ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್‌ ಬಿಡುಗಡೆ!..7,250mAh ಬ್ಯಾಟರಿ!

|

ಟೆಕ್‌ ಮಾರುಕಟ್ಟೆಯ ಪ್ರತಿಷ್ಠಿತ ಕಂಪೆನಿ ಹಾನರ್‌ ತನ್ನ ವೈವಿಧ್ಯಮಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಆಕರ್ಷಕ ಟ್ಯಾಬ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಹೊಸ ಹಾನರ್‌ ಪ್ಯಾಡ್‌ 8 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಟ್ಯಾಬ್ಲೆಟ್ TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಮತ್ತು ಫ್ಲಿಕರ್ ಫ್ರೀ ಪ್ರಮಾಣೀಕರವನ್ನು ಹೊಂದಿದೆ. ಇದು 12 ಇಂಚಿನ 2K ಡಿಸ್‌ಪ್ಲೇಯನ್ನು ಹೊಂದಿದೆ.

ಹಾನರ್‌

ಹೌದು, ಹಾನರ್‌ ಕಂಪೆನಿ ಹೊಸ ಟ್ಯಾಬ್ಲೆಟ್ ಹಾನರ್‌ ಪ್ಯಾಡ್‌ 8 ಅನ್ನು ಲಾಂಚ್‌ ಮಾಡಿದೆ. ಈ ಟ್ಯಾಬ್ಲೆಟ್‌ ಇಬುಕ್ ಮೋಡ್ ಮತ್ತು ಡಾರ್ಕ್ ಮೋಡ್‌ ಅನ್ನು ಒಳಗೊಂಡಿದೆ. ಇದು ಡಿಟಿಎಸ್: ಎಕ್ಸ್ ಅಲ್ಟ್ರಾ ಮತ್ತು ಹಾನರ್ ಹಿಸ್ಟನ್ ಟೆಕ್ನಾಲಜಿಯನ್ನು ಒಳಗೊಂಡ ಎಂಟು ಸ್ಪೀಕರ್‌ಗಳನ್ನು ಹೊಂದಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ಲೆಟ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹಾನರ್ ಪ್ಯಾಡ್ 8 ವಿಶೇಷತೆ

ಹಾನರ್ ಪ್ಯಾಡ್ 8 ವಿಶೇಷತೆ

ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್ 12 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,200x2,000 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 87% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಪಡೆದುಕೊಂಡಿದೆ. ಇನ್ನು ಈ ಡಿಸ್‌ಪ್ಲೇ ಕಣ್ಣಿನ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕಾಗಿ ಕಡಿಮೆ ನೀಲಿ ಬೆಳಕಿನ ಹೊರಸೂಸುವಿಕೆ ಹೊಂದಿದೆ. ಹಾಗೆಯೇ ಫ್ಲಿಕರ್-ಮುಕ್ತ ಸ್ಕ್ರೀನ್‌ಗಾಗಿ TÜV ರೈನ್‌ಲ್ಯಾಂಡ್ ಪ್ರಮಾಣೀಕರಿಸಲ್ಪಟ್ಟಿದೆ.

ಹಾನರ್ ಪ್ಯಾಡ್ 8

ಹಾನರ್ ಪ್ಯಾಡ್ 8 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ ಆಧಾರಿತ ಮ್ಯಾಜಿಕ್ UI 6.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 128GB ಇದು ಸ್ಮಾರ್ಟ್ ಮಲ್ಟಿ-ವಿಂಡೋ ಫೀಚರ್ಸ್‌ನೊಂದಿಗೆ ಬರಲಿದೆ. ಅಲ್ಲದೆ ಬಳಕೆದಾರರಿಗೆ ಒಂದು ಪರದೆಯಲ್ಲಿ ನಾಲ್ಕು ವಿಂಡೋಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಇನ್ನು ಈ ಟ್ಯಾಬ್ಲೆಟ್ ಸ್ಕ್ರೀನ್‌ ಬಳಸಿಕೊಂಡು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ ಜೊತೆಗೆ ಕಮ್ಯೂನಿಕೇಶನ್‌ ನಡೆಸಬಹುದಾಗಿದೆ.

ಹಾನರ್‌

ಇನ್ನು ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್‌ ಹಿಂಬದಿ ಹಾಗೂ ಫ್ರಂಟ್‌ ಸೈಡ್‌ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿಕ್ಯಾಮೆರಾಗಳನ್ನು ಹೊಂದಿದೆ. ಜೊತೆಗೆ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 22.5W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಈ ಟ್ಯಾಬ್ಲೆಟ್‌ ನಾಲ್ಕು ಟ್ರಿಬಲ್ ಮತ್ತು ನಾಲ್ಕು ಬಾಸ್ ಘಟಕಗಳನ್ನು ಒಳಗೊಂಡಂತೆ ಎಂಟು ಸ್ಪೀಕರ್‌ಗಳನ್ನು ಹೊಂದಿದೆ. ಇದರಲ್ಲಿ ಸ್ಟಿರಿಯೊ ಸ್ಪೀಕರ್ ಸೆಟಪ್ ಹಾನರ್ ಹಿಸ್ಟನ್ ಮತ್ತು ಡಿಟಿಎಸ್: ಎಕ್ಸ್ ಅಲ್ಟ್ರಾ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದರಲ್ಲಿ ಇಂಟರ್‌ಬಿಲ್ಟ್‌ ಮೈಕ್ರೊಫೋನ್ ಕೂಡ ಇದೆ.

ಹಾನರ್‌

ಹಾನರ್‌ ಪ್ಯಾಡ್‌ 8 ಟ್ಯಾಬ್ಲೆಟ್‌ ಕನೆಕ್ಟಿವಿಟಿಯಲ್ಲಿ 2.4GHz ಮತ್ತು 5GHz ಡ್ಯುಯಲ್-ಬ್ಯಾಂಡ್ Wi-Fi ಮತ್ತು ಬ್ಲೂಟೂತ್ v5.1 ಬೆಂಬಲವನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್‌ ಯುನಿಬಾಡಿ ವಿನ್ಯಾಸವನ್ನು ಹೊಂದಿದೆ. ಈ ಟ್ಯಾಬ್ಲೆಟ್‌ ಇಬುಕ್ ಮೋಡ್ ಮತ್ತು ಡಾರ್ಕ್ ಮೋಡ್‌ ಅನ್ನು ಒಳಗೊಂಡಿದೆ. ಇನ್ನು ಈ ಟ್ಯಾಬ್ಲೆಟ್‌ ಮಲೆಷ್ಯಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಪ್ರಸ್ತುತ ಇದರ ಬೆಲೆ MYR 1,399 (ಸುಮಾರು 25,000ರೂ)ಆಗಿದೆ. ಈ ಹಾನರ್ ಟ್ಯಾಬ್ಲೆಟ್ ಆಗಸ್ಟ್ 26 ರಿಂದ ಮಲೇಷ್ಯಾದಲ್ಲಿ ಮಾರಾಟವಾಗಲಿದೆ.

ಹಾನರ್‌

ಇದಲ್ಲದೆ, ಹಾನರ್‌ ಕಂಪೆನಿ ಹೊಸದಾಗಿ ಹಾನರ್‌ 70 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಇದು ಕರ್ವ್ಡ್‌ OLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 54 ಮೆಗಾಪಿಕ್ಸೆಲ್ ಸೋನಿ IMX800 ಸೆನ್ಸಾರ್‌ ಅನ್ನು ಪಡೆದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,800mAh ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

Read more about:
English summary
Honor Pad 8 packs a 7,250mAh battery with support for 22.5W fast charging.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X