ಹಾನರ್ ವಿ10 ನಲ್ಲಿರಲಿದೆ 970 SoC, 6GB RAM; ಡಿಸೆಂಬರ್ 5 ಕ್ಕೆ ಲಾಂಚ್!
ಕಳೆದ ತಿಂಗಳು ಹಾನರ್ ಡಿಸೆಂಬರ್ 5 ಕ್ಕೆ ನಡೆಯಲಿರುವ ಲಾಂಚ್ ಕಾರ್ಯಕ್ರಮಕ್ಕೆ ಪತ್ರಿಕಾ ಆಹ್ವಾನವನ್ನು ಕಳುಹಿಸಿತ್ತು. ಆ ಸಂದರ್ಭದಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ ಯಾವುದೆಂದು ಖಚಿತ ಮಾಹಿತ ಇಲ್ಲವಾದರೂ, ಲಾಂಚ್ ಆಗಲಿರುವ ಮೊಬೈಲ್ ಹಾನರ್ ವಿ10 ಎಂಬ ಅಂದಾಜು ಇದೆ.

ಹಾನರ್ ವಿ10 ನ ಮಾಹಿತಿ ಈಗಾಗಲೇ ಅನೇಕ ವೆಬ್ಸೈಟ್ಗಳಲ್ಲಿ ಸೋರಿಕೆಯಾಗಿದೆ. 2 ವಾರಗಳ ಹಿಂದಷ್ಟೇ ಹಾನರ್ ವಿ10 ಎಂದು ಹೇಳಲಾಗುವ ಮೊಬೈಲ್ ಒಂದರ ಚಿತ್ರವೂ ಇಂಟರ್ನೆಟ್ ನಲ್ಲಿ ಕಂಡುಬಂದಿತ್ತು.ಹಾನರ್ ವಿ10 ಕುರಿತು ಬಹುತೇಕ ಖಚಿತವಾಗಿ ತಿಳಿದಿರುವ ಮಾಹಿತಿ ಎಂದರೆ ಈ ಸ್ಮಾರ್ಟ್ಫೋನಿನಲ್ಲಿರಲಿದೆ ಅತ್ಯಂತ ತೆಳುವಾದ ಅಂಚಿನ ಡಿಸ್ಪ್ಲೇ ಅಂದರೆ ಫುಲ್-ಸ್ಕ್ರೀನ್ ವಿನ್ಯಾಸ. ಆಹ್ವಾನ ಪತ್ರಿಕೆಯಲ್ಲೂ ಇದೆ ರೀತಿಯ ಸುಳಿವಿದೆ. ಈ ಮೊಬೈಲ್ ನ ಇತರ ಫೀಚರ್ಗಳ ಕುರಿತು tech.sina.com ನಲ್ಲಿ ಹೆಚ್ಚಿನ ಮಾಹಿತಿ ಕಂಡುಬಂದಿದೆ.
ಈ ವೆಬ್ಸೈಟ್ ನ ಅನುಸಾರ, ಹಾನರ್ ವಿ10 ಹೊಂದಿರಲಿದೆ 5.99 ಇಂಚ್ ಡಿಸ್ಪ್ಲೇ, 18:9 ಆಸ್ಪೆಕ್ಟ್ ಅನುಪಾತದೊಂದಿಗೆ.ಇದೇ ಆಸ್ಪೆಕ್ಟ್ ಅನುಪಾತ ಗ್ಯಾಲಕ್ಸಿ S8/S8 ಪ್ಲಸ್, LG ವಿ30 ಮೊದಲಾದ ಫ್ಲ್ಯಾಗ್ಶಿಪ್ ಮೊಬೈಲ್ಗಳಲ್ಲಿ ಮತ್ತು ಇತ್ತೀಚೆಗಷ್ಟೆ ಬಿಡುಗಡೆಯಾದ ಹುವಾವೆ ಮೇಟ್ 10 ಡ್ಯುಯೋ ನಲ್ಲೂ ಕಂಡುಬಂದಿದೆ.
ಹಾನರ್ ವಿ10 ಹುವಾವೆ ಯ ಕಿರಿನ್ 970 ಪ್ರಾಸೆಸರ್ ಅನ್ನು ಬಳಸಲಿದ್ದು, ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನೂ ಹೊಂದಿರಲಿದೆ. ಇನ್ನು ಇದರ ಮೆಮೋರಿ ಕುರಿತು ಹೇಳುವುದಾದರೆ, ಹಾನರ್ ವಿ10 ನಲ್ಲಿರಲಿದೆ 6GB RAM ಮತ್ತು 64GB/128GB ಆಂತರಿಕ ಸ್ಟೋರೇಜ್ ಸಾಮರ್ಥ್ಯ. ಹಾಗಾಗಿ ಹಾನರ್ ವಿ10 ಅದರ ಸ್ಟೋರೇಜ್ ಸಾಮರ್ಥ್ಯಕ್ಕನುಸಾರವಾಗಿ ಎರಡು ಆವೃತ್ತಿಗಳಲ್ಲಿ ಬರಲಿದೆ.
ಹಾನರ್ ವಿ10 ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 16MP ಪ್ರೈಮರಿ ಸೆನ್ಸರ್ ಮತ್ತು 2MP ಸೆಕೆಂಡರಿ ಸೆನ್ಸರ್ ಹೊಂದಿರಲಿದೆ.ಇನ್ನು ಇದರ ತಂತ್ರಾಂಶದ ಕುರಿತು ಹೇಳುವುದಾದರೆ ಇದರಲ್ಲಿರಲಿದೆ ಆಂಡ್ರಾಯ್ಡ್ 8.0 ಓರಿಯೋ ಹುವಾವೆ EMUI 6.0 OS.
ಹುವಾವೆ ಈ ಮೊದಲು ನಡೆಸಿರುವ ಲಾಂಚ್ ಗಳನ್ನು ಗಮನಿಸಿದರೆ ಹಾನರ್ ವಿ10 ಮೊದಲಿಗೆ ಚೀನಾದಲ್ಲಿ ಬಿಡುಗಡೆಯಾಗಲಿದ್ದು ನಂತರ ಜಗತ್ತಿನ ಇತರ ಮಾರುಕಟ್ಟೆಗಳಿಗೆ ಬರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ ಚೀನಾ ಹೊರತು ಪಡಿಸಿ ಬೇರೆ ಕಡೆಗಳಲ್ಲಿ ಇದು ಬೇರೆ ಹೆಸರಿನೊಂದಿಗೆ ಬರಲೂಬಹುದು.
ಅಂದಹಾಗೆ, ಹಾನರ್ ಭಾರತದಲ್ಲಿಯೂ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಮಾಡಲಿದ್ದು, ಹಾನರ್ 7X ಡಿಸೆಂಬರ್ನಲ್ಲಿ ಭಾರತಕ್ಕೆ ಬರಲಿದೆ ಎಂದು ಸಂಸ್ಥೆಯು ಖಚಿತಪಡಿಸಿದೆ


Click it and Unblock the Notifications