ಹಾನರ್‌ 9x ಸ್ಮಾರ್ಟ್‌ಫೋನ್‌, ಬ್ಯಾಂಡ್‌5i ಬಿಡುಗಡೆಗೆ ಸಜ್ಜು!

|

ಚೀನಾ ಮೂಲದ ಹಾನರ್‌ ಸ್ಮಾರ್ಟ್‌ಫೋನ್‌ ಕಂಪೆನಿ ಇದೇ ಜನವರಿ 14 ರಂದು ತನ್ನ ಹೊಸ ಪ್ರಾಡಕ್ಟ್‌ಗಳನ್ನ ಪರಿಚಯಿಸಲು ದೆಹಲಿಯಲ್ಲಿ ಕಾರ್ಯಕ್ರಮವನ್ನ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಹೊಸ ಮಾದರಿಯ, ವೈವಿಧ್ಯಮಯ ಫೀಚರ್ಸ್‌ಗಳನ್ನ ಒಳಗೊಂಡಿರುವ ಹಾನರ್ 9 ಎಕ್ಸ್ ಸ್ಮಾರ್ಟ್‌ಫೋನ್, ಸೇರಿದಂತೆ ಹಾನರ್ ಮ್ಯಾಜಿಕ್ ವಾಚ್ 2 ಮತ್ತು ಹಾನರ್ ಬ್ಯಾಂಡ್ 5I ಸ್ಮಾರ್ಟ್‌ ಪ್ರಾಡಕ್ಟ್‌ಗಳನ್ನ ಭಾರತೀಯ ಮಾರುಕಟ್ಟೆಗೆ ಲಾಂಚ್‌ ಮಾಡಲಿದೆ.

ಹೌದು

ಹೌದು, ಹಾನರ್‌ ಕಂಪೆನಿ ತನ್ನ ಸ್ಮಾರ್ಟ್‌ ಉತ್ಪನ್ನ ಗಳನ್ನ ಬಾರತೀಯ ಮಾರುಕಟ್ಟೆಯಲ್ಲಿ ಇದೇ ಜನವರಿ 14ರಂದು ಲಾಂಚ್‌ ಮಾಡಲಿದೆ. ತನ್ನ ವಿಭಿನ್ನ ಮಾದರಿಯ ಫೀಚರ್ಸ್‌ಗಳ ಪ್ರಾಡಕ್ಟ್‌ಗಳ ಮೂಲಕ ಗ್ರಾಹಕರನ್ನ ಸೆಳೆಯಲು ಹಾನರ್‌ ಸಜ್ಜಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ 9 ಎಕ್ಸ್ ಸ್ಮಾರ್ಟ್‌ಫೋನ್, ಹಾನರ್ ಮ್ಯಾಜಿಕ್ ವಾಚ್ 2, ಹಾನರ್‌ ಬ್ಯಾಂಡ್‌5i ಸೌಂಡ್‌ ಮಾಡುವ ನಿರೀಕ್ಷೆ ಗರಿಗೆದರಿದೆ. ಅಷ್ಟಕ್ಕೂ ಹಾನರ್‌ ನ ಹೊಸ ಸ್ಮಾರ್ಟ್‌ಪ್ರಾಡಕ್ಟ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿವೆ ಅನ್ನೊದನ್ನ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಹಾನರ್ 9X ಸ್ಮಾರ್ಟ್‌ಫೋನ್‌ ಫೀಚರ್ಸ್‌

ಹಾನರ್ 9X ಸ್ಮಾರ್ಟ್‌ಫೋನ್‌ ಫೀಚರ್ಸ್‌

ಸದ್ಯ ಭಾರತದಲ್ಲಿ ಬಿಡುಗಡೆಯಾಗಲು ಸಿದ್ದವಿರುವ ಹಾನರ್‌9X ಸ್ಮಾರ್ಟ್‌ಫೋನ್‌ 6.59-ಇಂಚಿನ ಫುಲ್‌ ಹೆಚ್‌ಡಿ+ ಡಿಸ್ಪ್ಲೇಯನ್ನ ಹೊಂದಿದ್ದು, ಕಿರಿನ್ 810 ಆಕ್ಟಾ-ಕೋರ್ ಎಸ್ಒಸಿ ಪ್ರೊಸೆಸರ್‌ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್ ಕ್ಯಾಮೆರಾ ಸೆಟ್‌ಆಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ಅನ್ನ ಒಳಗೊಂಡಿದೆ. ಜೊತೆಗೆ ಸೆಲ್ಫಿ ಕ್ಯಾಮೆರಾ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಒಳಗೊಂಡಿದೆ. ಅಲ್ಲದೆ 4,000mAh ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲಟೂತ್‌5, ಜಿಪಿಎಸ್‌,ವೈಫೈ, ಮತ್ತು ಡ್ಯಯೆಲ್‌ ಸಿಮ್‌ ಸ್ಲಾಟ್‌ಗಳನ್ನ ಹೊಂದಿದೆ.

ಹಾನರ್ ಮ್ಯಾಜಿಕ್ ವಾಚ್ 2

ಹಾನರ್ ಮ್ಯಾಜಿಕ್ ವಾಚ್ 2

ಹಾನರ್‌ ಮ್ಯಾಜಿಕ್ ವಾಚ್ 2, 46 ಎಂಎಂ ಆವೃತ್ತಿಯು 454 x 454 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ 1.4-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕಿರಿನ್ ಎ 1 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ. ಅಲ್ಲದೆ 455Mah ಬ್ಯಾಟರಿ ಪ್ಯಾಕ್‌ಆಪ್‌ ಹೊಂದಿದ್ದು, 14 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಈ ವಾಚ್‌ 8 ಹೊರಾಂಗಣ ಮತ್ತು 7 ಒಳಾಂಗಣ ಕ್ರೀಡೆಗಳು ಸೇರಿದಂತೆ 15 ಗೋಲ್-ಆಧಾರಿತ ಫಿಟ್‌ನೆಸ್ ಮೋಡ್‌ಗಳನ್ನು ಬೆಂಬಲಿಸುತ್ತದೆ. ಇನ್ನು ಈ ವಾಚ್‌ನಲ್ಲಿ ಹುವಾವೇ ಟ್ರೂಸ್ಲೀಪ್ 2.0 ತಂತ್ರಜ್ಞಾನವಿದ್ದು, ಇದು ಬಳಕೆದಾರರ ಒತ್ತಡದ ಮಟ್ಟವನ್ನು ಪತ್ತೆ ಮಾಡುತ್ತದೆ ಮತ್ತು ಹೃದಯ ಬಡಿತವನ್ನು 24/7 ಮಾನಿಟರ್‌ ಮಾಡುತ್ತದೆ.

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i 160 x 80 ಫಿಕ್ಸೆಲ್‌ ರೆಸಲ್ಯೂಶನ್‌ ಹೊಂದಿರುವ 0.96 ಇಂಚಿನ ಕಲರ್‌ ಟಚ್‌ಸ್ಕ್ರೀನ್‌ ಟಿಎಫ್‌ಟಿ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇ ಮೂಲಕ ನ್ಯಾವಿಗೇಶನ್‌ ಅನ್ನ ಸುಲಭವಾಗಿ ಬಳಸಬಹುದಾಗಿದೆ. ಹಾನರ್‌ನ ಈ ಫಿಟ್ನೆಸ್‌ ಬ್ಯಾಂಡ್‌ ನಿದ್ರೆ, ವ್ಯಾಯಾಮ, ಸೇರಿದಂತೆ 10 ಮಾದರಿಯ ಆರೋಗ್ಯ ಸಂಬಂಧಿತ ವಿಷಯಗಳನ್ನ ಟ್ರ್ಯಾಕ್‌ ಮಾಡಲಿದೆ. ಜೊತೆಗೆ ರಕ್ತ ಶುದ್ದಿಕರಣದ ಮಟ್ಟ ಸೇರಿದಂತೆ ಹೃದಯ ಬಡಿತದ ಮಾನಿಟರ್‌ ಕೂಡ ಮಾಡಲಿದೆ. ಜೊತೆಗೆ ಅಕ್ಸೆಲೆರೊಮೀಟರ್, ಗೈರೊಸ್ಕೋಪ್ ಸೆನ್ಸಾರ್‌ಗಳನ್ನು ಸಹ ಹೊಂದಿದೆ.

Most Read Articles
Best Mobiles in India

English summary
Honor is gearing up for a huge event in India next week. On January 14, the company is hosting an event in Delhi where it will unveil a bunch of products. These include the Honor 9X smartphone, Honor Magic Watch 2 and the Honor Band 5i. Ahead of the official launch, availability details of these Honor products have been confirmed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more