Home
ಸುದ್ದಿಜಾಲ

ಮೊಬೈಲ್‌ ಮಾರುಕಟ್ಟೆಲಿ ಸಂಚಲನ ಸೃಷ್ಟಿಸಿದ ಹಾನರ್‌ ಮ್ಯಾಜಿಕ್‌ V2! ಏನಿದರ ವಿಶೇಷ!

ಹಾನರ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಟೆಕ್‌ ಮಾರುಕಟ್ಟೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತವೆ. ಇದೇ ಕಾರಣಕ್ಕೆ ಹಾನರ್‌ ಕಂಪೆನಿ ಸಾಕಷ್ಟು ವಿಭಿನ್ನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ಹಾನರ್‌ ಮ್ಯಾಜಿಕ್‌ V2 ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಹಾನರ್‌ ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಹಾನರ್‌ ಮ್ಯಾಜಿಕ್‌ V2 ಫೋಲ್ಡಬಲ್ ಸ್ಮಾರ್ಟ್‌ಫೋನ್ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಅನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌ ಮಾರುಕಟ್ಟೆಲಿ ಸಂಚಲನ ಸೃಷ್ಟಿಸಿದ ಹಾನರ್‌ ಮ್ಯಾಜಿಕ್‌ V2! ಏನಿದರ ವಿಶೇಷ!

ಹಾನರ್ ಮ್ಯಾಜಿಕ್ V2 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್‌ 7.92 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2344 × 2156 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಹೊಂದಿದ್ದು, 90.4% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಔಟರ್‌ ಡಿಸ್‌ಪ್ಲೇ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 91.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ.

ಹಾನರ್ ಮ್ಯಾಜಿಕ್ V2 ಪ್ರೊಸೆಸರ್‌ ಯಾವುದು?
ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ ಮ್ಯಾಜಿಕ್ಓಎಸ್ 7.2 ಔಟ್-ಆಫ್-ದಿ-ಬಾಕ್ಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಹಾನರ್ ಮ್ಯಾಜಿಕ್ V2 ಕ್ಯಾಮೆರಾ ಸೆಟ್‌ಅಪ್‌
ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಟೆಲಿಪೊಟೊ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಹಾನರ್ ಮ್ಯಾಜಿಕ್ V2 ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹಾನರ್ ಮ್ಯಾಜಿಕ್ V2 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 66W ಹಾನರ್ ಸೂಪರ್‌ಚಾರ್ಜ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G, Wi-Fi 802.11ax, ಬ್ಲೂಟೂತ್ 5.3 LE, GPS, NFC ಮತ್ತು USB 3.1 ಟೈಪ್-ಸಿ ಕಂಟ್ಯಾಕ್ಟ್‌ ಅನ್ನು ಬೆಂಬಲಿಸಲಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಮೊಬೈಲ್‌ ಮಾರುಕಟ್ಟೆಲಿ ಸಂಚಲನ ಸೃಷ್ಟಿಸಿದ ಹಾನರ್‌ ಮ್ಯಾಜಿಕ್‌ V2! ಏನಿದರ ವಿಶೇಷ!

ಹಾನರ್‌ ಮ್ಯಾಜಿಕ್‌ V2 ಬೆಲೆ ಮತ್ತು ಲಭ್ಯತೆ
ಹಾನರ್‌ ಮ್ಯಾಜಿಕ್‌ V2 ಸ್ಮಾರ್ಟ್‌ಫೋನ್‌ 16GB + 256GB ರೂಪಾಂತರದ ಆಯ್ಕೆಯು CNY 8,999 (ಸುಮಾರು 1,03,000ರೂ)ಬೆಲೆ ಹೊಂದಿದೆ. ಆದರೆ 16GB + 512GB ರೂಪಾಂತರದ ಆಯ್ಕೆಯು CNY 9,999 (ಸುಮಾರು 1,14,500ರೂ)ಬೆಲೆಯಲ್ಲಿ ಬರಲಿದೆ. ಇನ್ನು ಈ ಡಿವೈಸ್‌ ಕಪ್ಪು, ಚಿನ್ನ, ರೇಷ್ಮೆ ಕಪ್ಪು ಮತ್ತು ಸಿಲ್ಕ್ ಪರ್ಪಲ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತಕ್ಕೆ ಕಾಲಿಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

Best Mobiles in India

English summary
Honor Magic V2 With 7.92-Inch Inner Display Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+