಜಿಕ್ ವಾಚ್ 2 ಸ್ಮಾರ್ಟ್ ವಾಚ್, ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ಪ್ರಾಡಕ್ಟ್‌ಗಳಾಗಿದ್ದು, ತನ್ನ ವಿಶಿಷ್ಟ ಫೀಚರ್ಸ್‌ಗಳಿಂದಲೇ ಗ್ರಾಹಕರನ್ನ ಸೆಳೆಯುವ ಹಾನರ್‌ ಮತ್ತೆ ಕಮಾಲ್‌ ಮಾಡುವ ಸೂಚನೆ ನೀಡಿದೆ.

ಹೌದು

ಹೌದು, ಹಾನರ್‌ ಕಂಪೆನಿ ಭಾರತದಲ್ಲಿ ಹಾನರ್ ಬ್ಯಾಂಡ್ 5I ಫಿಟ್ನೆಸ್ ಬ್ಯಾಂಡ್ ಮತ್ತು ಹಾನರ್ ಮ್ಯಾಜಿಕ್ ವಾಚ್ 2 ಸ್ಮಾರ್ಟ್ ವಾಚ್ ಅನ್ನ ಲಾಂಚ್‌ ಮಾಡಿದೆ. ಇನ್ನು ಹಾನರ್‌ ಬ್ಯಾಂಡ್‌ 5i ಯುಎಸ್‌ಬಿ ಪೋರ್ಟ್‌ ಪ್ಲಗ್ ಇನ್ ಚಾರ್ಜಿಂಗ್‌ ವ್ಯವಸ್ಥೆಯ್ನ್ನ ಹೊಂದಿದ್ದರೆ, ಹಾನರ್ ಮ್ಯಾಜಿಕ್ ವಾಚ್ 2 ಜಿಪಿಎಸ್ ಬೆಂಬಲವನ್ನು ಹೊಂದಿರುವ ಸ್ಮಾರ್ಟ್‌ವಾಚ್‌ ಆಗಿದ್ದು,
ಹಾನರ್ ಬ್ಯಾಂಡ್ 5i, 1,999 ರೂ ಬೆಲೆ ಹೊಂದಿದೆ.

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i 160x80 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 0.96-ಇಂಚಿನ ಟಚ್-ಸೆನ್ಸಿಟಿವ್ ಕಲರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 3 ಆಕ್ಸಿಸ್‌ ಇಂಟೇರಿಯಲ್‌ ಸೆನ್ಸಾರ್‌, ಆಪ್ಟಿಕಲ್ ಹಾರ್ಟ್‌ಬೀಟ್‌ ಸೆನ್ಸಾರ್‌, ಅನ್ನು ಒಳಗೊಂಡಿದೆ. ಅಲ್ಲದೆ ಈ ಫಿಟ್ನೆಸ್‌ ಬ್ಯಾಂಡ್‌ ಬ್ಲೂಟೂತ್ ವಿ 4.2 ಮೂಲಕ ನಿರ್ವಹಿಸುತ್ತದೆ. ಅಲ್ಲದೆ ಆಂಡ್ರಾಯ್ಡ್ 4.4 ಮತ್ತು ಅದಕ್ಕಿಂತ ಹೆಚ್ಚಿನವುಗಳಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಕನೆಕ್ಟಿವಿಟಿಯನ್ನ ಹೊಂದಿಸಬಹುದಾಗಿದೆ. ಇದು 91mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದೆ. ಜೊತೆಗೆ ಹಾನರ್ ಬ್ಯಾಂಡ್ 5i ಯುಎಸ್ಬಿ ಪೋರ್ಟ್‌ಗೆ ಪ್ಲಗ್ ಮಾಡುವ ಚಾರ್ಜಿಂಗ್‌ ಸಾಮರ್ಥ್ಯವನ್ನ ಹೊಂದಿದ್ದು, ಚಾರ್ಜಿಂಗ್‌ಗಾಗಿ ಸುಮಾರು 1.5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.

ಹಾನರ್ ಮ್ಯಾಜಿಕ್ ವಾಚ್ 2

ಹಾನರ್ ಮ್ಯಾಜಿಕ್ ವಾಚ್ 2

ಹಾನರ್ ಮ್ಯಾಜಿಕ್ ವಾಚ್ 2, ಸ್ಮಾರ್ಟ್‌ವಾಚ್‌ ಸ್ಟೇನ್ಲೆಸ್ ಸ್ಟೀಲ್ ಬಿಲ್ಡ್ ಹೊಂದಿದ್ದು, 42 ಎಂಎಂ ಮತ್ತು 46 ಎಂಎಂ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು 42mm ಮಾದರಿಯ ಸ್ಮಾರ್ಟ್‌ವಾಚ್‌ 390 X 390 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 1.2 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. 46mm ರೂಪಾಂತರದ ಸ್ಮಾರ್ಟ್‌ವಾಚ್‌
454 X 454 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 1.39 ಇಂಚಿನ ಅಮೋಲೆಡ್ ಪ್ಯಾನಲ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಮಾನಿಟರಿಂಗ್‌, ಹಾಗೂ ವರ್ಚುವಲ್ ಪೇಸ್-ಸೆಟ್ಟರ್ ಅನ್ನು ಹೊಂದಿದೆ. ನಿದ್ರಾಹೀನತೆಯನ್ನು ಪತ್ತೆಹಚ್ಚಲು ಹುವಾವೇ ಟ್ರೂಸ್ಲೀಪ್ 2.0 ತಂತ್ರಜ್ಞಾನದ ಬೆಂಬಲವನ್ನು ಹೊಂದಿದೆ. ಇನ್ನು ಹುವಾವೇ ಟ್ರುರೆಲ್ಯಾಕ್ಸ್ (TruRelax) ಫೀಚರ್ಸ್‌ ಹೊಂದಿದ್ದು ಇದು ಒತ್ತಡವನ್ನ ನಿವಾರಣೆ ಮಾಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಹಾನರ್ ಬ್ಯಾಂಡ್ 5i ಬೆಲೆ 1,999ರೂ ಆಗಿದ್ದು, ಅಮೆಜಾನ್ ಪ್ರೈಮ್ ಸದಸ್ಯರಿಗೆ ಜನವರಿ 18 ರಂದು ಮತ್ತು ಪ್ರೈಮ್ ಅಲ್ಲದ ಗ್ರಾಹಕರಿಗೆ ಜನವರಿ 19 ರಿಂದ ಖರೀದಿಗೆ ಲಭ್ಯವಿರಲಿದೆ. ಅಲ್ಲದೆ ಹಾನರ್ ಮ್ಯಾಜಿಕ್ ವಾಚ್ 2 ಸ್ಮಾರ್ಟ್‌ವಾಚ್‌ನಲ್ಲಿ 46mm ಮಾದರಿಯ ಚಾರ್ಕೋಲ್ ಬ್ಲ್ಯಾಕ್ ಕಲರ್‌ ಹೊಂದಿರುವ ವಾಚ್‌ 12,999 ರೂ. ಫ್ಲಾಕ್ಸ್ ಬ್ರೌನ್ ಕಲರ್ ಆಯ್ಕೆಯ ವಾಚ್‌ 14,999 ರೂ.ಬೆಲೆಯನ್ನ ಹೊಂದಿದೆ. ಇನ್ನು ಹಾನರ್ ಮ್ಯಾಜಿಕ್ ವಾಚ್ 2 ರ ದೊಡ್ಡ 42mm ಮಾದರಿಯ ಸ್ಮಾರ್ಟ್‌ವಾಚ್‌ನಲ್ಲಿ ಅಗೇಟ್ ಬ್ಲ್ಯಾಕ್ ಕಲರ್‌ ಆಯ್ಕೆಯ ವಾಚ್‌ 11,999 ರೂ., ಸಕುರಾ ಗೋಲ್ಡ್( Sakura Gold) ವಾಚ್‌ 14,999 ರೂ. ಬೆಲೆಯನ್ನ ಹೊಂದಿದೆ.

Best Mobiles in India

English summary
Honor has today launched a trio of new products in India – the Honor 9X phone, the Honor Magic Watch 2 smartwatch, and the Honor Band 5i fitness band. The Honor 9X launched in India is the phone's global variant and has a different set of specifications compared to the Honor 9X phone that went official in China back in July last year. The Honor 9X packs a triple rear camera setup that includes a 48-megapixel main snapper, and also sports a 16-megapixel pop-up selfie camera. The Honor Band 5i stands out with its ability to plug in directly to a USB port for charging, eliminating the need for a separate charging apparatus. As for the Honor Magic Watch 2, it brings GPS support and can detect six common types of sleep disorders. At the event, Honor also launched the Honor Sport Pro and Honor Sport Bluetooth earphones, priced at Rs. 3,999 and Rs. 1,999 respectively.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X