ಹಾನರ್‌ನಿಂದ ಹೊಸ ಪೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆ! ಅತ್ಯಾಕರ್ಷಕ ಡಿಸ್‌ಪ್ಲೇ ವಿನ್ಯಾಸ!
ಹಾನರ್ ಕಂಪೆನಿ ಕೆಲ ದಿನಗಳಿಂದ ಟೆಕ್ ವಲಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ತನ್ನ ಮಾರುಕಟ್ಟೆಯ ವಿಸ್ತಾರ ಹಾಗೂ ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳ ಪ್ರದರ್ಶನದಿಂದ ಗಮನಸೆಳೆದಿದೆ. ಇದೀಗ ಹೊಸ ಹಾನರ್ ವಿ ಪರ್ಸ್ ಪೋಲ್ಟಬಲ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ಈ ಮೂಲಕ ಫೋಲ್ಡಬಲ್ ಮೊಬೈಲ್ ಪ್ರಿಯರಿಗೆ ಹೊಸ ಆಯ್ಕೆ ನೀಡಿದೆ.
ಹೌದು, ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್ ಔಟರ್ ಫೋಲ್ಡಿಂಗ್ ಡಿಸ್‌ಪ್ಲೇ ಮೂಲಕ ಎಲ್ಲರ ಗಮನಸೆಳೆಯುತ್ತಿದೆ. ಇನ್ನು ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 35W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ಹಾನರ್ ಕಂಪೆನಿ ಹೇಳಿಕೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್ V ಪರ್ಸ್ ಪೋಲ್ಡಬಲ್ ಡಿಸ್‌ಪ್ಲೇ ರಚನೆ ಹೇಗಿದೆ?
ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ 6.45 ಇಂಚಿನ OLED ಕವರ್ ಡಿಸ್‌ಪ್ಲೇಯನ್ನು ಹೊಂದಿದೆ. ಕವರ್ ಡಿಸ್‌ಪ್ಲೇ 2348 × 1088 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇನ್ನು ಇದರ ಫೋಲ್ಡಿಂಗ್ ಡಿಸ್‌ಪ್ಲೇ 7.71 ಇಂಚಿನ OLED ಡಿಸ್‌ಪ್ಲೇ ಆಗಿದ್ದು, 2348 × 2016 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು 1600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡಲಿದೆ.
ಹಾನರ್ V ಪರ್ಸ್ ಪೋಲ್ಡಬಲ್ ಪ್ರೊಸೆಸರ್ ಯಾವುದು?
ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಹಾಗೂ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಪಡೆದಿದೆ.
ಹಾನರ್ V ಪರ್ಸ್ ಪೋಲ್ಡಬಲ್ ಕ್ಯಾಮೆರಾ ಸೆಟ್‌ಅಪ್ ಏನಿದೆ?
ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಇದೆ. ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಪಡೆದುಕೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.
ಹಾನರ್ V ಪರ್ಸ್ ಪೋಲ್ಡಬಲ್ ಬ್ಯಾಟರಿ ಎಷ್ಟಿದೆ?
ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 35W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ USB 2.0 ಟೈಪ್-ಸಿ ಚಾರ್ಜಿಂಗ್ ಪೋರ್ಟ್, 5G, ವೈಫೈ 6 802.11ax, ಬ್ಲೂಟೂತ್ 5.2 ಅನ್ನು ಒಳಗೊಂಡಿದೆ.
ಹಾನರ್ V ಪರ್ಸ್ ಪೋಲ್ಡಬಲ್ ಬೆಲೆ ಮತ್ತು ಲಭ್ಯತೆ
ಹಾನರ್ V ಪರ್ಸ್ ಪೋಲ್ಡಬಲ್ ಸ್ಮಾರ್ಟ್‌ಫೋನ್ ಪ್ರಸ್ತುತ ಚೀನಾದಲ್ಲಿ ಮಾತ್ರ ಲಾಂಚ್ ಆಗಿದೆ. ಆದರಿಂದ ಚೀನಾದಲ್ಲಿ ಹಾನರ್ V ಪರ್ಸ್ 16GB + 256GB ಸ್ಟೋರೇಜ್ ಆಯ್ಕೆಯು RMB 5999 (ಅಂದಾಜು 69,800ರೂ)ಬೆಲೆಯನ್ನು ಹೊಂದಿದೆ. ಇದರ 16GB + 512GB ಸ್ಟೋರೇಜ್ ಆಯ್ಕೆಯು RMB 6599 (ಅಂದಾಜು 75,400ರೂ)ಬೆಲೆಯಲ್ಲಿ ದೊರೆಯಲಿದೆ. ಇದು ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.


Click it and Unblock the Notifications








