ಹಾನರ್‌ನಿಂದ ಹೊಸ ಬ್ಲೂಟೂತ್ ಸ್ಪೀಕರ್ ಲಾಂಚ್: ಬೆಲೆ ಎಷ್ಟು?
ಹಾನರ್ ಕಂಪೆನಿಯ ಪೋರ್ಟಬಲ್ ಸ್ಪಿಕರ್‌ಗಳಿಗೆ ಟೆಕ್ ವಲಯದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ತನ್ನ ವಿಭಿನ್ನ ಮಾದರಿಯ ಸ್ಪೀಕರ್‌ಗಳಿಂದ ಗಮನಸೆಳೆದಿರುವ ಹಾನರ್ ಇದೀಗ ಮಾರ್ವೆಲ್ ಸಹಯೋಗದೊಂದಿಗೆ ಹಾನರ್ ಪೋರ್ಟಬಲ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿದೆ. ಇದು 30W ಔಟ್‌ಪುಟ್ ಅನ್ನು ಹೊಂದಿದೆ.
ಹೌದು, ಹಾನರ್ ಮಾರ್ವೆಲ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಪವರ್‌ಫುಲ್ ಬಾಸ್ ಜೊತೆಗೆ 360° ಸರೌಂಡ್ ಸೌಂಡ್ ಅನುಭವವನ್ನು ನೀಡಲಿದೆ. ಇನ್ನು ಸ್ಪೀಕರ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿದ್ದು, ಭಾರೀ ಮಳೆ ಮತ್ತು ಕ್ಷಣಿಕ ನೀರಿನ ಮುಳುಗುವಿಕೆಯನ್ನು ತಡೆದುಕೊಳ್ಳಬಲ್ಲದು. ಹಾಗಾದ್ರೆ ಹೊಸ ಮಾರ್ವೆಲ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ ಮಾರ್ವೆಲ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ನವೀನ ಮಾದರಿಯ ಡಿಸೈನ್ ಹೊಂದಿದೆ. ತನ್ನ ಫಸ್ಟ್ ಲುಕ್‌ನಿಂದಲೇ ಗ್ರಾಹಕರ ಗಮನಸೆಳೆಯುವ ಲಕ್ಷಣಗಳನ್ನು ಕಾಣಬಹುದಾಗಿದೆ. ಈ ಸ್ಪೀಕರ್ ಅನ್ನು ಕೈಗಾರಿಕಾ ಬೂದು ಮತ್ತು ಹೊಡೆಯುವ ಕಿತ್ತಳೆ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಇದು ಯುನಿಬಾಡಿ ಲೋಹದ ವಿನ್ಯಾಸವನ್ನು ಹೊಂದಿದ್ದು, ಗಟ್ಟಿಮುಟ್ಟಾದ ನಿರ್ಮಾಣವನ್ನು ನೀಡಲಿದೆ. ಜೊತೆಗೆ ಇದರಲ್ಲಿ ಸಿಂಗಲ್-ಬಟನ್ ವಾಯ್ಸ್ ಅಸಿಸ್ಟೆಂಟ್ ಅನ್ನು ಒಳಗೊಂಡಿದೆ.
ವಾಯ್ಸ್ ಅಸಿಸ್ಟೆಂಟ್ ಮೂಲಕ ಸ್ಪೀಕರ್‌ನಲ್ಲಿ ಸ್ಪಷ್ಟ ಧ್ವನಿಯೊಂದಿಗೆ ಹ್ಯಾಂಡ್ಸ್-ಫ್ರೀ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೆ ಸ್ಪೀಕರ್ ಯಾವುದೇ ಬಳಕೆಯಿಲ್ಲದ ಮೂರು ಗಂಟೆಗಳ ನಂತರ ಸ್ವಯಂ-ಆಫ್ ವೈಶಿಷ್ಟ್ಯದೊಂದಿಗೆ ಪವರ್ ಸೇವ್ ಮೋಡ್ ಅನ್ನು ಸಹ ನೀಡಲಾಗಿದೆ. ಅಂದರೆ ಮಾರ್ವೆಲ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಪ್ರೊ ಬರೋಬ್ಬರಿ 12 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಇದಲ್ಲದೆ ಸ್ಪೀಕರ್ ಅನ್ನು ಸಿಂಗಲ್ ಕ್ಲಿಕ್‌ನಲ್ಲಿ ಕನೆಕ್ಟ್ ಮಾಡುವ ಅಪ್ಲಿಕೇಶನ್ ಅನ್ನು ಕೂಡ ನಿಯಂತ್ರಿಸಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಮಾರ್ವೆಲ್ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಪ್ರೊ ಇದೀಗ ವಿಶೇಷ ಬೆಲೆ $53 (ಅಂದಾಜು 4,397ರೂ)ಗೆ ಲಭ್ಯವಿದೆ. ಈ ಆಫರ್ ಮಾರ್ಚ್ 22 ರವರೆಗೆ ಮಾತ್ರ, ಇದನ್ನು ನೀವು ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ.
ಇನ್ನು ಹಾನರ್ ಕಂಪೆನಿ ಶೀಘ್ರದಲ್ಲೇ ಹೊಸ HONOR Pad 9 ಟ್ಯಾಬ್ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಮುನ್ಸೂಚನೆ ಎಂಬಂತೆ ಅಮೆಜಾನ್.ಇನ್‌ನಲ್ಲಿ ಲ್ಯಾಂಡಿಂಗ್ ಪೇಜ್ ಲೈವ್ ಆಗಿದೆ. ಇದು ಬ್ಲೂಟೂತ್ ಕೀಬೋರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತದೆ. ಈ ಟ್ಯಾಬ್ಲೆಟ್ ಸ್ಲಿಮ್ ಪ್ರೊಫೈಲ್ ಅನ್ನು ಹೊಂದಿದ್ದು, 12.1-ಇಂಚಿನ 2.5K (WQXA) LCD ಸ್ಕ್ರೀನ್ ಒಳಗೊಂಡಿದೆ. ಈ ಡಿಸ್‌ಪ್ಲೇಯು 1,600x2,560 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಜೊತೆಗೆ ಡಿಸ್‌ಪ್ಲೇಯು 88% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರಲಿದೆ. ಈ ಸ್ಮಾರ್ಟ್ ಟ್ಯಾಬ್ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಲೆವೆಲ್‌ನಲ್ಲಿದೆ.
HONOR Pad 9 ಸ್ಮಾರ್ಟ್‌ಟ್ಯಾಬ್ 4nm ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಆಧಾರಿತ MagicOS 7.2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB +256GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲಿಸುವ ನಿರೀಕ್ಷೆಯನ್ನು ಸಹ ಇಡಲಾಗಿದೆ. ಈ ಟ್ಯಾಬ್ ಸ್ಮಾರ್ಟ್ ಕನೆಕ್ಟಿವಿಟಿ , ಸ್ಮಾರ್ಟ್ ಸರ್ವಿಸ್, ಸುಗಮ ಕಾರ್ಯಕ್ಷಮತೆ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಒದಗಿಸಲಿದೆ ಎನ್ನಲಾಗಿದೆ. ಇದರ ಬೆಲೆ ವಿವರಗಳು ಇನ್ನು ಸಹ ಬಹಿರಂಗವಾಗಿಲ್ಲ.


Click it and Unblock the Notifications








