Home
ಸುದ್ದಿಜಾಲ

ಹಾನರ್‌ X50 GT ಲಾಂಚ್‌ ಡೇಟ್‌ ಬಹಿರಂಗ:..ಫೀಚರ್ಸ್‌ ಮಾತ್ರ ಬೆಂಕಿ

ಹಾನರ್‌ ಕಂಪೆನಿ ಹಾನರ್‌ X50 GT ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಇದೀಗ ಬಹಿರಂಗವಾಗಿದ್ದು, ಇದೇ ಜನವರಿ 4 ರಂದು ಲಾಂಚ್‌ ಆಗಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ.

ಹೌದು, ಹಾನರ್‌ X50 GT ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಇದು ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಜೊತೆಗೆ 5800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 35W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹಾನರ್‌ X50 GT ಲಾಂಚ್‌ ಡೇಟ್‌ ಬಹಿರಂಗ:..ಫೀಚರ್ಸ್‌ ಮಾತ್ರ ಬೆಂಕಿ

ಹಾನರ್‌ X50 GT ಫೀಚರ್ಸ್‌ ಹೇಗಿದೆ?
ಹಾನರ್‌ X50 GT ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1080 x 2388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಜೊತೆಗೆ 120 Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ ಎನ್ನಲಾಗಿದೆ.

ಹಾನರ್‌ X50 GT ಪ್ರೊಸೆಸರ್‌ ಯಾವುದು?
ಹಾನರ್‌ X50 GT ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು 3.2GHz ನಲ್ಲಿ ಒಂದು ಕಾರ್ಟೆಕ್ಸ್ X2 ಕೋರ್, 2.75GHz ನಲ್ಲಿ ಮೂರು ಕಾರ್ಟೆಕ್ಸ್ A710 ಕೋರ್‌ಗಳು, 2.0GHz ನಲ್ಲಿ ನಾಲ್ಕು ಕಾರ್ಟೆಕ್ಸ್ A510 ಕೋರ್‌ಗಳು ಮತ್ತು ಅಡ್ರಿನೊ 730 GPU ಅನ್ನು ಹೊಂದಿದೆ. ಇನ್ನು ಆಂಡ್ರಾಯ್ಡ್‌ 14 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಲಿದೆ ಎಂದು ವರಿದಯಾಗಿದೆ.

ಹಾನರ್‌ X50 GT ಲಾಂಚ್‌ ಡೇಟ್‌ ಬಹಿರಂಗ:..ಫೀಚರ್ಸ್‌ ಮಾತ್ರ ಬೆಂಕಿ

ಹಾನರ್‌ X50 GT ಕ್ಯಾಮೆರಾ ಸೆಟಪ್‌ ಏನಿದೆ?
ಹಾನರ್‌ X50 GT ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್ ಇರಲಿದೆ. ಇದರ ಎರಡನೇ ಕ್ಯಾಮೆರಾ ವಿವರಗಳು ಇನ್ನು ಬಹಿರಂಗವಾಗಿಲ್ಲ. ಇನ್ನು ಈ ಸ್ಮಾರ್ಟ್‌ಫೋನ್ ಮ್ಯಾಟ್ರಿಕ್ಸ್ ಎಐ ವಿಷನ್ ಕ್ಯಾಮೆರಾ ಬ್ರ್ಯಾಂಡಿಂಗ್‌ನೊಂದಿಗೆ ವೃತ್ತಾಕಾರದ ಕ್ಯಾಮೆರಾ ದ್ವೀಪವನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾದ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಹಾನರ್‌ X50 GT ಬ್ಯಾಟರಿ ಮತ್ತು ಇತರೆ
ಹಾನರ್‌ X50 GT ಸ್ಮಾರ್ಟ್‌ಫೋನ್‌ 5800mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು 35W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಹೈ ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ ಇನ್-ಡಿಸ್‌ಪ್ಲೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

ಹಾನರ್‌ X50 GT ಬೆಲೆ ಮತ್ತು ಲಭ್ಯತೆ

ಹಾನರ್‌ X50 GT ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಯು RMB 2,000 (ಅಂದಾಜು 23,600ರೂ) ಬೆಲೆಯಲ್ಲಿ ಬರಲಿದೆ.
ಇದಲ್ಲದೆ ಫೋನ್‌ 16GB + 256GB, 16GB + 512GB, ಮತ್ತು 16GB + 1TB ಕಾನ್ಫಿಗರೇಶನ್‌ಗಳಲ್ಲಿ ಬರಲಿದೆ ಎಂದು ವರದಿಯಾಗಿದೆ. ಈ ಸ್ಮಾರ್ಟ್‌ಫೋನ್‌ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ವಿವರಗಳು ಬಹಿರಂಗವಾಗಿಲ್ಲ.

Best Mobiles in India

English summary
Honor X50 GT key specifications ahead of January 4 Debut
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+