Home
ಸುದ್ದಿಜಾಲ

ಹಾನರ್‌ ಮ್ಯಾಜಿಕ್‌ 5 ಲೈಟ್‌ ಲಾಂಚ್‌! ಪ್ರೊಸೆಸರ್‌ ಯಾವುದು? ಬೆಲೆ ಎಷ್ಟು?

ಜಾಗತಿಕ ಮಾರುಕಟ್ಟೆಯಲ್ಲಿ ಹಾನರ್‌ ಕಂಪೆನಿ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ವಿಭಿನ್ನ ಮಾದರಿಯ ಹಾಗೂ ಡಿಸೈನ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳಿಂದ ಹಾನರ್‌ ಕಂಪೆನಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಹಾನರ್‌ ಕಂಪೆನಿ ಹೊಸ ಹಾನರ್‌ ಮ್ಯಾಜಿಕ್‌ 5 ಲೈಟ್‌ ಅನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್‌ ಬೆಂಬಲಿಸುವ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಲಾಂಚ್‌! ಪ್ರೊಸೆಸರ್‌ ಯಾವುದು? ಬೆಲೆ ಎಷ್ಟು?

ಹೌದು, ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಜೊತೆಗೆ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 2 ದಿನಗಳ ಬ್ಯಾಕ್‌ಅಪ್‌ ನೀಡಲಿದೆ. ಇದಲ್ಲದೆ ಈ ಫೋನ್‌ ಯಾವೆಲ್ಲಾ ಫೀಚರ್ಸ್‌ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಡಿಸ್‌ಪ್ಲೇ ಹೇಗಿದೆ?

ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 89.9% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಒಳಗೊಂಡಿದೆ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಲಾಂಚ್‌! ಪ್ರೊಸೆಸರ್‌ ಯಾವುದು? ಬೆಲೆ ಎಷ್ಟು?

ಹಾನರ್‌ ಮ್ಯಾಜಿಕ್‌ 5 ಲೈಟ್‌ ಪ್ರೊಸೆಸರ್‌ ಯಾವುದು?

ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಮ್ಯಾಜಿಕ್ UI 6.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM + 128GB ಸ್ಟೋರೇಜ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಮೆಮೊರಿ ಕಾರ್ಡ್‌ ಅನ್ನು ಬೆಂಬಲಿಸುವುದಿಲ್ಲ ಎಂದು ಹಾನರ್‌ ಕಂಪೆನಿ ಹೇಳಿದೆ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಕ್ಯಾಮೆರಾ ಸೆಟ್‌ಅಪ್‌?

ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಬಳಸಿಕೊಂಡು ಫುಲ್‌ ಹೆಚ್‌ಡಿ ವೀಡಿಯೊ ರೆಕಾರ್ಡ್‌ ಮಾಡಬಹುದು ಎಂದು ಹಾನರ್‌ ಕಂಪೆನಿ ಸ್ಪಷ್ಟಪಡಿಸಿದೆ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಲಾಂಚ್‌! ಪ್ರೊಸೆಸರ್‌ ಯಾವುದು? ಬೆಲೆ ಎಷ್ಟು?

ಹಾನರ್‌ ಮ್ಯಾಜಿಕ್‌ 5 ಲೈಟ್‌ ಬ್ಯಾಟರಿ ಬ್ಯಾಕ್‌ಅಪ್‌ ವಿವರ

ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ 5,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 2 ದಿನಗಳವರೆಗಿನ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ.

ಹಾನರ್‌ ಮ್ಯಾಜಿಕ್‌ 5 ಲೈಟ್‌ ಬೆಲೆ ಮತ್ತು ಲಭ್ಯತೆ

ಹಾನರ್‌ ಮ್ಯಾಜಿಕ್‌ 5 ಲೈಟ್‌ ಸ್ಮಾರ್ಟ್‌ಫೋನ್‌ 6GB RAM + 128GB ಸ್ಟೋರೇಜ್ ಮಾಡೆಲ್‌ ಆಯ್ಕೆಗೆ ಯುರೋಪ್‌ನಲ್ಲಿ EUR 379 (ಸುಮಾರು 33,500ರೂ)ಬೆಲೆಯನ್ನು ಹೊಂದಿದೆ. ಇದು ಎಮರಾಲ್ಡ್ ಗ್ರೀನ್, ಮಿಡ್‌ನೈಟ್ ಬ್ಲಾಕ್ ಮತ್ತು ಟೈಟಾನಿಯಂ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಇದೇ ಫೆಬ್ರವರಿ 20 ರಿಂದ ಯುರೋಪಿಯನ್ ಮಾರುಕಟ್ಟೆಯಲ್ಲಿ ಪ್ರಿ ಆರ್ಡರ್‌ಗೆ ಬರಲಿದೆ. ಭಾರತದಲ್ಲಿ ಇದರ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ.

Best Mobiles in India

English summary
This Honor smartphone has a 6.67-inch full-HD+ curved AMOLED display with a 120Hz refresh rate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+