Home
ಸುದ್ದಿಜಾಲ

ಹಾನರ್‌ನಿಂದ ಹೊಸ ಟ್ಯಾಬ್‌ ಲಾಂಚ್‌! ಬರೋಬ್ಬರಿ 7,250mAh ಸಾಮರ್ಥ್ಯದ ಬ್ಯಾಟರಿ!

ಹಾನರ್‌ ಕಂಪೆನಿಯ ಡಿವೈಸ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯಿದೆ. ಇದಕ್ಕೆ ಕಾರಣ ಹಾನರ್‌ ಕಂಪೆನಿಯ ಡಿವೈಸ್‌ಗಳ ಗುಣಮಟ್ಟ ಹಾಗೂ ಡಿಸೈನ್‌ ಎಂದು ಹೇಳಬಹುದು. ಇದಕ್ಕೆ ಅನುಗುಣವಾಗಿ ಹಾನರ್ ಕಂಪೆನಿ ಇದೀಗ ಹೊಸ ಹಾನರ್‌ ಪ್ಯಾಡ್‌ V8 ಟ್ಯಾಬ್ಲೆಟ್‌ ಅನ್ನು ಅನಾವರಣಗೊಳಿಸಿದೆ.

ಹೌದು, ಹಾನರ್‌ ಸಂಸ್ಥೆ ತನ್ನ ಹೊಸ ಹಾನರ್‌ ಪ್ಯಾಡ್‌ V8 ಅನ್ನು ಬಿಡುಗಡೆ ಮಾಡಿದೆ. ಇದು ನವೀನ ಮಾದರಿಯ ಸ್ಮಾರ್ಟ್‌ ಟ್ಯಾಬ್ಲೆಟ್‌ ಆಗಿದ್ದು, ಬಿಗ್‌ ಸೈಜ್‌ ಬ್ಯಾಟರಿಯನ್ನು ಒಳಗೊಂಡಿದೆ. ಇದು 22.5W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಈ ಹೊಸ ಟ್ಯಾಬ್ಲೆಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್‌ನಿಂದ ಹೊಸ ಟ್ಯಾಬ್‌ ಲಾಂಚ್‌! ಬರೋಬ್ಬರಿ 7,250mAh ಸಾಮರ್ಥ್ಯದ ಬ್ಯಾಟರಿ!

ಹಾನರ್‌ ಪ್ಯಾಡ್‌ V8 ಫೀಚರ್ಸ್‌ ಹೇಗಿದೆ?

ಹಾನರ್‌ ಪ್ಯಾಡ್‌ V8 ಸ್ಮಾರ್ಟ್‌ ಟ್ಯಾಬ್ಲೆಟ್‌ 11 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2560 x 1600 ಪಿಕ್ಸೆಲ್‌ 2.5K ರೆಸಲ್ಯೂಶನ್ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 8020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8 GB RAM + 128 GB ಮತ್ತು 8 GB RAM + 256 GB ಇಂಟರ್‌ ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಹಾನರ್‌ ಪ್ಯಾಡ್‌ V8 ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಮತ್ತು ಎಲ್‌ಇಡಿ ಫ್ಲ್ಯಾಷ್‌ ಅನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ಟ್ಯಾಬ್ಲೆಟ್ ಕ್ವಾಡ್ ಸ್ಪೀಕರ್‌ಗಳನ್ನು ಸಹ ಹೊಂದಿದೆ.

ಹಾನರ್‌ನಿಂದ ಹೊಸ ಟ್ಯಾಬ್‌ ಲಾಂಚ್‌! ಬರೋಬ್ಬರಿ 7,250mAh ಸಾಮರ್ಥ್ಯದ ಬ್ಯಾಟರಿ!

ಹಾನರ್‌ ಪ್ಯಾಡ್‌ V8 ಟ್ಯಾಬ್ಲೆಟ್‌ 7,250mAh ಸಾಮರ್ಥ್ಯದ ಬಿಗ್‌ ಬ್ಯಾಟರಿಯನ್ನು ಹೊಂದಿದ್ದು, 22.5W ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕವನ್ನು ಮಾತ್ರ ಬೆಂಬಲಿಸುತ್ತದೆ. ಇದಲ್ಲದೆ ಈ ಪ್ಯಾಡ್‌ 7.35mm ದಪ್ಪ ಮತ್ತು 485 ಗ್ರಾಂ ತೂಕವನ್ನು ಹೊಂದಿದ್ದು, ಸ್ಲಿಮ್ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ.

ಹಾನರ್‌ನಿಂದ ಹೊಸ ಟ್ಯಾಬ್‌ ಲಾಂಚ್‌! ಬರೋಬ್ಬರಿ 7,250mAh ಸಾಮರ್ಥ್ಯದ ಬ್ಯಾಟರಿ!

ಹಾನರ್‌ ಪ್ಯಾಡ್‌ V8 ಬೆಲೆ ಮತ್ತು ಲಭ್ಯತೆ

ಹಾನರ್‌ ಪ್ಯಾಡ್‌ V8 ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಚೀನಾದಲ್ಲಿ ಹಾನರ್‌ ಪ್ಯಾಡ್‌ V8 8GB RAM + 128GB ಇಂಟರ್‌ ಸ್ಟೋರೇಜ್‌ ಆಯ್ಕೆಯು 1,799 ಯುವಾನ್ (ಅಂದಾಜು 21,267ರೂ)ಬೆಲೆಯನ್ನು ಪಡೆದಿದೆ. ಹಾಗೆಯೇ 8 GB RAM + 256 GB ಸ್ಟೋರೇಜ್‌ ಆಯ್ಕೆಯು 1,899 ಯುವಾನ್ (ಅಂದಾಜು 22,447ರೂ) ಬೆಲೆಯಲ್ಲಿ ಲಭ್ಯವಾಗಲಿದೆ.

ಇನ್ನು ಹಾನರ್‌ ಕಂಪೆನಿ ಇತ್ತೀಚಿಗೆ ಹಾನರ್‌ ಪ್ಲೇ 7T ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್‌ 6.74 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

Best Mobiles in India

English summary
Honor Pad V8 with Dimensity 8020 chipset launched: specs details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+