Just In
- 9 min ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 39 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 18 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
Don't Miss
- News
Breaking: ಮಧ್ಯಪ್ರದೇಶದಲ್ಲಿ ಭಾರತೀಯ ವಾಯಪಡೆ ಯುದ್ಧ ವಿಮಾನಗಳ ಡಿಕ್ಕಿ, ಪತನ
- Movies
ಕ್ರಾಂತಿಗೆ ಸಿಕ್ಕಾಪಟ್ಟೆ ನೆಗೆಟಿವ್ ವಿಮರ್ಶೆ; ಚಿತ್ರ ನೋಡಿ ಕಿಡಿಕಾರಿದ ನಟ ಪ್ರಮೋದ್!
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತಕ್ಕೆ ಲಗ್ಗೆ ಇಟ್ಟ ಹಾನರ್ ಪ್ಯಾಡ್ 8! ಬೆಲೆ ಎಷ್ಟು?
ಟೆಕ್ ಮಾರುಕಟ್ಟೆಯಲ್ಲಿ ಹಾನರ್ ಕಂಪೆನಿ ತನ್ನ ಭಿನ್ನ ಶ್ರೇಣಿಯ ಡಿವೈಸ್‌ಗಳಿಂದ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಡಿವೈಸ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ತನ್ನ ಹೊಸ ಹಾನರ್ ಪ್ಯಾಡ್ 8 ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಹೌದು, ಹಾನರ್ ಕಂಪೆನಿ ತನ್ನ ಹೊಸ ಹಾನರ್ ಪ್ಯಾಡ್ 8 ಲಾಂಚ್ ಮಾಡಿದೆ. ಈ ಟ್ಯಾಬ್ಲೆಟ್ ಹಾನರ್ ಹಿಸ್ಟನ್ ಮತ್ತು DTS: X ಅಲ್ಟ್ರಾ ಟೆಕ್ನಾಲಜೀಸ್‌ನಿಂ ಒಳಗೊಂಡ ಎಂಟು-ಸ್ಪೀಕರ್ ಸೆಟಪ್ ಅನ್ನು ಅಳವಡಿಸಲಾಗಿದೆ. ಜೊತೆಗೆ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 22.5W ವೇಗದ ಚಾರ್ಜಿಂಗ್‌ಗೆ ಬೆಂಬಲಿಸಲಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ಲೆಟ್ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ? ಇದರ ವಿಶೇಷತೆ ಏನಿದೆ? ಇದೆಲ್ಲದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ ಪ್ಯಾಡ್ 8 ಟ್ಯಾಬ್ಲೆಟ್ 12 ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,200x2,000 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಇದು 87% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊ೦ಂದಿದೆ. ಈ ಟ್ಯಾಬ್ 7.2mm ಕಿರಿದಾದ ಅಂಚಿನ ವಿನ್ಯಾಸವಿರುವ ಮೆಟಾಲಿಕ್ ಯುನಿಬಾಡಿಯನ್ನು ಹೊಂದಿದೆ. ಇನ್ನು ಹಾನರ್ ಪ್ಯಾಡ್ 8 ಟ್ಯಾಬ್ಲೆಟ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 680 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್ ಆಧಾರಿತ ಮ್ಯಾಜಿಕ್ UI 6.1 ನಲ್ಲಿ ರನ್ ಆಗಲಿದೆ.

ಹಾನರ್ ಪ್ಯಾಡ್ 8 ಟ್ಯಾಬ್ಲೆಟ್ ಸಿಂಗಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದು 5 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿಯು ಕೂಡ ವೀಡಿಯೊ ರೆಕಾರ್ಡಿಂಗ್ ಮತ್ತು ಸೆಲ್ಫಿಗಾಗಿ 5ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದಿದೆ. ಈ ಟ್ಯಾಬ್ಲೆಟ್ ನಾಲ್ಕು ಟ್ರಿಬಲ್ ಮತ್ತು ನಾಲ್ಕು ಬಾಸ್ ಯೂನಿಟ್‌ಗಳನ್ನು ಒಳಗೊಂಡ ಎಂಟು ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಪೀಕರ್ ಸೆಟಪ್ ಹಾನರ್ ಹಿಸ್ಟನ್ ಮತ್ತು ಡಿಟಿಎಸ್: X ಅಲ್ಟ್ರಾ ತಂತ್ರಜ್ಞಾನವನ್ನು ಬೆಂಬಲಿಸಲಿದೆ.

ಈ ಪ್ಯಾಡ್ 7,250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಟ್ಯಾಬ್ಲೆಟ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.5GHz ಮತ್ತು 5GHz ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ಅನ್ನು ಬೆಂಬಲಿಸುತ್ತದೆ. ಹಾನರ್ ಪ್ಯಾಡ್ 8 6.9mm ತೆಳುವಾಗಿದ್ದು, 520g ತೂಕವನ್ನು ಹೊಂದಿದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಸೇಲ್ ಆಗಲಿದೆ.

ಬೆಲೆ ಎಷ್ಟಿದೆ
ಹಾನರ್ ಪ್ಯಾಡ್ 8 ಭಾರತದಲ್ಲಿ ಇದರ 4GB RAM ಮಾದರಿ ಆಯ್ಕೆಯು ಫ್ಲಿಪ್‌ಕಾರ್ಟ್‌ನಲ್ಲಿ 29,999ರೂ. ಬೆಲೆಯನ್ನು ಪಡೆದಿದೆ. ಆದರೆ 6GB RAM ಆವೃತ್ತಿಯು 31,999ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸಮಯದಲ್ಲಿ ಹಾನರ್ ಟ್ಯಾಬ್ಲೆಟ್ ಅನ್ನು ಕಡಿಮೆ ಬೆಲೆಗೆ ಅಂದರೆ ಕ್ರಮವಾಗಿ 19,999ರೂ ಮತ್ತು 21,999ರೂ. ಬೆಲೆಗೆ ದೊರೆಯಲಿದೆ.

ಲಭ್ಯತೆ ಯಾವಾಗ?
ಇದು ಸೆಪ್ಟೆಂಬರ್ 23 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2022 ರ ಸಮಯದಲ್ಲಿ ಮಾರಾಟವಾಗಲಿದೆ. ಈ ಟ್ಯಾಬ್ಲೆಟ್ ಅನ್ನು ಬ್ಲೂ ಅವರ್ ಕಲರ್ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ. ಈ ಟ್ಯಾಬ್ಲೆಟ್ ಇಬುಕ್ ಮೋಡ್ ಮತ್ತು ಡಾರ್ಕ್ ಮೋಡ್ ಅನ್ನು ಒಳಗೊಂಡಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470