Home
ಸುದ್ದಿಜಾಲ

ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾನರ್‌ ಮ್ಯಾಜಿಕ್‌ 6 ಲೈಟ್!. ಆಂಟಿ ಬೌನ್ಸ್‌ ಡಿಸ್‌ಪ್ಲೇ ಟೆಕ್ನಾಲಜಿ!

ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ, ಈ ಸ್ಮಾರ್ಟ್‌ಫೋನ್‌ ಇದೇ ವರ್ಷ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಆಗಿದ್ದ ಹಾನರ್ ಮ್ಯಾಜಿಕ್ 5 ಲೈಟ್‌ಗೆ ಉತ್ತರಾಧಿಕಾರಿಯಾಗಿದೆ. ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 5,300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ಹೌದು, ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇನ್ನು ಫೋನ್‌ನ ಡಿಸ್‌ಪ್ಲೇ ಆಂಟಿ ಬೌನ್ಸ್‌ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದ್ದು, 360-ಡಿಗ್ರಿ ಪ್ರೊಟೆಕ್ಷನ್‌ನೊಂದಿಗೆ ಬರಲಿದೆ. ಇದಲ್ಲದೆ ಈ ಫೋನ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾನರ್‌ ಮ್ಯಾಜಿಕ್‌ 6 ಲೈಟ್!ಆಂಟಿ ಬೌನ್ಸ್‌ ಡಿಸ್‌ಪ್ಲೇ

ಹಾನರ್‌ ಮ್ಯಾಜಿಕ್‌ 6 ಲೈಟ್‌ ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ 6.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,200 x 2,652 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದ್ದು, 1200 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇದಲ್ಲದೆ ಡಿಸ್‌ಪ್ಲೇ 1920Hz ನ PWM ಡಿಮ್ಮಿಂಗ್ ರೇಟ್‌ನೊಂದಿಗೆ ಬರುತ್ತದೆ.

ಹಾನರ್‌ ಮ್ಯಾಜಿಕ್‌ 6 ಲೈಟ್ ಪ್ರೊಸೆಸರ್‌ ಯಾವುದು?
ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13-ಆಧಾರಿತ ಮ್ಯಾಜಿಕ್ಓಎಸ್ 7.2 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಬಳಕೆಯಾಗದ ಮೆಮೊರಿಯನ್ನು ಬಳಸಿಕೊಂಡು 8GB ವರ್ಚುವಲ್ RAM ವಿಸ್ತರಿಸಬಹುದಾಗಿದೆ.

ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾನರ್‌ ಮ್ಯಾಜಿಕ್‌ 6 ಲೈಟ್!ಆಂಟಿ ಬೌನ್ಸ್‌ ಡಿಸ್‌ಪ್ಲೇ

ಹಾನರ್‌ ಮ್ಯಾಜಿಕ್‌ 6 ಲೈಟ್ ಕ್ಯಾಮೆರಾ ಏನಿದೆ?
ಹಾನರ್‌ ಮ್ಯಾಜಿಕ್‌ 6 ಲೈಟ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರಲ್ಲಿ ಮೊದಲನೇ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ ಫೋನ್ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದುಕೊಂಡಿದೆ.

ಹಾನರ್‌ ಮ್ಯಾಜಿಕ್‌ 6 ಲೈಟ್ ಬ್ಯಾಟರಿ ಮತ್ತು ಇತರೆ
ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ 5,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 35W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11, ಬ್ಲೂಟೂತ್ 5.1, ಎನ್‌ಎಫ್‌ಸಿ, ಜಿಪಿಎಸ್, ಗ್ಲೋನಾಸ್, ಬೀಡೌ, ಗೆಲಿಲಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಸದ್ದಿಲ್ಲದೆ ಎಂಟ್ರಿ ಕೊಟ್ಟ ಹಾನರ್‌ ಮ್ಯಾಜಿಕ್‌ 6 ಲೈಟ್!ಆಂಟಿ ಬೌನ್ಸ್‌ ಡಿಸ್‌ಪ್ಲೇ

ಹಾನರ್‌ ಮ್ಯಾಜಿಕ್‌ 6 ಲೈಟ್‌ ಬೆಲೆ ಮತ್ತು ಲಭ್ಯತೆ
ಹಾನರ್‌ ಮ್ಯಾಜಿಕ್‌ 6 ಲೈಟ್‌ ಸ್ಮಾರ್ಟ್‌ಫೋನ್‌ ಬೆಲೆಯನ್ನು ಕಂಪೆನಿಯು ಇನ್ನು ಕೂಡ ಬಹಿರಂಗಪಡಿಸಿಲ್ಲ. ಇದನ್ನು ಎಮರಾಲ್ಡ್ ಗ್ರೀನ್, ಮಿಡ್‌ನೈಟ್ ಬ್ಲ್ಯಾಕ್, ಮತ್ತು ಸನ್‌ರೈಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ನೀಡಲಾಗಿದ್ದು, ಡಿಸೆಂಬರ್ 27 ರಿಂದ ಮಾರಾಟವಾಗಲಿದೆ ಎಂದು ಖಚಿತಪಡಿಸಲಾಗಿದೆ. ಇದು ಭಾರತದಲ್ಲಿಯೂ ಕೂಡ ಲಭ್ಯವಾಗಲಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Honor Magic 6 Lite 5G With 5,300mAh Battery Launched: Specifications Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+