Home
ಸುದ್ದಿಜಾಲ

ಭಾರತಕ್ಕೆ ಎಂಟ್ರಿ ನೀಡಲು HONOR Pad 9 ಟ್ಯಾಬ್‌ ಸಿದ್ಧತೆ: ನಿರೀಕ್ಷೆ ಏನು?

ಹಾನರ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ತನ್ನ ಸ್ಮಾರ್ಟ್‌ ಟ್ಯಾಬ್‌ಗಳಿಗೂ ಕೂಡ ಹೆಸರುವಾಸಿಯಾಗಿದೆ. ಅದರಂತೆ ಇತ್ತೀಚೆಗೆ MWC ನಲ್ಲಿ ತನ್ನ HONOR Pad 9 ಟ್ಯಾಬ್ಲೆಟ್‌ ಘೋಷಣೆ ಮಾಡಿತ್ತು. ಸದ್ಯ ಇದೀಗ, ಟ್ಯಾಬ್ಲೆಟ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದೆ. ಅದರ ಲ್ಯಾಂಡಿಂಗ್ ಪೇಜ್‌ ಈಗ Amazon.in ನಲ್ಲಿ ಲೈವ್ ಆಗಿದೆ.

ಹೌದು, ಹಾನರ್‌ ಕಂಪೆನಿ ಹೊಸದಾಗಿ HONOR Pad 9 ಟ್ಯಾಬ್‌ ಅನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಇದರ ಮುನ್ಸೂಚನೆ ಎಂಬಂತೆ ಅಮೆಜಾನ್‌.ಇನ್‌ನಲ್ಲಿ ಲ್ಯಾಂಡಿಂಗ್‌ ಪೇಜ್‌ ಲೈವ್‌ ಆಗಿದೆ. ಇದು ಬ್ಲೂಟೂತ್ ಕೀಬೋರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತದೆ ಎಂದು ವರದಿಯಾಗಿದೆ. ಹಾಗಾದ್ರೆ HONOR Pad 9 ಫೀಚರ್ಸ್‌ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತಕ್ಕೆ ಎಂಟ್ರಿ ನೀಡಲು HONOR Pad 9 ಟ್ಯಾಬ್‌ ಸಿದ್ಧತೆ: ನಿರೀಕ್ಷೆ ಏನು?

HONOR Pad 9 ಟ್ಯಾಬ್‌ ಫೀಚರ್ಸ್‌ ಹೇಗಿದೆ?
HONOR Pad 9 ಟ್ಯಾಬ್ಲೆಟ್ ಸ್ಲಿಮ್ ಪ್ರೊಫೈಲ್ ಅನ್ನು ಹೊಂದಿದೆ. ಇದು 12.1-ಇಂಚಿನ 2.5K (WQXA) LCD ಸ್ಕ್ರೀನ್‌ ಒಳಗೊಂಡಿದೆ. ಈ ಡಿಸ್‌ಪ್ಲೇಯು 1,600x2,560 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಜೊತೆಗೆ ಡಿಸ್‌ಪ್ಲೇಯು 88% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರಲಿದೆ. ಈ ಸ್ಮಾರ್ಟ್‌ ಟ್ಯಾಬ್‌ 500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ನಲ್ಲಿದೆ.

HONOR Pad 9 ಟ್ಯಾಬ್‌ ಪ್ರೊಸೆಸರ್‌ ಯಾವುದು?
HONOR Pad 9 ಸ್ಮಾರ್ಟ್‌ಟ್ಯಾಬ್‌ 4nm ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ MagicOS 7.2 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB +256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಬೆಂಬಲಿಸುವ ನಿರೀಕ್ಷೆಯನ್ನು ಸಹ ಇಡಲಾಗಿದೆ. ಈ ಟ್ಯಾಬ್‌ ಸ್ಮಾರ್ಟ್ ಕನೆಕ್ಟಿವಿಟಿ , ಸ್ಮಾರ್ಟ್ ಸರ್ವಿಸ್‌, ಸುಗಮ ಕಾರ್ಯಕ್ಷಮತೆ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಒದಗಿಸಲಿದೆ ಎನ್ನಲಾಗಿದೆ.

HONOR Pad 9 ಟ್ಯಾಬ್‌ ಕ್ಯಾಮೆರಾ ನಿರೀಕ್ಷೆ ಏನು?
HONOR Pad 9 ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದು 13 ಮೆಗಾಪಿಕ್ಸೆಲ್ ಸೆನ್ಸಾರ್‌ f/2.0 ಅಪರ್ಚರ್ ಲೆನ್ಸ್‌ನಲ್ಲಿ ಬರಲಿದೆ. ಇದರೊಂದಿಗೆ ಟ್ಯಾಬ್‌ನಲ್ಲಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗುವುದು ಎಂದು ವರದಿಯಾಗಿದೆ. ಇದರಿಂದ ಬಳಕೆದಾರರು ಅತ್ಯುತ್ತಮ ವೀಡಿಯೊ ಕರೆ ಬೆಂಬಲವನ್ನು ಸಹ ಪಡೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ಎಂಟ್ರಿ ನೀಡಲು HONOR Pad 9 ಟ್ಯಾಬ್‌ ಸಿದ್ಧತೆ: ನಿರೀಕ್ಷೆ ಏನು?

HONOR Pad 9 ಟ್ಯಾಬ್‌ ಬ್ಯಾಟರಿ ಮತ್ತು ಇತರೆ ಫೀಚರ್ಸ್‌
HONOR Pad 9 ಟ್ಯಾಬ್‌ 8300mAh ಬ್ಯಾಟರಿಯೊಂದಿಗೆ ಬರಲಿದ್ದು, 35W ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್‌ ಟ್ಯಾಬ್‌ ಮೀಡಿಯಾ ಮತ್ತು ಮನರಂಜನೆಗಾಗಿ, ಡ್ಯುಯಲ್ ಮೈಕ್ರೊಫೋನ್‌ಗಳನ್ನು ಹೊಂದಿದೆ. ಇದರಲ್ಲಿ ಧ್ವನಿ ವರ್ಧನೆ ಅಲ್ಗಾರಿದಮ್‌ಗಳೊಂದಿಗೆ 8 ಸ್ಪೀಕರ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಟ್ಯಾಬ್‌ TÜV ರೈನ್‌ಲ್ಯಾಂಡ್ ಲೋ ಬ್ಲೂ ಲೈಟ್ ಮತ್ತು TÜV ರೈನ್‌ಲ್ಯಾಂಡ್ ಫ್ಲಿಕರ್-ಮುಕ್ತ ಪ್ರಮಾಣೀಕರಣಗಳನ್ನು ಪಡೆದುಕೊಂಡಿದೆ.

HONOR Pad 9 ಟ್ಯಾಬ್‌ ಬೆಲೆ ಮತ್ತು ಲಭ್ಯತೆ
HONOR Pad 9 ಟ್ಯಾಬ್‌ ಭಾರತದಲ್ಲಿ ಯಾವ ಬೆಲೆಯಲ್ಲಿ ಬರಲಿದೆ ಎಂಬುದರ ಕುರಿತು ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಇದು ಶೀಘ್ರದಲ್ಲಿಯೇ ಭಾರತಕ್ಕೆ ಎಂಟ್ರಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಇದರ ಕಲರ್‌ ಆಯ್ಕೆಗಳ ಬಗ್ಗೆಯೂ ಸಹ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
HONOR Pad 9 with 12.1inch display in India launch Soon: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+