Home
ಸುದ್ದಿಜಾಲ

90 ಸಾವಿರದ ದುಬಾರಿ ಫೋನ್! ಇಂದು ಮಾರಾಟಕ್ಕೆ ಸಿದ್ಧ; ಡಿಸ್ಕೌಂಟ್ ಎಷ್ಟು?

ಹಾನರ್ ಕಂಪನಿಯು ಇತ್ತೀಚೆಗೆ ಹಾನರ್ ಮ್ಯಾಜಿಕ್ 6 ಪ್ರೊ (Honor Magic 6 Pro) ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನನ್ನು 12GB + 512GB ಸ್ಟೋರೇಜ್‌ ಆಯ್ಕೆ ಮತ್ತು ಎರಡು ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ಈ ಫೋನ್, ಇಂದು (ಆಗಸ್ಟ್ 15) ಮಧ್ಯಾಹ್ನ 12 ಗಂಟೆಗೆ ಅಮೇಜಾನ್ ಇ ಕಾಮರ್ಸ್‌ ತಾಣದ ಮೂಲಕ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಬನ್ನಿ, ಈ ಹೊಸ ಹಾನರ್ ಫೋನಿನ ಬೆಲೆ, ಆಫರ್‌ಗಳು ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ.

ಕಂಪನಿಯು ಮೊಬೈಲ್‌ ಪ್ರಿಯರ ನಿರೀಕ್ಷೆಯಂತೆಯೇ, ಹಲವು ವೈಶಿಷ್ಟ್ಯಗಳೊಂದಿಗೆ ಹಾನರ್‌ ಮ್ಯಾಜಿಕ್ 6 ಪ್ರೊ (Honor Magic 6 Pro) ಅನ್ನು ಲಾಂಚ್ ಮಾಡಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನೊಂದಿಗೆ ಕೆಲಸ ನಿರ್ವಹಿಸಲಿದೆ. ಇದು 6.8 ಇಂಚಿನ ಕ್ವಾಡ್ ಕರ್ವ್ ಡಿಸ್ಲ್ಪೇಯನ್ನು ಹೊಂದಿದೆ. ಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ 50MP ಮುಖ್ಯ ಕ್ಯಾಮೆರಾ ಹೊಂದಿದೆ. 5,600mAh ಬ್ಯಾಟರಿ, 80W ವೈರ್ಡ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ.

90 ಸಾವಿರದ ದುಬಾರಿ ಫೋನ್! ಇಂದು ಮಾರಾಟಕ್ಕೆ ಸಿದ್ಧ; ಡಿಸ್ಕೌಂಟ್ ಎಷ್ಟು?

ಹಾನರ್‌ ಮ್ಯಾಜಿಕ್ 6 ಪ್ರೊ ಬೆಲೆ ಮತ್ತು ಲಭ್ಯತೆ

ಹಾನರ್‌ ಮ್ಯಾಜಿಕ್ 6 ಪ್ರೊ ಫೋನ್ 12GB+512GB ಸ್ಟೋರೇಜ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಪ್ರಾರಂಭಿಕ ಬೆಲೆ 89,999 ರೂ. ಇದೆ. ಈ ಫೋನ್ ಎಕ್ಸ್‌ಪ್ಲೋರ್ HONOR, ಅಮೇಜಾನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಮಾರಾಟವಾಗಲಿದೆ. ಚೀನಾದಲ್ಲಿ ಈ ಫೋನ್ ಮೂರು ಸ್ಟೋರೇಜ್‌ ಆಯ್ಕೆಗಳಲ್ಲಿ ಲಭ್ಯವಿದೆ. ಫೋನಿನ 16GB RAM+512GB ಸ್ಟೋರೇಜ್‌ 68,000 ರೂ. ಬೆಲೆಗೆ ಮಾರಾಟವಾಗುತ್ತಿದೆ.

ನೀವು ಎಪಿಕ್ ಗ್ರೀನ್ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಸಬಹುದು. ಈ ಫೋನ್‌ ಖರೀದಿ ಮೇಲೆ ತಿಂಗಳಿಗೆ 7,500 ರೂ. ನಿಂದ ಪ್ರಾರಂಭವಾಗುವ ನೋ ಕಾಸ್ಟ್ ಇಎಂಐ ಯೋಜನೆಗಳನ್ನು 12 ತಿಂಗಳವರೆಗೆ ಆಯ್ಕೆ ಮಾಡಬಹುದು. ಬಿಡುಗಡೆಯ ನಂತರ 180 ದಿನಗಳವರೆಗೆ ಸ್ಮಾರ್ಟ್‌ಫೋನ್‌ನ ಬೆಲೆ ಬದಲಾಗದೆ ಉಳಿಯುತ್ತದೆ ಎಂದು ಹಾನರ್‌ ಭರವಸೆ ನೀಡಿದೆ.

ಹಾನರ್‌ ಮ್ಯಾಜಿಕ್ 6 ಪ್ರೊ - ಫೀಚರ್ಸ್‌

ಡಿಸ್ಲ್ಪೇ: ಹಾನರ್‌ ಮ್ಯಾಜಿಕ್ 6 ಪ್ರೊ 6.8 ಇಂಚಿನ FHD+ ಕ್ವಾಡ್-ಕರ್ವ್ಡ್ OLED ಡಿಸ್ಲ್ಪೇ ಹೊಂದಿದೆ. 120Hz LTPO (1-120Hz) ರಿಫ್ರೆಶ್ ರೇಟ್, 1280 x 2800 ಪಿಕ್ಸೆಲ್ ರೆಸಲ್ಯೂಶನ್, 5,000nits ಬ್ರಿಟ್‌ನೆಸ್ ಬೆಂಬಲದೊಂದಿಗೆ ಬರಲಿದೆ.

ಪ್ರೊಸೆಸರ್: ಕಂಪನಿಯು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 3 4nm ಪ್ರೊಸೆಸರ್‌ ಅನ್ನು ಹಾನರ್‌ ಮ್ಯಾಜಿಕ್ 6 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿದೆ. ಇದು Android 14 ಆಧಾರಿತ Magic UI 8.0ನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ: ಹಾನರ್‌ ಮ್ಯಾಜಿಕ್ 6 ಪ್ರೊ ಮೊಬೈಲ್ ಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬಿಡುಗಡೆಯಾಗಿದೆ. 50MP ಮುಖ್ಯ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 180MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಮುಂಭಾಗದಲ್ಲಿ 50MP ಕ್ಯಾಮೆರಾ ಇದೆ. ಇದು 3D ಫೇಸ್ ಅನ್ಲಾಕ್ ಬೆಂಬಲಿಸುತ್ತದೆ. ಮತ್ತು 4K ವಿಡಿಯೋ ರೆಕಾರ್ಡಿಂಗ್ ಕೂಡ ಸಪೋರ್ಟ್ ಮಾಡುತ್ತದೆ.

ಬ್ಯಾಟರಿ: ಹಾನರ್‌ ಮ್ಯಾಜಿಕ್ 6 ಪ್ರೊ ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 80W ವೈರ್ಡ್ ಮತ್ತು 66W ವೈರ್‌ಲೆಸ್ ಹಾನರ್ ಸೂಪರ್‌ ಚಾರ್ಜಿಂಗ್ ಬೆಂಬಲ ಪಡೆದಿದೆ. ಕೇವಲ 40 ನಿಮಿಷಗಳಲ್ಲಿ ಈ ಫೋನ್ ಸಂಪೂರ್ಣವಾಗಿ (100%) ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ಈ ಫೋನ್ 162.5 x 75.8 x 8.9mm ಅಳತೆ ಮತ್ತು 229 ಗ್ರಾಂ ತೂಕ ಹೊಂದಿದೆ. IP68 ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆದಿದೆ.

ಇತರೆ ಫೀಚರ್ಸ್: ಹಾನರ್‌ ಮ್ಯಾಜಿಕ್ 6 ಪ್ರೊ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, Wi-Fi 7, ಬ್ಲೂಟೂತ್ 5.3, USB ಟೈಪ್-C, NFC ನಂತಹ ಸೌಲಭ್ಯ ಒಳಗೊಂಡಿದೆ.

Best Mobiles in India

English summary
Honor Magic 6 Pro Goes Sale in India Today via Amazon: Check Price, Offer and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+