Home
ಸುದ್ದಿಜಾಲ

ಮಾರುಕಟ್ಟೆಗೆ 'ಹಾನರ್ ವ್ಯೂ 20' ಎಂಟ್ರಿ!..ಒನ್‌ಪ್ಲಸ್‌ಗೆ ಶುರುವಾಯ್ತು ಭಯ!

ಒನ್‌ಪ್ಲಸ್ ಕಂಪೆನಿಗೆ ಬ್ರೇಕ್ ಹಾಕುವ ಸಲುವಾಗಿ ಹಾನರ್ ಕಂಪೆನಿಯ ಬಹುನಿರೀಕ್ಷಿತ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ವಿಶ್ವ ಮೊಬೈಲ್ ಮಾರುಕಟ್ಟೆಗೆ ಇದೀಗ ಕಾಲಿಟ್ಟಿದೆ. ವಿಶ್ವ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯಂತೆಯೇ ಪ್ಯಾರಿಸ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮ ಒಂದರಲ್ಲಿ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಜಾಗತಿಕವಾಗಿ ಬಿಡುಗಡೆಯಾಗಿದ್ದು, ಒನ್‌ಪ್ಲಸ್, ಸ್ಯಾಮ್‌ಸಂಗ್ ಮತ್ತು ಆಪಲ್ ಕಂಪೆನಿಗಳಿಗೆ ಭಯ ಮೂಡಿಸಿದೆ.

ಹೌದು, ಬಿಡುಗಡೆಗೂ ಮುನ್ನವೇ ಹೆಚ್ಚು ಸದ್ದು ಮಾಡುತ್ತಿದ್ದ ಹಾನರ್ ವ್ಯೂ 20' ಫೋನ್ ಅತ್ಯುತ್ತಮ ಬೆಲೆಯಲ್ಲಿ ಭಾರೀ ಫೀಚರ್ಸ್ ಹೊತ್ತು ಮಾರುಕಟ್ಟೆಗೆ ಎಂಟ್ರಿ ನೀಡಿದೆ. 48 ಮೆಗಾಪಿಕ್ಸೆಲ್ ಕ್ಯಾಮೆರಾ, 19.25:9 ಆಕಾರ ಅನುಪಾತದ ಡಿಸ್‌ಪ್ಲೇ ಮತ್ತು 7MM ಹಿಸಿಲಿಕಾನ್ ಕಿರಿನ್ ಆಕ್ಟಾ ಕೋರ್ ಪ್ರೊಸೆಸರ್‌ಗಳಂತಹ ಭಾರೀ ಫೀಚರ್ಸ್ ಹೊಂದಿರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆಗಳನ್ನು ಹುಟ್ಟಿಹಾಕಿದೆ.

ಮಾರುಕಟ್ಟೆಗೆ 'ಹಾನರ್ ವ್ಯೂ 20' ಎಂಟ್ರಿ!..ಒನ್‌ಪ್ಲಸ್‌ಗೆ ಶುರುವಾಯ್ತು ಭಯ!

ಹಾನರ್ ವ್ಯೂ 20 ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆಯೇ ಕ್ಯಾಮರಾ ಆಗಿದ್ದು, ಹಿಂಬಾಗದಲ್ಲಿ ಫ್ಲ್ಯಾಶ್‌ನೊಂದಿಗೆ 48 ಮೆಗಾಪಿಕ್ಸಲ್ ಕ್ಯಾಮರಾ ಹಾಗೂ 25 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾಗಳು ಮೊಬೈಲ್ ಪ್ರಿಯರನ್ನು ಸೆಳೆಯುತ್ತಿವೆ. ಹಾಗಾದರೆ, ನ್ನೆನ್ನೆಯಷ್ಟೇ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿರುವ ನೂತನ 'ಹಾನರ್ ವ್ಯೂ 20' ಸ್ಮಾರ್ಟ್‌ಫೋನ್ ಹೇಗಿದೆ? ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಾನರ್ ವ್ಯೂ 20 ವಿನ್ಯಾಸ!

ಹಾನರ್ ವ್ಯೂ 20 ವಿನ್ಯಾಸ!

ಇದು ಹೈ ಎಂಡ್ ಸ್ಮಾರ್ಟ್‌ಫೋನ್ ಎಂದು ಮೊದಲೇ ಹೇಳಿರುವುದರಿಂದ ನೀವು ಈ ಫೋನಿನ ವಿನ್ಯಾಸವನ್ನು ಊಹಿಸಬಹುದು. ಹೌದು, ನಿಮ್ಮ ಊಹೆಯಂತೆಯೇ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ ವಿನ್ಯಾಸ ಅದ್ಭುತವಾಗಿದೆ. ಶೇ. 91.8 ರಷ್ಟು ಪರದೆಯಿಂದ ದೇಹದ ಅನುಪಾತ ಹೊಂದಿರುವುದರಿಂದ ಈ ಸ್ಮಾರ್ಟ್‌ಫೋನ್ ಸಂಪೂರ್ಣ ಬೆಜೆಲ್ ಲೆಸ್ (ಕಡಿಮೆ ಅಂಚುಗಳು) ವಿನ್ಯಾಸದಲ್ಲಿದೆ ಎಂದು ಹೇಳಬಹುದು. ಇನ್ನು ಹಿಂಬಾಗದಲ್ಲಿ ಡ್ಯುಯಲ್ ಕ್ಯಾಂಎರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯನ್ನು ನೀಡಲಾಗಿದೆ.

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಡಿಸ್‌ಪ್ಲೇ ಸಾಮರ್ಥ್ಯ

ಹಾನರ್ ವ್ಯೂ 20 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಟಿಎಫ್‌ಟಿ ಎಲ್ಸಿಡಿ ಫುಲ್ ಹೆಚ್‌ಡಿ ಪರದೆಯನ್ನು ನೀಡಲಾಗಿದೆ. 19.5:9ರ ಅನುಪಾತದಲ್ಲಿ 1080x2310 ಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರುವ ಫೋನಿನ ಸ್ಕ್ರೀನ್ 91.8 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬಂದಿದೆ. ಇನ್ನು ಸ್ಕ್ರೀನ್ ಹೊರಭಾಗದಲ್ಲಿ ನಾಲ್ಕು ಮೂಲೆ ರೌಂಡೆಡ್ ಕರ್ವ ಇರುವುದು ಸ್ಮಾರ್ಟ್‌ಫೋನಿಗೆ ಸ್ಮಾರ್ಟ್‌ ಅಂದ ತಂದುಕೊಟ್ಟಿದೆ.

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಹಾನರ್ ವ್ಯೂ 20 ತಾಂತ್ರಿಕ ವಿಶೇಷತೆಗಳು

ಆಂಡ್ರಾಯ್ಡ್ 9 ನೊಂದಿಗೆ, ಆಕ್ಟಾಕೋರ್ ಹಿಸಿಲಿಕೊನ್ ಕಿರಿನ್ 980 ಉತ್ತಮ ಪ್ರೊಸೆಸರ್ ಹೊಂದಿರುವ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 6 ಜಿಬಿ RAM ಮತ್ತು 64 ಜಿಬಿ ಆಂತರಿಕ ಶೇಖರಣಾ ಮತ್ತು 6 ಜಿಬಿ RAM ಮತ್ತು 128 ಜಿಬಿ ಶೇಖರಣಾ ಸಾಮರ್ಥ್ಯದಲ್ಲಿ ಬಿಡುಗಡೆಯಾಗಿದೆ. 64GB/128 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನಿನಲ್ಲಿ ಬಾಹ್ಯ ಮೆಮೊರಿ ಸಂಗ್ರಹಕ್ಕೆ ಅವಕಾಶ ನೀಡಿಲ್ಲ.

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

ಹಾನರ್ ವ್ಯೂ 20 ಕ್ಯಾಮೆರಾ ಸಾಮರ್ಥ್ಯ

20 ಎಫ್ / 2.0 ಅಪರ್ಚರ್ ಮತ್ತು ಸ್ಥಿರ ಫೋಕಸ್ ಲೆನ್ಸ್‌ನೊಂದಿಗೆ 25 ಮೆಗಾಪಿಕ್ಸೆಲ್ ಫ್ರಂಟ್-ಫೇಸ್ ಕ್ಯಾಮೆರಾ ಹಾಗೂ f / 1.8 ದ್ಯುತಿರಂಧ್ರದೊಂದಿಗೆ 48 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮರಾವು ಸೋನಿ IMX586 ಸಂವೇದಕಗಳನ್ನು ನೀಡಲಾಗಿದೆ. ಡೆಪ್ತ್ ಚಿತ್ರಗ:ನ್ನು ಸೆರೆಹಿಡಿಯಲು ದ್ವಿತೀಯ 3D ಫ್ಲೈಟ್ (ToF) ಸಂವೇದಕವು ಹಲವಾರು 3D ಮತ್ತು ಸುಂದರಗೊಳಿಸುವ ಅಪ್ಲಿಕೇಶನ್‌ಗಳೊಂದಿಗೆ ವಿನ್ಯಾಸವಾಗಿದೆ. 960fps ನಿಧಾನ-ಚಲನೆಯ ವೀಡಿಯೊ ರೆಕಾರ್ಡಿಂಗ್, AI HDR, ಮ್ಯಾಜಿಕ್ UI ಅನ್ನು ಕ್ಯಾಮೆರಾ ತಂತ್ರಜ್ಞಾನದಲ್ಲಿ ನೋಡಬಹುದು.

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಇತರೆ ವಿಶೇಷತೆಗಳು

ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಪವರಫುಲ್ ಬ್ಯಾಟರಿ ಹೊಂದಿರುವುದನ್ನು ನೋಡಬಹುದಾಗಿದ್ದು, ಬ್ಯಾಟರಿ ತಂತ್ರಜ್ಞಾನ 4.5V / 5A ಬೆಂಬಲದೊಂದಿಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಬ್ಲೂಟೂತ್ ವಿ 5.0, ವೈ-ಫೈ, ಜಿಪಿಎಸ್ / ಎ-ಜಿಪಿಎಸ್, ಮತ್ತು ಯುಎಸ್ಬಿ ಟೈಪ್-ಸಿಯಂತಹ ಹೈ ಎಂಡ್ ಫೀಚರ್ಸ್ ಜೊತೆಗೆ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಹಾನರ್ ವ್ಯೂ 20 ಬೆಲೆಗಳು ಎಷ್ಟು?

ಹಾನರ್ ವ್ಯೂ 20 ಬೆಲೆಗಳು ಎಷ್ಟು?

ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, 6GB RAM ಮತ್ತು 128GB ಶೇಖರಣಾ ಆಯ್ಕೆಯ ಸ್ಮಾರ್ಟ್‌ಫೋನ್ EUR 569 (ರೂ 46,000 ಅಂದಾಜು)ಗಳಿಗೆ ಬಿಡುಗಡೆಯಾಗಿದೆ. ಹಾಗೆಯೇ, 8GB RAM ಮತ್ತು 256GB ಶೇಖರಣಾ ಆಯ್ಕೆಯ ಸ್ಮಾರ್ಟ್‌ಪೋನ್ ಬೆಲೆ EUR 649 (ರೂ 52,500 ಅಂದಾಜು)ಗಳಾಗಿವೆ. ಇನ್ನು ಜನವರಿ 29 ರಂದು ಭಾರತದಲ್ಲಿ ಹಾನರ್ ವ್ಯೂ 20 ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತಿರುವುದಾಗಿ ಕಂಪೆನಿ ಮಾಹಿತಿ ನೀಡಿದೆ.

Best Mobiles in India

English summary
Honor View 20 With 48-Megapixel Rear Camera and Hole-Punch Selfie Camera Launched: Everything You Should Know. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+