Honor: ಹಾನರ್‌ನಿಂದ ಹೊಸ ಟ್ಯಾಬ್ ಅನಾವರಣ! ಬಿಗ್ ಸೈಜ್ ಡಿಸ್‌ಪ್ಲೇ.. 512GB ಸ್ಟೋರೇಜ್!
ಹಾನರ್ ಕಂಪೆನಿಯ ಮೊಬೈಲ್‌ಗಳಿಗೆ ಮಾತ್ರವಲ್ಲ ಟ್ಯಾಬ್‌ಗಳಿಗೂ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಇದೀಗ ಹಾನರ್ ಕಂಪೆನಿ ಹೊಸದಾಗಿ ಹಾನರ್ ಟ್ಯಾಬ್ಲೆಟ್ 9 ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಟ್ಯಾಬ್ಲೆಟ್ 12.1 ಇಂಚಿನ ಬಿಗ್ ಡಿಸ್‌ಪ್ಲೇ ಹೊಂದಿರುವುದು ವಿಶೇಷ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 6 Gen 1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ಹಾನರ್ ಟ್ಯಾಬ್ಲೆಟ್ 9 (honor tablet 9)ಅನ್ನು ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಸ್ಮಾರ್ಟ್ ಟ್ಯಾಬ್ಲೆಟ್ ಎಂಟು ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು 12GB RAM ಮತ್ತು 512GB ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಬರಲಿದ್ದು, 35W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಹಾಗಾದ್ರೆ ಈ ಹಾನರ್ ಟ್ಯಾಬ್ಲೆಟ್ 9 ಏನೆಲ್ಲಾ ಫೀಚರ್ಸ್ ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ ಟ್ಯಾಬ್ಲೆಟ್ 9 ಡಿಸ್‌ಪ್ಲೇ ರಚನೆ
ಹಾನರ್ ಟ್ಯಾಬ್ಲೆಟ್ 9 12.1 ಇಂಚಿನ 2.5K ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,600x2,560 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ. ಇದು 249ppi ಪಿಕ್ಸೆಲ್ ಸಾಂದ್ರತೆ, 88% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರಲಿದೆ. ಇದಲ್ಲದೆ 10 ಮತ್ತು 10 ರಚನೆಯ ಅನುಪಾತವನ್ನು ಹೊಂದಿದ್ದು, 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ನೀಡಲಿದೆ.
ಹಾನರ್ ಟ್ಯಾಬ್ಲೆಟ್ 9 ಪ್ರೊಸೆಸರ್ ಯಾವುದು?
ಈ ಟ್ಯಾಬ್ಲೆಟ್ 4nm ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 13 ಆಧಾರಿತ MagicOS 7.2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 12GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಮೆಮೊರಿ ಕಾರ್ಡ್ ಬೆಂಬಲಿಸುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಹಾನರ್ ಟ್ಯಾಬ್ಲೆಟ್ 9 ಕ್ಯಾಮೆರಾ ಸೆಟ್‌ಅಪ್ ಏನಿದೆ?
ಹಾನರ್ ಟ್ಯಾಬ್ಲೆಟ್ 9 ಸಿಂಗಲ್ ರಿಯರ್ ಕ್ಯಾಮೆರಾ ಹೊಂದಿದೆ. ಇದು 13 ಮೆಗಾಪಿಕ್ಸೆಲ್ ಸೆನ್ಸಾರ್ f/2.0 ಅಪರ್ಚರ್ ಮತ್ತು ಆಟೋಫೋಕಸ್ ಸಾಮರ್ಥ್ಯದಲ್ಲಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಪಡೆದಿದ್ದು, ಅತ್ಯುತ್ತಮ ವೀಡಿಯೊ ಕರೆ ಬೆಂಬಲ ನೀಡುವ ಭರವಸೆ ನೀಡಿದೆ.

ಹಾನರ್ ಟ್ಯಾಬ್ಲೆಟ್ 9 ಬ್ಯಾಟರಿ ಸಾಮರ್ಥ್ಯ
ಹಾನರ್ ಟ್ಯಾಬ್ಲೆಟ್ 9 8,300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 35W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 8 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಟೈಂ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ, ಬ್ಲೂಟೂತ್ 5.1, ಮತ್ತು ಒಟಿಜಿ ಬೆಂಬಲದೊಂದಿಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಬೆಂಬಲಿಸಲಿದೆ. ಇದಲ್ಲದೆ ಆಕ್ಸಿಲೆರೋಮೀಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ.
ಹಾನರ್ ಟ್ಯಾಬ್ಲೆಟ್ 9 ಬೆಲೆ ಮತ್ತು ಲಭ್ಯತೆ
Honor ಟ್ಯಾಬ್ಲೆಟ್ 9 8GB RAM + 128GB ಚೀನಾದಲ್ಲಿ ಸ್ಟೋರೇಜ್ ಮಾದರಿಯ ಆಯ್ಕೆಗೆ CNY 1,599 (ಸುಮಾರು 18,500ರೂ) ಬೆಲೆ ಹೊಂದಿದೆ. ಇದರ 8GB + 256GB ಮಾದರಿಯ ಬೆಲೆ CNY 1,699 (ಸುಮಾರು 20,500ರೂ)ಆಗಿದೆ. ಇನ್ನು 12GB + 256GB ಮಾದರಿಯ ಬೆಲೆ CNY 1,999 (ಸುಮಾರು 23,500ರೂ)ಆಗಿದೆ. ಇದನ್ನು ಮುಗುವಾಂಗ್ ವೈಟ್, ಸ್ಕೈ ಬ್ಲೂ, ಸ್ಟಾರಿ ಸ್ಕೈ ಗ್ರೇ ಕಲರ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಇದು ಭಾರತದಲ್ಲಿಯು ಬಿಡುಗಡೆ ಆಗಲಿದೆಯಾ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ.


Click it and Unblock the Notifications








