Home
ಸುದ್ದಿಜಾಲ

ವಿದ್ಯಾರ್ಥಿಗಳಿಗೆ ಬೆಸ್ಟ್‌ ಎನಿಸುವ ಲ್ಯಾಪ್‌ಟಾಪ್‌ ಪರಿಚಯಿಸಿದ ಹಾನರ್‌! ಬೆಲೆ ಎಷ್ಟು?

ಹಾನರ್‌ ಕಂಪೆನಿ ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರವಲ್ಲ ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳಿಗೆ ಕೂಡ ಪ್ರಸಿದ್ಧಿಯನ್ನು ಪಡೆದಿದೆ. ಈಗಾಗಲೇ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿರುವ ಹಾನರ್‌ ಇದೀಗ ಹೊಸ ಹಾನರ್‌ ಮ್ಯಾಜಿಕ್‌ಬುಕ್‌ X14 2023 ಮತ್ತು X16 2023 ಅನ್ನು ಬಿಡುಗಡೆ ಮಾಡಿದೆ.

ಹೌದು, ಭಾರತದಲ್ಲಿ ಹಾನರ್‌ ಮ್ಯಾಜಿಕ್‌ಬುಕ್‌ X14 2023 ಮತ್ತು X16 2023 ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಇದರಲ್ಲಿ X16 ಮ್ಯಾಜಿಕ್‌ಬುಕ್ ಎಕ್ಸ್-ಸರಣಿ ಲ್ಯಾಪ್‌ಟಾಪ್‌ಗಳಿಗೆ ಹೊಸ ಸೇರ್ಪಡೆಯಾಗಿದೆ. ಇನ್ನುಳಿದಂತೆ ಹಾನರ್‌ನ ಈ ಹೊಸ ಲ್ಯಾಪ್‌ಟಾಪ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿದ್ಯಾರ್ಥಿಗಳಿಗೆ ಬೆಸ್ಟ್‌ ಎನಿಸುವ ಲ್ಯಾಪ್‌ಟಾಪ್‌ ಪರಿಚಯಿಸಿದ ಹಾನರ್‌!

ಹಾನರ್‌ ಮ್ಯಾಜಿಕ್‌ X14 2023 ಲ್ಯಾಪ್‌ಟಾಪ್‌ 14 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು X16 2023 ಲ್ಯಾಪ್‌ಟಾಪ್‌ 16 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಎರಡು ಲ್ಯಾಪ್‌ಟಾಪ್‌ ಡಿಸ್‌ಪ್ಲೇಗಳು 100 ಪ್ರತಿಶತ ಬಣ್ಣದ ಹರವು ಮತ್ತು 300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿವೆ. ಈ ಲ್ಯಾಪ್‌ಟಾಪ್‌ಗಳು ತೆಳುವಾದ ಮತ್ತು ಹಗುರವಾದ ವಿನ್ಯಾಸದೊಂದಿಗೆ ಮೆಟಲ್ ಯುನಿಬಾಡಿಯನ್ನು ಹೊಂದಿವೆ. ಇದರೊಂದಿಗೆ ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿವೆ.

ಹಾನರ್‌ ಮ್ಯಾಜಿಕ್‌ಬುಕ್ X14 ಮತ್ತು X16 2023 ಲ್ಯಾಪ್‌ಟಾಪ್‌ಗಳು ಫುಲ್‌-ಸೈಜ್ಡ್‌ ಬ್ಯಾಕ್‌ಲಿಟ್ ಕೀಬೋರ್ಡ್ ಅನ್ನು ಒಳಗೊಂಡಿರುತ್ತದೆ. ಎರಡನೆಯದು ಸ್ವತಂತ್ರ ಸಂಖ್ಯೆಯ ಪ್ಯಾಡ್ ಅನ್ನು ಸಹ ಪಡೆದುಕೊಂಡಿದೆ. ಜೊತೆಗೆ ಲ್ಯಾಪ್‌ಟಾಪ್‌ಗಳು ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿದೆ. ಇದರಿಂದ ನಹಿಮಿಕ್ ಇಮ್ಮರ್ಸಿವ್ ಗೇಮಿಂಗ್ ಆಡಿಯೊವನ್ನು ಅನುಭವಿಸಬಹುದು. ಹಾಗೆಯೇ ಲ್ಯಾಪ್‌ಟಾಪ್‌ ಸ್ಕ್ರೀನ್‌ ಸೌಂಡ್‌ ಎಫೆಕ್ಟ್‌ಗಳಿಗೆ ಆಟೋಮ್ಯಾಟಿಕ್‌ ಆಗಿ ಹೊಂದಿಕೊಳ್ಳಲಿದೆ.

ವಿದ್ಯಾರ್ಥಿಗಳಿಗೆ ಬೆಸ್ಟ್‌ ಎನಿಸುವ ಲ್ಯಾಪ್‌ಟಾಪ್‌ ಪರಿಚಯಿಸಿದ ಹಾನರ್‌!

ಹಾನರ್‌ ಮ್ಯಾಜಿಕ್‌ಬುಕ್‌ X14 2023 ಮತ್ತು X16 2023 ಲ್ಯಾಪ್‌ಟಾಪ್‌ಗಳು 12ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿವೆ. ಸಾಫ್ಟ್‌ವೇರ್-ವಾರು, ಲ್ಯಾಪ್‌ಟಾಪ್‌ಗಳು ವಿಂಡೋಸ್ 11 ಓಎಸ್‌ನಲ್ಲಿ ಹಾನರ್ ಡಿವೈಸ್ ಕ್ಲೋನ್ ಅನ್ನು ಬೆಂಬಲಿಸಲಿವೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೊರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ ಈ ಎರಡು ಲ್ಯಾಪ್‌ಟಾಪ್‌ಗಳು 65W ವೇಗದ ಚಾರ್ಜಿಂಗ್‌ ಬೆಂಬಲಿಸುವ 60Whr ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿವೆ.

ಹಾನರ್‌ ಮ್ಯಾಜಿಕ್‌ಬುಕ್‌ X14 2023 ಮತ್ತು X16 2023 ಬೆಲೆ

ಹಾನರ್‌ ಮ್ಯಾಜಿಕ್‌ಬುಕ್‌ X14 2023 ಲ್ಯಾಪ್‌ಟಾಪ್‌ 8GB + 512GB ರೂಪಾಂತರದ ಆಯ್ಕೆಗೆ 48,990ರೂ. ಬೆಲೆಯನ್ನು ಹೊಂದಿದೆ. ಇದರ 16GB + 512GB RAM ಸ್ಟೋರೇಜ್‌ ಆಯ್ಕೆಯು 51,990 ರೂ. ಬೆಲೆಯನ್ನು ಹೊಂದಿದೆ. ಇನ್ನು ಹಾನರ್‌ ಮ್ಯಾಜಿಕ್‌ಬುಕ್ X16 2023 ಲ್ಯಾಪ್‌ಟಾಪ್‌ 8GB + 512GB ರೂಪಾಂತರದ ಆಯ್ಕೆಗೆ 50,990ರೂ. ಬೆಲೆಯನ್ನು ಹೊಂದಿದೆ. ಇದರ 16GB + 512GB RAM ಸ್ಟೋರೇಜ್‌ ಆಯ್ಕೆಯು 53,990 ರೂ. ಬೆಲೆಯನ್ನು ಪಡೆದುಕೊಂಡಿದೆ.

ವಿದ್ಯಾರ್ಥಿಗಳಿಗೆ ಬೆಸ್ಟ್‌ ಎನಿಸುವ ಲ್ಯಾಪ್‌ಟಾಪ್‌ ಪರಿಚಯಿಸಿದ ಹಾನರ್‌!

ಆಫರ್‌ ಮತ್ತು ಲಭ್ಯತೆ ವಿವರ

ಪ್ರಸ್ತುತ ಹಾನರ್‌ ಮ್ಯಾಜಿಕ್‌ಬುಕ್‌ X14 2023 ಮತ್ತು X16 2023 ಲ್ಯಾಪ್‌ಟಾಪ್‌ಗಳು ಭಾರತದಲ್ಲಿ ಅನಾವರಣಗೊಂಡಿವೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು Amazon ಮೂಲಕ ಖರೀದಿಗೆ ಲಭ್ಯವಾಗಲಿವೆ. ಈ ಲ್ಯಾಪ್‌ಟಾಪ್‌ಗಳನ್ನು ನೀವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 2,500 ರೂಪಾಯಿ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇನ್ನು ಈ ಲ್ಯಾಪ್‌ಟಾಪ್‌ಗಳು ಯಾವೆಲ್ಲಾ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿವೆ ಎಂಬುದರ ಬಗ್ಗೆ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ.

Best Mobiles in India

English summary
Honor MagicBook X14, X16 2023 Launched In India: specs and price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+