ಭಾರತದಲ್ಲಿ 'ಹಾನರ್ ವ್ಯೂ 20' ಲಾಂಚ್!..ಇನ್ಮುಂದೆ ಒನ್‌ಪ್ಲಸ್ ಕಥೆ ಕ್ಲೋಸ್!!

|

ವಿಶ್ವದಾದ್ಯಂತ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಿಸಿರುವ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಭಾರತಕ್ಕೆ ಕಾಲಿಟ್ಟಿದೆ. ಒನ್‌ಪ್ಲಸ್ ಕಂಪೆನಿಗೆ ಬ್ರೇಕ್ ಹಾಕುವ ಸಲುವಾಗಿ ಹಾನರ್ ಕಂಪೆನಿ ಬಿಡುಗಡೆ ಮಾಡಿರುವ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ 'ಹಾನರ್ ವ್ಯೂ 20' ಬೆಲೆ ಭಾರತದಲ್ಲಿ ಕೇವಲ 37,999 ರೂ.ಗಳಿಂದ ಆರಂಭವಾಗಿದ್ದು, ಈಗ ದೇಶದ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಪ್ರಿಯರ ನಿದ್ದೆಗೆಡಿಸಿದೆ.

ಹೌದು, 48 ಮೆಗಾಪಿಕ್ಸೆಲ್ ಕ್ಯಾಮೆರಾ, 19.25:9 ಆಕಾರ ಅನುಪಾತದ ಡಿಸ್‌ಪ್ಲೇ ಮತ್ತು 7MM ಹಿಸಿಲಿಕಾನ್ ಕಿರಿನ್ ಆಕ್ಟಾ ಕೋರ್ ಪ್ರೊಸೆಸರ್‌ಗಳಂತಹ ಭಾರೀ ಫೀಚರ್ಸ್ ಮೂಲಕ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ 'ಹಾನರ್ ವ್ಯೂ 20' ಬೆಲೆ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕಿಚ್ಚುಹಚ್ಚಿದೆ. ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳಿಗೆ ಭಯ ಮೂಡಿಸುವಂತಹ ಬೆಲೆಯಲ್ಲಿ ಬಿಡುಗಡೆಯಾದ 'ಹಾನರ್ ವ್ಯೂ 20' ಈಗ ಮನೆ ಮಾತಾಗುತ್ತಿದೆ.

ಭಾರತದಲ್ಲಿ 'ಹಾನರ್ ವ್ಯೂ 20' ಲಾಂಚ್!..ಇನ್ಮುಂದೆ ಒನ್‌ಪ್ಲಸ್ ಕಥೆ ಕ್ಲೋಸ್!!

48 ಮೆಗಾಪಿಕ್ಸಲ್ ಕ್ಯಾಮರಾ ಹಾಗೂ 25 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾದ ಲಿಟಲ್ ಡಿಜಿಟಲ್ ಕ್ಯಾಮೆರಾವೇ ಆಗಿರುವ 'ಹಾನರ್ ವ್ಯೂ 20' ವಿಶ್ವದ ಮೊದಲ ಇನ್ನೊವೇಷನ್ ಎಂಬ ಕೀರ್ತಿಗೂ ಪಾತ್ರವಾಗಿದೆ. ಹಾಗಾದರೆ, ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ನೂತನ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಹೇಗಿದೆ? 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಖರೀದಿಸಲು ಇರುವ ವಿಶೇಷ ಕಾರಣಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

20 ಎಫ್ / 2.0 ಅಪರ್ಚರ್ ಮತ್ತು ಸ್ಥಿರ ಫೋಕಸ್ ಲೆನ್ಸ್‌ನೊಂದಿಗೆ 25 ಮೆಗಾಪಿಕ್ಸೆಲ್ ಫ್ರಂಟ್-ಫೇಸ್ ಕ್ಯಾಮೆರಾ ಹಾಗೂ f / 1.8 ದ್ಯುತಿರಂಧ್ರದೊಂದಿಗೆ 48 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾವು ಸೋನಿ IMX586 ಸಂವೇದಕಗಳನ್ನು ನೀಡಲಾಗಿದೆ. ಡೆಪ್ತ್ ಚಿತ್ರಗಳನ್ನು ಸೆರೆಹಿಡಿಯಲು ದ್ವಿತೀಯ 3D ಫ್ಲೈಟ್ (ToF) ಸಂವೇದಕವು ಹಲವಾರು 3D ಮತ್ತು ಸುಂದರಗೊಳಿಸುವ ಅಪ್ಲಿಕೇಶನ್‌ಗಳೊಂದಿಗೆ ವಿನ್ಯಾಸವಾಗಿದೆ. 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್, AI HDR, ಮ್ಯಾಜಿಕ್ UI ಅನ್ನು ಕ್ಯಾಮೆರಾ ತಂತ್ರಜ್ಞಾನದಲ್ಲಿ ನೋಡಬಹುದು.

ಡಿಎಸ್ಎಲ್ಆರ್ ಮಾದರಿ ಕ್ವಾಲಿಟಿ

ಡಿಎಸ್ಎಲ್ಆರ್ ಮಾದರಿ ಕ್ವಾಲಿಟಿ

ಹಾನರ್ ವ್ಯೂ 20 ಸ್ಮಾರ್ಟ್‌ಫೋನ್‌ ಕ್ಯಾಮೆರಾ ಕ್ವಾಲಿಟಿ ಡಿಎಸ್ಎಲ್ಆರ್ ಮಾದರಿಯಲ್ಲಿ ಮೂಡಿಬಂದಿವೆ. 60 ಕೆಟಗರಿಯಲ್ಲಿ ಮರ, ಹೂ, ವ್ಯಕ್ತಿ ಹೀಗೆ 1500 ಸಿನರಿಸ್‌ಗಳನ್ನು ತನ್ನ ರಿಯಲ್ ಟೈಮ್‌ನಲ್ಲಿ ಗುರುತಿಸಿಕೊಳ್ಳುವ ಸಾಮರ್ಥ್ಯವನ್ನು ಹಾನರ್ ವ್ಯೂ 20 ಕ್ಯಾಮೆರಾ ಹೊಂದಿದೆ. ಫೋಟೋಗ್ರಫಿ ಆಸಕ್ತಿ ಇದ್ದವರಿಗೆ ಖಂಡಿತಾ ಇದೊಂದು ಅತ್ಯುತ್ತಮ ಕ್ಯಾಮೆರಾ ಎನಿಸಿಕೊಳ್ಳಲಿದೆ. ಎಚ್‌ಆರ್‌ಡಿ ಮೋಡ್‌ನಲ್ಲಿ ಚಿತ್ರಗಳು ಸಹ ಅತ್ಯುತ್ತಮವಾಗಿ ಮೂಡಿಬಂದಿವೆ. ಹಗಲಿನಲ್ಲಿ ಫೋಟೋದ ಕ್ವಾಲಿಟಿ ಮತ್ತು ಕ್ಲಿಯರಿಟಿ ಎರಡು ಅದ್ಭುತವಾಗಿವೆ.

ಮಂದಬೆಳಕಿನಲ್ಲಿಯೂ ಸೂಪರ್ ಕ್ಲಿಕ್

ಮಂದಬೆಳಕಿನಲ್ಲಿಯೂ ಸೂಪರ್ ಕ್ಲಿಕ್

ಬಹುತೇಕ ಸ್ಮಾರ್ಟ್‌ಫೋನ್‌ ಕ್ಯಾಮೆರಾಗಳು ಮಂದಬೆಳಕಿನಲ್ಲಿ ಫೋಟೋ ಕ್ವಾಲಿಟಿ ಉತ್ತಮವಾಗಿ ಮೂಡಿಬರುವುದಿಲ್ಲ. ಆದರೆ ಹಾನರ್ ವ್ಯೂ 20 ಸ್ಮಾರ್ಟ್‌ಫೋನಿನಲ್ಲಿ ಸೋನಿಯ IMX586 48MP ಸೆನ್ಸಾರ್ ಅಳವಡಿಸಿದ್ದು, ಹೀಗಾಗಿ ಮಂದಬೆಳಕಿನಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಬಹುದು. ಇದರೊಂದಿಗೆ ನೈಟ್‌ ಮೋಡ್‌ ಆಯ್ಕೆ ಸಹ ನೀಡಲಾಗಿದೆ. ಫಿಲ್ಟರ್ಗಳು, ಟೈಮ್ ಲ್ಯಾಪ್ಸ್, ಲೈಟ್ ಪೇಂಟಿಂಗ್, ಎಚ್ಡಿಆರ್, 3D ಪನೋರಮಾ, ಆರ್ಟಿಸ್ಟ್ ಮೋಡ್ ಮತ್ತು ಇನ್ನೂ ಹೆಚ್ಚಿನವು ಕ್ಯಾಮೆರಾ ಪ್ರಿಯರನ್ನು ಸೆಳೆಯುತ್ತಿವೆ.

ರಿಯಲ್-ವರ್ಲ್ಡ್ ಅನ್ವಯಿಕೆಗಳಿಗೆ 3D TOF ಕ್ಯಾಮೆರಾ

ರಿಯಲ್-ವರ್ಲ್ಡ್ ಅನ್ವಯಿಕೆಗಳಿಗೆ 3D TOF ಕ್ಯಾಮೆರಾ

ಹಾನರ್ ವ್ಯೂ 20 ಸ್ಮಾರ್ಟ್‌ಪೋನಿನಲ್ಲಿ ಕ್ಯಾಮೆರಾ ಸೆಟಪ್ ಮುಂದುವರಿದ 3D ಸಂವೇದಕವಾಗಿದೆ. ಇದು ಮೂಲತಃ ಸ್ಮಾರ್ಟ್ಫೋನ್ ಮತ್ತು ವಿಷಯದ ನಡುವಿನ ಅಂತರವನ್ನು ಅಳೆಯಲು ಅತಿಗೆಂಪು ಬೆಳಕನ್ನು ಹೊರಸೂಸುವ ವ್ಯಾಪ್ತಿಯ ಚಿತ್ರಣ ಕ್ಯಾಮೆರಾ ವ್ಯವಸ್ಥೆಯಾಗಿದೆ. ಇದರಿಂದಾಗಿ ಹಾನರ್ ವ್ಯೂ 20 ಚಿತ್ರಗಳು, ವೀಡಿಯೊಗಳು ಮತ್ತು 3D ಶೇಪಿಂಗ್, 3D ಮೋಷನ್-ನಿಯಂತ್ರಿತ ಗೇಮಿಂಗ್, 3D ಮ್ಯಾಪಿಂಗ್ ನೈಜ ಜಗತ್ತಿನ ಚಿತ್ರಗಳನ್ನು ರಚಿಸುವ ರಿಯಲ್-ವರ್ಲ್ಡ್ ಕ್ಯಾಮೆರಾ ಆಗಿದೆ.

ಹಾನರ್ ವ್ಯೂ 20 ವಿನ್ಯಾಸ!

ಹಾನರ್ ವ್ಯೂ 20 ವಿನ್ಯಾಸ!

ಇದು ಹೈ ಎಂಡ್ ಸ್ಮಾರ್ಟ್‌ಫೋನ್ ಎಂದು ಮೊದಲೇ ಹೇಳಿರುವುದರಿಂದ ನೀವು ಈ ಫೋನಿನ ವಿನ್ಯಾಸವನ್ನು ಊಹಿಸಬಹುದು. ಹೌದು, ನಿಮ್ಮ ಊಹೆಯಂತೆಯೇ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ ವಿನ್ಯಾಸ ಅದ್ಭುತವಾಗಿದೆ. ಶೇ. 91.8 ರಷ್ಟು ಪರದೆಯಿಂದ ದೇಹದ ಅನುಪಾತ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಸಂಪೂರ್ಣ ಬೆಜೆಲ್ ಲೆಸ್ (ಕಡಿಮೆ ಅಂಚುಗಳು) ವಿನ್ಯಾಸದಲ್ಲಿದೆ ಎಂದು ಹೇಳಬಹುದು. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯನ್ನು ನೀಡಲಾಗಿದೆ.

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಟಿಎಫ್‌ಟಿ ಎಲ್ಸಿಡಿ ಫುಲ್ ಹೆಚ್‌ಡಿ ಪರದೆಯನ್ನು ನೀಡಲಾಗಿದೆ. 19.5:9ರ ಅನುಪಾತದಲ್ಲಿ 1080x2310 ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಫೋನಿನ ಸ್ಕ್ರೀನ್ 91.8 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದಿದೆ. ಇನ್ನು ಸ್ಕ್ರೀನ್ ಹೊರಭಾಗದಲ್ಲಿ ನಾಲ್ಕು ಮೂಲೆ ರೌಂಡೆಡ್ ಕರ್ವ ಇರುವುದು ಸ್ಮಾರ್ಟ್‌ಫೋನಿಗೆ ಸ್ಮಾರ್ಟ್‌ ಅಂದ ತಂದುಕೊಟ್ಟಿದೆ.

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಆಂಡ್ರಾಯ್ಡ್ 9 ನೊಂದಿಗೆ, ಆಕ್ಟಾಕೋರ್ ಹಿಸಿಲಿಕೊನ್ ಕಿರಿನ್ 980 ಉತ್ತಮ ಪ್ರೊಸೆಸರ್ ಹೊಂದಿರುವ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಶೇಖರಣಾ ಮತ್ತು 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ. 64GB/128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನಿನಲ್ಲಿ ಬಾಹ್ಯ ಮೆಮೊರಿ ಸಂಗ್ರಹಕ್ಕೆ ಅವಕಾಶ ನೀಡಿಲ್ಲ.

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಪವರಫುಲ್ ಬ್ಯಾಟರಿ ಹೊಂದಿರುವುದನ್ನು ನೋಡಬಹುದಾಗಿದ್ದು, ಬ್ಯಾಟರಿ ತಂತ್ರಜ್ಞಾನ 4.5V / 5A ಬೆಂಬಲದೊಂದಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಬ್ಲೂಟೂತ್ ವಿ 5.0, ವೈ-ಫೈ, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿಯಂತಹ ಹೈ ಎಂಡ್ ಫೀಚರ್ಸ್ ಜೊತೆಗೆ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

Best Mobiles in India

English summary
Honor View 20 brings an All-View edge-to-edge display, 48MP rear camera aided by a 3D TOF sensor, world's first in-screen selfie camera and the flagship Kirin 980 CPU.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X