Home
ಸುದ್ದಿಜಾಲ

ಹಾನರ್‌ ಮ್ಯಾಜಿಕ್‌ 6 ಕ್ಯಾಮೆರಾ ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಕಂಪನ ಶುರು!

ಹಾನರ್‌ ಕಂಪೆನಿ ಹೊಸ ವರ್ಷದಲ್ಲಿ ಮತ್ತೊಂದು ಮ್ಯಾಜಿಕ್‌ ಮಾಡುವುದಕ್ಕೆ ಮುಂದಾಗಿದೆ. ವಿಭಿನ್ನ ಸ್ಮಾರ್ಟ್‌ಫೋನ್‌ಗಳ ಮೂಲಕ ಸೈ ಎನಿಸಿಕೊಂಡಿರುವ ಹಾನರ್‌ ಹೊಸದಾಗಿ ಹಾನರ್‌ ಮ್ಯಾಜಿಕ್‌ 6 ಸರಣಿ ಬಿಡುಗಡೆಗೆ ಮುಂದಾಗಿದೆ. ಈ ಸ್ಮಾರ್ಟ್‌ಫೋನ್‌ ಸರಣಿಯ ಫೀಚರ್ಸ್‌ ಬಹಿರಂಗವಾಗ್ತಿದ್ದ ಹಾಗೇ ಟೆಕ್‌ ವಲಯದಲ್ಲಿ ಹೊಸ ಸಂಚಲನ ಶುರುವಾಗಿದೆ.

ಹೌದು, ಹಾನರ್‌ ಮ್ಯಾಜಿಕ್‌ 6 ಸರಣಿ ಫೋನ್‌ಗಳ ಕ್ಯಾಮೆರಾ ಫೀಚರ್ಸ್‌ ಮೊಬೈಲ್‌ ಲೋಕದಲ್ಲಿ ಹೊಸ ಕಂಪನವನ್ನು ಸೃಷ್ಟಿಸಿದೆ. ಈ ಫೋನ್‌ ಇದೇ ಜನವರಿ 10 ರಂದು ಅನಾವರಣಗೊಳ್ಳುವುದು ಪಕ್ಕಾ ಆಗಿದೆ. ಈ ಸರಣಿಯಲ್ಲಿ ಹಾನರ್‌ ಮ್ಯಾಜಿಕ್ 6 ಮತ್ತು ಮ್ಯಾಜಿಕ್ 6 ಪ್ರೊ ಫೋನ್‌ಗಳು ಬಿಡುಗಡೆ ಆಗಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಸರಣಿಯ ಹಾನರ್‌ ಮ್ಯಾಜಿಕ್‌ 6 ಫೋನ್‌ ಕ್ಯಾಮೆರಾ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್‌ ಮ್ಯಾಜಿಕ್‌ 6 ಕ್ಯಾಮೆರಾ ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಕಂಪನ ಶುರು!

Honor Magic 6 ಫಿಚರ್ಸ್‌ ನಿರೀಕ್ಷೆ?
ಹಾನರ್‌ 6 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರುವ ಸೂಚನೆ ನೀಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ OmniVision OV50H ಸೆನ್ಸಾರ್‌, ಎರನಡೇ ಕ್ಯಾಮೆರಾ 50 ಮೆಗಾಪಿಕ್ಸೆಲ್ OV50M ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಬರಲಿದೆ. ಇನ್ನು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ OV50M ಟೆಲಿಫೋಟೋ ಲೆನ್ಸ್‌ ಹೊಂದಿರಲಿದೆದೆ.

Honor Magic 6 ಡಿಸ್‌ಪ್ಲೇ ರಚನೆ ಸಾಧ್ಯತೆ
Honor Magic 6 ಸ್ಮಾರ್ಟ್‌ಫೋನ್‌ 6.75 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಈ ಡಿಸ್‌ಪ್ಲೇ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿರಲಿದೆ. ಇನ್ನು ಡಿಸ್‌ಪ್ಲೇ 390 ಪಿಪಿಐ ಪಿಕ್ಸೆಲ್ ಸಾಂದ್ರತೆಯೊಂದಿಗೆ ಬರಲಿದೆ. ಇದು 144 Hz ರಿಫ್ರೆಶ್‌ ರೇಟ್‌ ಬೆಂಬಲದೊಂದಿಗೆ ಬರುವ ಸೂಚನೆಯನ್ನು ನೀಡಿದೆ.

ಹಾನರ್‌ ಮ್ಯಾಜಿಕ್‌ 6 ಕ್ಯಾಮೆರಾ ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಕಂಪನ ಶುರು!

Honor Magic 6 ಪ್ರೊಸೆಸರ್‌ ಯಾವುದು?
Honor Magic 6 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ v14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದಲ್ಲಿರಲಿದೆ. ಈ ಫೋನ್‌ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ಹಾನರ್‌ ಮ್ಯಾಜಿಕ್‌ 6 ಕ್ಯಾಮೆರಾ ಫೀಚರ್ಸ್‌ ಬಹಿರಂಗ: ಟೆಕ್‌ ವಲಯದಲ್ಲಿ ಕಂಪನ ಶುರು!

Honor Magic 6 ಬ್ಯಾಟರಿ ಮತ್ತು ಇತರೆ ಸೌಲಭ್ಯ
Honor Magic 6 ಸ್ಮಾರ್ಟ್‌ಫೋನ್‌ 5,450mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ನೀಡಬಹುದು ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಹೊಂದಿರಲಿದೆ. ಇದಲ್ಲದೆ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಅಚ್ಛೇಲೆರೊಮೀಟರ್, ಕಂಪಾಸ್, ಗೈರೋಸ್ಕೋಪ್ ಅನ್ನು ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಈಗಾಗಲೇ ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇನ್ನು ಫೋನ್‌ನ ಡಿಸ್‌ಪ್ಲೇ ಆಂಟಿ ಬೌನ್ಸ್‌ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದ್ದು, 360-ಡಿಗ್ರಿ ಪ್ರೊಟೆಕ್ಷನ್‌ನೊಂದಿಗೆ ಬರಲಿದೆ.

ಹಾನರ್‌ ಮ್ಯಾಜಿಕ್‌ 6 ಲೈಟ್ ಸ್ಮಾರ್ಟ್‌ಫೋನ್‌ 5,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 35W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11, ಬ್ಲೂಟೂತ್ 5.1, ಎನ್‌ಎಫ್‌ಸಿ, ಜಿಪಿಎಸ್, ಗ್ಲೋನಾಸ್, ಬೀಡೌ, ಗೆಲಿಲಿಯೋ ಮತ್ತು ಯುಎಸ್‌ಬಿ ಟೈಪ್-ಸಿ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Honor Magic 6 Smartphone camera specifications Revealed: Expected Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+