Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಿದ ಹಾನರ್‌! ಅಬ್ಬಬ್ಬಾ ಏನಿದು ಫೀಚರ್ಸ್‌!

ಹಾನರ್‌ ಕಂಪೆನಿಯ ಫೋನ್‌ಗಳಿಗೆ ಗ್ಲೋಬಲ್‌ ಮಾರುಕಟ್ಟೆಯಲ್ಲಿ ಭಾರಿ ಕ್ರೇಜ್‌ ಇದೆ. ತನ್ನ ಅತ್ಯಾಕರ್ಷಕ ಸ್ಮಾರ್ಟ್‌ಫೋನ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ಹೊಸ ಹಾನರ್‌ ಪ್ಲೇ 7T ಮತ್ತು ಹಾನರ್‌ ಪ್ಲೇ 7T ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಸೈಲೆಂಟ್‌ ಆಗಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳು ಸ್ಟೈಲಿಶ್‌ ಲುಕ್‌ನಿಂದ ಗಮನಸೆಳೆದಿವೆ.

ಹೌದು, ಹಾನರ್‌ ಪ್ಲೇ 7T ಮತ್ತು ಹಾನರ್‌ ಪ್ಲೇ 7T ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ ಹಾನರ್‌ ಪ್ಲೇ 7T ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 6020 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಹಾನರ್‌ ಪ್ಲೇ 7T ಪ್ರೊ ಮೀಡಿಯಾಟೆಕ್‌ ಡೈಮೆನ್ಸಿಟಿ 700 ಪ್ರೊಸೆಸರ್‌ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ಗಳು ಯಾವೆಲ್ಲಾ ಫೀಚರ್ಸ್‌ ಹೊಂದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಿದ ಹಾನರ್‌! ಅಬ್ಬಬ್ಬಾ ಏನಿದು ಫೀಚರ್ಸ್‌!

ಹಾನರ್‌ ಪ್ಲೇ 7T ವಿಶೇಷತೆ ಏನು?

ಹಾನರ್‌ ಪ್ಲೇ 7T ಸ್ಮಾರ್ಟ್‌ಫೋನ್‌ 6.74 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 6020 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಹಾನರ್‌ ಪ್ಲೇ 7T ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಿದ ಹಾನರ್‌! ಅಬ್ಬಬ್ಬಾ ಏನಿದು ಫೀಚರ್ಸ್‌!

ಹಾನರ್‌ ಪ್ಲೇ 7T ಪ್ರೊ ವಿಶೇಷತೆ ಏನು?

ಹಾನರ್‌ ಪ್ಲೇ 7T ಪ್ರೊ ಸ್ಮಾರ್ಟ್‌ಫೋನ್‌ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಮೀಡಿಯಾಟೆಕ್‌ ಡೈಮೆನ್ಸಿಟಿ 700 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಜೊತೆಗೆ 4,000mAh ಬ್ಯಾಟರಿಯನ್ನು ಒಳಗೊಂಡಿದ್ದು, 40W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಮಾರುಕಟ್ಟೆಯಲ್ಲಿ ಮತ್ತೆ ಧೂಳೆಬ್ಬಿಸಿದ ಹಾನರ್‌! ಅಬ್ಬಬ್ಬಾ ಏನಿದು ಫೀಚರ್ಸ್‌!

ಬೆಲೆ ಮತ್ತು ಲಭ್ಯತೆ

ಹಾನರ್‌ ಪ್ಲೇ 7T ಸ್ಮಾರ್ಟ್‌ಫೋನ್‌ 8GB RAM + 256 GB ಸ್ಟೋರೇಜ್‌ ಆಯ್ಕೆಯು 1,299 ಯುವಾನ್ (ಅಂದಾಜು 15,501ರೂ)ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮ್ಯಾಜಿಕ್ ನೈಟ್ ಬ್ಲ್ಯಾಕ್, ಸ್ಟಾರ್ಟ್ ಡ್ರಾಮ್ ಸ್ಲಿವರ್ ಮತ್ತು ಚಾರ್ಮ್ ಬ್ಲೂ ಸೀಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಹಾನರ್‌ ಪ್ಲೇ 7T ಪ್ರೊ ಸ್ಮಾರ್ಟ್‌ಫೋನ್‌ 8GB RAM + 256GB ಸ್ಟೋರೇಜ್‌ ಆಯ್ಕೆಗೆ 1,699 ಯುವಾನ್ (ಅಂದಾಜು 20,282ರೂ)ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮ್ಯಾಜಿಕ್ ನೈಟ್ ಬ್ಲ್ಯಾಕ್, ಕ್ಸಿಂಗ್‌ಮೆಂಗ್ ಸಿಲ್ವರ್ ಮತ್ತು ಮೊಯುಕಿಂಗ್ ಗ್ರೀನ್ ಕಲರ್‌ ಆಯ್ಕೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ಗಳ ಸೇಲ್‌ ಡೇಟ್‌ ಇನ್ನು ಅಧಿಕೃತವಾಗಿಲ್ಲ.

Best Mobiles in India

English summary
Honor Play 7T houses a 5-megapixel selfie camera, and its back panel has a dual-camera setup featuring a 64-megapixel primary camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+