Home
ಸುದ್ದಿಜಾಲ

ಭಾರತದಲ್ಲಿ ಹಾನರ್‌ ಚಾಯ್ಸ್‌ ಇಯರ್‌ಬಡ್ಸ್‌ X5 ಲಾಂಚ್‌: 35 ಗಂಟೆಗಳ ಬ್ಯಾಟರಿ ಅವಧಿ!

ಹಾನರ್‌ ಕಂಪೆನಿ ಹೊಸ Honor X9b ಸ್ಮಾರ್ಟ್‌ಫೋನ್‌ ಜೊತೆಗೆ Honor Choice Earbuds X5 ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಬಡ್ಸ್ X5 ಇನ್-ಇಯರ್ ಫಾರ್ಮ್ ಫ್ಯಾಕ್ಟರ್ ಅನ್ನು ಅನುಸರಿಸಲಿದ್ದು, ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ನೊಂದಿಗೆ ಬರುತ್ತದೆ. ಈ ಇಯರ್‌ಫೋನ್‌ಗಳು 10mm ಡ್ರಮ್ ಡ್ರೈವರ್‌ಗಳನ್ನು ಹೊಂದಿದೆ.

ಹೌದು, Honor Choice Earbuds X5 ಇಯರ್‌ಬಡ್ಸ್‌ ಭಾರತದಲ್ಲಿ ಬಿಡುಗಡೆ ಆಗಿದೆ. ಇನ್ನು ಈ ಇಯರ್‌ಬಡ್ಸ್‌ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ರೇಟಿಂಗ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಹೊಸ ವಾಯರ್‌ಲೆಸ್ ಇಯರ್‌ಫೋನ್‌ಗಳು ಚಾರ್ಜಿಂಗ್ ಕೇಸ್‌ನೊಂದಿಗೆ 35 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಹಾಗಾದ್ರೆ Honor X9b ಇಯರ್‌ಬಡ್ಸ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಹಾನರ್‌ ಚಾಯ್ಸ್‌ ಇಯರ್‌ಬಡ್ಸ್‌ X5 ಲಾಂಚ್‌: 35 ಗಂಟೆಗಳ ಬ್ಯಾಟರಿ ಅವಧಿ

Honor Choice Earbuds X5 ಇಯರ್‌ಬಡ್ಸ್‌ ಫೀಚರ್ಸ್‌ ಹೇಗಿದೆ?
Honor Choice Earbuds X5 ಇಯರ್‌ಬಡ್ಸ್‌ ಇನ್-ಇಯರ್ ಫಾರ್ಮ್ ಫ್ಯಾಕ್ಟರ್‌ನಲ್ಲಿ ಬರಲಿದ್ದು, 30dB ವರೆಗೆ ಸಕ್ರಿಯ ಶಬ್ದ ರದ್ದತಿಯನ್ನು ಹೊಂದಿದೆ. ಇದು ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮೂಲಕ ಆಂಬಿಯೆಂಟ್ ಸೌಂಡ್ ಟ್ರಾನ್ಸ್‌ಮಿಷನ್ ಮೋಡ್ ಅನ್ನು ಒಳಗೊಂಡಿದೆ. ಜೊತೆಗೆ ಬಳಕೆದಾರರ ಜಾಗೃತಿಗಾಗಿ ಸುತ್ತುವರಿದ ಶಬ್ದಗಳನ್ನು ವರ್ಧಿಸುತ್ತದೆ. ಇದಲ್ಲದೆ ಇಯರ್‌ಫೋನ್‌ಗಳು ಹ್ಯಾಂಡ್ಸ್-ಫ್ರೀ ಕರೆಗೆ ಉತ್ತರಿಸುವಿಕೆಯನ್ನು ನೀಡಲಿದ್ದು, ಪರಿಸರದ ಶಬ್ದ ರದ್ದತಿಯೊಂದಿಗೆ (ENC) ಡ್ಯುಯಲ್ ಮೈಕ್ರೊಫೋನ್‌ಗಳನ್ನು ಒಳಗೊಂಡಿದೆ.

Honor Choice Earbuds X5 ಇಯರ್‌ಬಡ್ಸ್‌ ಹೆಚ್ಚುವರಿಯಾಗಿ, ಇಯರ್‌ಫೋನ್‌ಗಳು ಲೋ-ಲೇಟೆನ್ಸಿ ಗೇಮ್ ಮೋಡ್ ಅನ್ನು ಒಳಗೊಂಡಿದೆ. ಇದು ಗೇಮಿಂಗ್ ಮಾಡುವಾಗ ಆಡಿಯೊ ಮತ್ತು ವೀಡಿಯೊ ನಡುವಿನ ವಿಳಂಬವನ್ನು ಕಡಿಮೆ ಮಾಡಲಿದೆ. ಈ ಇಯರ್‌ಬಡ್ಸ್ X5 SBC ಮತ್ತು AAC ಬ್ಲೂಟೂತ್ ಕೊಡೆಕ್‌ಗಳಿಗೆ ಬೆಂಬಲಿಸುವ 10mm ಡ್ರಮ್ ಡ್ರೈವರ್‌ಗಳನ್ನು ಒಳಗೊಂಡಿದೆ. ಅಲ್ಲದೆ ಒಂಬತ್ತು ಗಂಟೆಗಳ ನಿರಂತರ ಪ್ಲೇಬ್ಯಾಕ್ ಟೈಂ ಸೇರಿದಂತೆ, ಚಾರ್ಜಿಂಗ್ ಕೇಸ್‌ನೊಂದಿಗೆ ಇಯರ್‌ಫೋನ್‌ಗಳು 35 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ.

ಭಾರತದಲ್ಲಿ ಹಾನರ್‌ ಚಾಯ್ಸ್‌ ಇಯರ್‌ಬಡ್ಸ್‌ X5 ಲಾಂಚ್‌: 35 ಗಂಟೆಗಳ ಬ್ಯಾಟರಿ ಅವಧಿ

Honor Choice Earbuds X5 ಇಯರ್‌ಬಡ್ಸ್ 45mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ಚಾರ್ಜಿಂಗ್ ಕೇಸ್ 460mAh ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು USB ಟೈಪ್-ಸಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಇದಲ್ಲದೆ ಈ ಇಯರ್‌ಫೋನ್‌ಗಳನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಎರಡು ಗಂಟೆಗಳ ಸಮಯ ತೆಗೆದುಕೊಳ್ಳಲಿದೆ. ಅಲ್ಲದೆ ಇಯರ್‌ಫೋನ್‌ನಲ್ಲಿ ANC ಮೋಡ್‌ಗಳ ನಡುವೆ ಬದಲಾಯಿಸುವುದಕ್ಕೆ, ಕರೆಗಳಿಗೆ ಉತ್ತರಿಸುವುದಕ್ಕೆ ಮತ್ತು ಮ್ಯೂಸಿಕ್‌ ಅನ್ನು ಪ್ಲೇ ಮಾಡಲು ಟಚ್‌ ಕಂಟ್ರೋಲ್‌ಗಳನ್ನು ನೀಡಲಾಗಿದೆ.

Honor Choice Earbuds X5 ಇಯರ್‌ಪೋನ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.3 ಅನ್ನು ಬೆಂಬಲಿಸಲಿದೆ. ಇದಲ್ಲದೆ ಹಾನರ್ AI ಸ್ಪೇಸ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗಳಿಗೆ ಸಹ ಸಂಪರ್ಕಿಸಬಹುದು. ಅಲ್ಲದೆ ಇಯರ್‌ಫೋನ್‌ಗಳನ್ನು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP54 ಎಂದು ರೇಟಿಂಗ್‌ ಮಾಡಲಾಗಿದೆ. ಜೊತೆಗೆ ಪ್ರತಿಯೊಂದು ಇಯರ್‌ಬಡ್ 4.26g ತೂಕವನ್ನು ಹೊಂದಿದ್ದು, ಚಾರ್ಜಿಂಗ್‌ ಕೇಸ್‌ನೊಂದಿಗೆ ಒಟ್ಟು 50g ತೂಕವನ್ನು ಹೊಂದಿದೆ.

ಭಾರತದಲ್ಲಿ ಹಾನರ್ ಚಾಯ್ಸ್ ಇಯರ್‌ಬಡ್ಸ್ X5 ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹಾನರ್ ಚಾಯ್ಸ್ ಇಯರ್‌ಬಡ್ಸ್ X5 ಅನ್ನು 1,999ರೂ ಬೆಲೆಯನ್ನು ಹೊಂದಿದೆ. ಈ ಇಯರ್‌ಫೋನ್‌ಗಳು ಅಮೆಜಾನ್, ಮುಖ್ಯ ಚಿಲ್ಲರೆ ಅಂಗಡಿಗಳು ಮತ್ತು ಎಕ್ಸ್‌ಪ್ಲೋರ್ ಹಾನರ್ ವೆಬ್‌ಸೈಟ್ ಮೂಲಕ ಪ್ರತ್ಯೇಕವಾಗಿ ಫೆಬ್ರವರಿ 16 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟವಾಗಲಿದೆ. ಇದನ್ನು ಬಿಳಿ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Honor Choice Earbuds X5 With Up to 35 Hours of Battery Life Launched in India: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+