Home
ಸುದ್ದಿಜಾಲ

ಹಾನರ್‌ ಸಂಸ್ಥೆಯಿಂದ ಅಚ್ಚರಿಯ ಸ್ಮಾರ್ಟ್‌ವಾಚ್‌ ಅನಾವರಣ! ಸ್ಟೈಲಿಶ್‌ ಡಿಸೈನ್‌!

ಹಾನರ್‌ ಕಂಪೆನಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ವಾಚ್‌ಗಳನ್ನು ಕೂಡ ಪರಿಚಯಿಸುತ್ತಾ ಬಂದಿದೆ. ಸ್ಮಾರ್ಟ್‌ಫೋನ್‌ ಮಾದರಿಯಲ್ಲಿಯೇ ವಿಭಿನ್ನ ಶೈಲಿಯ ಸ್ಮಾರ್ಟ್‌ವಾಚ್‌ಗಳಿಗೆ ಹಾನರ್‌ ಕಂಪೆನಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಮ್ಯಾಜಿಕ್‌ VS2 ಫೋಲ್ಡಬಲ್ ಸ್ಮಾರ್ಟ್‌ಫೋನ್ ಜೊತೆಗೆ ಹಾನರ್‌ ವಾಚ್ 4 ಪ್ರೊ ಅನ್ನು ಬಿಡುಗಡೆ ಮಾಡಿದೆ.

ಹೌದು, ಹಾನರ್‌ ವಾಚ್ 4 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ವಾಚ್‌ ಕೂಡ MagicOS ನಿಂದ ರನ್‌ ಆಗಲಿದೆ. ಇದು ಒಂದು ಸುತ್ತಿನ ಡಯಲ್ ವಿನ್ಯಾಸವನ್ನು ಹೊಂದಿದ್ದು, ಸ್ಟೇನ್‌ಲೆಸ್ ಸ್ಟೀಲ್ ಬಾಡಿಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್ ವಾಚ್ ಮೆಕ್ಯಾನಿಕಲ್ ಕ್ರೌನ್ ಮತ್ತು ಪುಶ್ ಬಟನ್ ಜೊತೆಗೆ ಮ್ಯಾಟ್ ಫಿನಿಶ್ ಅನ್ನು ಸಹ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್‌ ಸಂಸ್ಥೆಯಿಂದ ಅಚ್ಚರಿಯ ಸ್ಮಾರ್ಟ್‌ವಾಚ್‌ ಅನಾವರಣ! ಸ್ಟೈಲಿಶ್‌ ಡಿಸೈನ್‌!

ಹಾನರ್ ವಾಚ್ 4 ಪ್ರೊ ಫೀಚರ್ಸ್‌ ಹೇಗಿದೆ?
ಹಾನರ್‌ ವಾಚ್ 4 ಪ್ರೊ ಸ್ಮಾರ್ಟ್‌ವಾಚ್‌ 1.5 ಇಂಚಿನ LTLTPO AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಹಾನರ್ ಹೆಲ್ತ್ ಅಪ್ಲಿಕೇಶನ್ ಮೂಲಕ ಲಭ್ಯವಿರುವ 6000+ ಕ್ಕೂ ಹೆಚ್ಚು ಥೀಮ್ ವಾಚ್ ಫೇಸ್‌ಗಳನ್ನು ಬೆಂಬಲಿಸುತ್ತದೆ. ಇನ್ನು ಸ್ಮಾರ್ಟ್‌ವಾಚ್‌ ಇ-ಸಿಮ್ ಬೆಂಬಲವನ್ನು ಹೊಂದಿದ್ದು, ಸ್ಮಾರ್ಟ್‌ಫೋನ್ ಇಲ್ಲದೆಯೂ ಕರೆಗಳನ್ನು ಮಾಡುವುದಕ್ಕೆ ಬಳಕೆದಾರರಿಗೆ ಅವಕಾಶವನ್ನು ನೀಡಲಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ವೇರಿಯೆಬಲ್‌ ರೂಟಿಂಗ್‌ಗಾಗಿ GPS ಅನ್ನು ಸಹ ಅಳವಡಿಸಲಾಗಿದೆ.

ಹಾನರ್ ವಾಚ್ 4 ಪ್ರೊ ಸ್ಮಾರ್ಟ್‌ವಾಚ್‌ನಲ್ಲಿ ಕಂಪೆನಿಯು ವರ್ಧಿತ ಎಂಟು-ಚಾನೆಲ್ ಹೈ-ಸೆನ್ಸಿಟಿವಿಟಿ ಸೆನ್ಸಾರ್‌ ಅನ್ನು ಬಳಸಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ವಾಚ್‌ನಲ್ಲಿರುವ ಹೆಚ್ಚಿನ ಪಾರದರ್ಶಕತೆ ಮಾಡ್ಯೂಲ್ ಪ್ರವೇಶಿಸುವ ಬೆಳಕಿನ ಪ್ರಮಾಣವನ್ನು 50% ಹೆಚ್ಚಿಸುತ್ತದೆ. ಇನ್ನು ಸ್ಮಾರ್ಟ್ ವಾಚ್ ಸ್ಮಾರ್ಟ್ ಮೋಡ್‌ನಲ್ಲಿ 10 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಹೇಳಲಾಗಿದೆ. ಇದರಿಂದ ಸ್ಮಾರ್ಟ್‌ವಾಚ್‌ ದಿನಕ್ಕೆ 2 ಗಂಟೆಗಳ ಕಾಲ ಮತ್ತು eSIM ಮೋಡ್‌ನಲ್ಲಿ 3 ದಿನಗಳವರೆಗೆ LTE ನೆಟ್‌ವರ್ಕ್ ಬಳಕೆಯನ್ನು ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಇನ್ನು ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ 9 ಅಥವಾ ಅದಕ್ಕಿಂತ ಹೆಚ್ಚಿನ ಮತ್ತು iOS 11 ಡಿವೈಸ್‌ಗಳಿಗೆ ಹೊಂದಿಕೆಯಾಗಲಿದೆ. ಈ ಸ್ಮಾರ್ಟ್‌ವಾಚ್‌ ಹೆಲ್ತ್‌ ಫೀಚರ್ಸ್‌ಗಳಲ್ಲಿ 24×7 ಹೃದಯ ಬಡಿತ ಮಾನಿಟರಿಂಗ್, SpO2, ನಿದ್ರೆ, ಒತ್ತಡ ಟ್ರ್ಯಾಕಿಂಗ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ 5 ಎಟಿಎಂ ನೀರಿನ ಪ್ರತಿರೋಧವನ್ನು ಸಹ ಹೊಂದಿದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ನೀಡಲಿದೆ.

ಹಾನರ್‌ ವಾಚ್‌ 4 ಪ್ರೊ ಬೆಲೆ ಮತ್ತು ಲಭ್ಯತೆ
ಹಾನರ್ ವಾಚ್ 4 ಪ್ರೊ ಸ್ಮಾರ್ಟ್‌ವಾಚ್‌ ಪ್ರಸ್ತುತ ಚೀನಾದಲ್ಲಿ ಮಾತ್ರ ಬಿಡುಗಡೆ ಆಘಿದೆ. ಆದರಿಂದ ಈ ಸ್ಮಾರ್ಟ್‌ವಾಚ್‌ ಸಿಲಿಕೋನ್ ಪಟ್ಟಿಗೆ 1599 ಯುವಾನ್ (ಸುಮಾರು ಅಂದಾಜು 18,000ರೂ) ಬೆಲೆ ಹೊಂದಿದೆ. ಇದರ ಚರ್ಮದ ಪಟ್ಟಿಗೆ 1799 ಯುವಾನ್ (ಸುಮಾರು 20,500ರೂ) ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಕಡು ಹಸಿರು (ಚರ್ಮ), ಕಂದು (ಚರ್ಮ), ಮತ್ತು ಕಪ್ಪು (ಸಿಲಿಕೋನ್). ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದು ಪ್ರಸ್ತುತ ಚೀನಾದಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿದ್ದು, ಅಕ್ಟೋಬರ್ 15 ರಿಂದ ಅಧಿಕೃತವಾಗಿ ಮಾರಾಟವಾಗಲಿದೆ.

ಇನ್ನು ಹಾನರ್‌ ಕಂಪೆನಿ ಇತ್ತೀಚಿಗೆ ಹೊಸ ಹಾನರ್‌ ಮ್ಯಾಜಿಕ್‌ Vs 2 ಫೋಲ್ಡಬಲ್‌ ಫೋನ್‌ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್‌ 7.92-ಇಂಚಿನ OLED ಇನ್ನರ್ ಡಿಸ್‌ಪ್ಲೇ ಆಯ್ಕೆ, 66W ಸೂಪರ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ ಬಲ ಪಡೆದುಕೊಂಡಿದೆ.

Best Mobiles in India

English summary
Honor Watch 4 Pro with AMOLED screen Launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+