ಸ್ಮಾರ್ಟ್‌ವಾಚ್‌ಗಳ ಮೇಲೆ ಭಾರಿ ರಿಯಾಯಿತಿ ಘೋಷಿಸಿದ ಹಾನರ್ ಕಂಪೆನಿ!
ಇತ್ತೀಚಿನ ದಿನಗಳಲ್ಲಿ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ವೈವಿಧ್ಯ ಬಗೆಯ ಫಿಟ್ನೆಸ್ ಆಧಾರಿತ ಸ್ಮಾರ್ಟ್‌ವಾಚ್ ಹಾಗೂ ಸ್ಮಾರ್ಟ್ ಬ್ಯಾಂಡ್‌ಗಳು ಲಭ್ಯವಿವೆ. ವಿವಿಧ ಮಾದರಿಯ ಫೀಚಸ್‌ಗಳ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಸಹ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ಗಳನ್ನೆ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಸ್ಮಾರ್ಟ್‌ಬ್ಯಾಂಡ್ ಹಾಗೂ ಸ್ಮಾರ್ಟ್‌ವಾಚ್ ಉತ್ಪನ್ನಗಳನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿ ಸೈ ಎನಿಸಿಕೊಂಡ ಬ್ರ್ಯಾಂಡ್‌ಗಳಲ್ಲಿ ಹಾನರ್ ಕಂಪೆನಿ ಕೂಡ ಒಂದಾಗಿದೆ. ಸ್ಮಾರ್ಟ್‌ವಾಚ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಹಾನರ್ ಕಂಪೆನಿ ಇದೀಗ ತನ್ನ ಸ್ಮಾರ್ಟ್‌ವಾಚ್ ಹಾಗೂ ಸ್ಮಾರ್ಟ್‌ಬ್ಯಾಂಡ್‌ಗಳ ಮೇಲೆ ಬೆಲೆ ಕಡಿತವನ್ನು ಘೋಷಿಸಿದೆ.

ಹೌದು, ಹಾನರ್ ಕಂಪೆನಿ ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ಬ್ಯಾಂಡ್ ಹಾಗೂ ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿದೆ. ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೇ ತನ್ನ ಹೊಸ ಆವೃತ್ತಿಯ ಹಾನರ್ ಮ್ಯಾಜಿಕ್ ವಾಚ್ ಹಾಗೂ ಹಾನರ್ ಬ್ಯಾಂಡ್ 5 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ 14,999ರೂ ಬೆಲೆಯ ಹಾನರ್ ಮ್ಯಾಜಿಕ್ ವಾಚ್ ಅನ್ನು ರಿಯಾಯಿತಿ ದರದಲ್ಲಿ ಕೇವಲ 7,999 ರೂ ಗಳಿಗೆ ಮಾರಾಟ ಮಾಡುತ್ತಿದ್ದು, ಇದನ್ನ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲ ಹಾನರ್ ಬ್ಯಾಂಡ್ 5 ಕೂಡ ಕೇವಲ 2,299ರೂ ಗಳಿಗೆ ದೊರೆಯಲಿದೆ

ಹಾನರ್ ಮ್ಯಾಜಿಕ್ ವಾಚ್ ವಿನ್ಯಾಸ
ಹಾನರ್ ಮ್ಯಾಜಿಕ್ ವಾಚ್, ಸ್ಮಾರ್ಟ್‌ವಾಚ್ ಸ್ಟೇನ್ಲೆಸ್ ಸ್ಟೀಲ್ ಬಿಲ್ಡ್ ಹೊಂದಿದ್ದು, 42 ಎಂಎಂ ಮತ್ತು 46 ಎಂಎಂ ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು 42mm ಮಾದರಿಯ ಸ್ಮಾರ್ಟ್‌ವಾಚ್ 390 X 390 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 1.2 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿದೆ. 46mm ರೂಪಾಂತರದ ಸ್ಮಾರ್ಟ್‌ವಾಚ್ 454 X 454 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 1.39 ಇಂಚಿನ ಅಮೋಲೆಡ್ ಪ್ಯಾನಲ್ ಅನ್ನು ಹೊಂದಿದೆ.

ಹಾನರ್ ಮ್ಯಾಜಿಕ್ ವಾಚ್ ಫೀಚರ್ಸ್
ಈ ಸ್ಮಾರ್ಟ್‌ವಾಚ್ ಹಾರ್ಟ್‌ಬೀಟ್ ಮಾನಿಟರಿಂಗ್, ಹಾಗೂ ವರ್ಚುವಲ್ ಪೇಸ್-ಸೆಟ್ಟರ್ ಅನ್ನು ಹೊಂದಿದೆ. ನಿದ್ರಾಹೀನತೆಯನ್ನು ಪತ್ತೆಹಚ್ಚಲು ಹುವಾವೇ ಟ್ರೂಸ್ಲೀಪ್ 2.0 ತಂತ್ರಜ್ಞಾನದ ಬೆಂಬಲವನ್ನು ಹೊಂದಿದೆ. ಇನ್ನು ಹುವಾವೇ ಟ್ರುರೆಲ್ಯಾಕ್ಸ್ (TruRelax) ಫೀಚರ್ಸ್ ಹೊಂದಿದ್ದು ಇದು ಒತ್ತಡವನ್ನ ನಿವಾರಣೆ ಮಾಡಲಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ಬ್ಲೂಟೂತ್ 4.2 ಅನ್ನು ಬೆಂಬಲಿಸುತ್ತದೆ. ಅಲ್ಲದೆ ಹಾನರ್ ಮ್ಯಾಜಿಕ್ ವಾಚ್ ಒಂದೇ ಚಾರ್ಜಿಂಗ್‌ಗೆ 7 ದಿನಗಳವರೆಗೆ ಬಾಳಿಕೆ ಬರ

ಹಾನರ್ ಬ್ಯಾಂಡ್ 5 ವಿಶೇಷತೆ
ಹಾನರ್ ಬ್ಯಾಂಡ್ 5 ಸ್ಮಾರ್ಟ್ ಬ್ಯಾಂಡ್ 120 x 240 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 0.95-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ 2.5D ಕರ್ವ್ ಗ್ಲಾಸ್ ರಕ್ಷಣೆ ಪಡೆದಿದೆ. ಸೈಕ್ಲಿಂಗ್, ಸ್ವಿಮ್ಮಿಂಗ್, ಸೇರಿದಂತೆ ಸುಮಾರು 10 ಆಕ್ಟಿವಿಟಿಗಳ ಟ್ರಾಕಿಂಗ್ ಮಾಡಲಿದೆ. ನಿರಂತರ ಹಾರ್ಟ್‌ಬೀಟ್ ಮಾನಿಟರ್ ಮಾಡಲಿದ್ದು, ಹಾಗೆಯೇ ರಕ್ತದಲ್ಲಿನ SpO2 ಮತ್ತು ಆಕ್ಸಿಜನ್ ಪ್ರಮಾಣದ ಮಾಹಿತಿ ಒದಗಿಸುತ್ತದೆ.

ರಿಯಾಯಿತಿ ದರದ ಬೆಲೆ
ಹಾನರ್ ಮ್ಯಾಜಿಕ್ ವಾಚ್ 2 ಮತ್ತು ಹಾನರ್ ಬ್ಯಾಂಡ್ 5 ಪಿಟ್ನೆಸ್ ಡಿವೈಸ್‌ಗಳ ಬೆಲೆಯನ್ನ ಭಾರತದಲ್ಲಿ ಹಾನರ್ ಕಂಪೆನಿ ಕಡಿತ ಮಾಡಿದ್ದು. 14,999ರೂ ಬೆಲೆಯನ್ನ ಹೊಂದಿರುವ ಹಾನರ್ ಮ್ಯಾಜಿಕ್ ವಾಚ್ ರಿಯಾಯಿತಿ ದರದಲ್ಲಿ 7,999 ರೂಗಳಿಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ನಲ್ಲಿ ನೋ ಕಾಸ್ಟ್ EMI ಮೂಲಕವೂ ಖರೀದಿಸಬಹುದಾಗಿದೆ. ಹಾಗೇಯೆ 2,599 ರೂ ಮೂಲ ಬೆಲೆ ಹೊಂದಿದ್ದ ಹಾನರ್ ಬ್ಯಾಂಡ್ 5 ಈಗ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 2,299 ರೂಗಳಿಗೆ ಲಭ್ಯವಿದೆ. ಅಮೆಜಾನ್ ನಲ್ಲಿಯೂ ಕೂಡ ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








