Home
ಸುದ್ದಿಜಾಲ

Honor: ಹಾನರ್‌ X50 GT ಸ್ಮಾರ್ಟ್‌ಫೋನ್‌ ಎಂಟ್ರಿಗೆ ಟೆಕ್‌ ವಲಯವೇ ಶೇಕ್‌!

ಬಿಡುಗಡೆಗೂ ಮುನ್ನವೇ ಸಾಕಷ್ಟು ಹವಾ ಕ್ರಿಯೆಟ್‌ ಮಾಡಿದ್ದ ಹಾನರ್ X50 GT ಸ್ಮಾರ್ಟ್‌ಫೋನ್‌ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗ್ತಿದ್ದ ಹಾಗೇ ಟೆಕ್‌ ವಲಯದಲ್ಲಿ ಭಾರಿ ಟ್ರೆಂಡಿಂಗ್‌ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಜೊತೆಗೆ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಹೌದು, Honor X50 GT ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 3.2GHz ನಲ್ಲಿ ಒಂದು ಕಾರ್ಟೆಕ್ಸ್ X2 ಕೋರ್, 2.75GHz ನಲ್ಲಿ ಮೂರು ಕಾರ್ಟೆಕ್ಸ್ A710 ಕೋರ್‌ಗಳು, 2.0GHz ನಲ್ಲಿ ನಾಲ್ಕು ಕಾರ್ಟೆಕ್ಸ್ A510 ಕೋರ್‌ಗಳು ಮತ್ತು ಅಡ್ರಿನೊ 730 GPU ಅನ್ನು ಹೊಂದಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Honor: ಹಾನರ್‌ X50 GT ಸ್ಮಾರ್ಟ್‌ಫೋನ್‌ ಎಂಟ್ರಿಗೆ ಟೆಕ್‌ ವಲಯವೇ ಶೇಕ್‌!

ಹಾನರ್‌ X50 GT ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
Honor X50 GT ಸ್ಮಾರ್ಟ್‌ಫೋನ್‌ 6.78 ಇಂಚಿನ ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1080 x 2388 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಜೊತೆಗೆ 120 Hz ರಿಫ್ರೆಶ್ ರೇಟ್‌ ಬೆಂಬಲದೊಂದಿಗೆ ಬರಲಿದೆ. ಇದನ್ನು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನೊಂದಿಗೆ ಸಂಯೋಜಿಸಲಾಗಿದೆ.

ಹಾನರ್‌ X50 GT ಪ್ರೊಸೆಸರ್‌ ಯಾವುದು?
ಹಾನರ್‌ X50 GT ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ MagicOS 7.2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಲಿದೆ. ಇನ್ನು ಈ ಡಿವೈಸ್‌ ಶಾಖದ ಹರಡುವಿಕೆಗಾಗಿ 5100mm² ಆವಿ ಚೇಂಬರ್ ಅನ್ನು ಸಹ ಹೊಂದಿದೆ.

Honor: ಹಾನರ್‌ X50 GT ಸ್ಮಾರ್ಟ್‌ಫೋನ್‌ ಎಂಟ್ರಿಗೆ ಟೆಕ್‌ ವಲಯವೇ ಶೇಕ್‌!

ಹಾನರ್‌ X50 GT ಕ್ಯಾಮೆರಾ ಸೆಟಪ್‌
ಹಾನರ್‌ X50 GT ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸೆನ್ಸಾರ್‌, ಎರಡನೇ ಕ್ಯಾಮೆರಾ 2MP ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ 8MP ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ಫೋನ್‌ ವೃತ್ತಾಕಾರದ ಹಿಂಬದಿಯ ಕ್ಯಾಮೆರಾ ಮಾಡ್ಯೂಲ್ ಮತ್ತು ಮಧ್ಯದ ಮೂಲಕ ಲಂಬವಾದ ರನ್ನಿಂಗ್ ಸ್ಟ್ರಿಪ್‌ ವಿನ್ಯಾಸವನ್ನು ಉಳಿಸಿಕೊಂಡಿದೆ.

ಹಾನರ್‌ X50 GT ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹಾನರ್‌ X50 GT ಸ್ಮಾರ್ಟ್‌ಫೋನ್‌ 5,800mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 35W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌, ಹೆಡ್‌ಫೋನ್‌ ಜ್ಯಾಕ್‌ನೊಂದಿಗೆ ಬರಲಿದೆ. ಇದಲ್ಲದೆ ಪ್ರಾಕ್ಸಿಮಿಟಿ ಸೆನ್ಸಾರ್‌, ಅಕ್ಸಿಲೆರೋಮೀಟರ್‌ ಅನ್ನು ಹೊಂದಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್‌ ಇನ್-ಡಿಸ್‌ಪ್ಲೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಹೊಂದಿದೆ.

Honor: ಹಾನರ್‌ X50 GT ಸ್ಮಾರ್ಟ್‌ಫೋನ್‌ ಎಂಟ್ರಿಗೆ ಟೆಕ್‌ ವಲಯವೇ ಶೇಕ್‌!

ಹಾನರ್‌ X50 GT ಬೆಲೆ ಮತ್ತು ಲಭ್ಯತೆ
ಹಾನರ್‌ X50 GT ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆ ಆಗಿದೆ. ಆದರಿಂದ ಈ ಸ್ಮಾರ್ಟ್‌ಫೋನ್‌ನ 12GB + 256GB ರೂಪಾಂತರದ ಆಯ್ಕೆಗೆ CNY 2,100 (ಅಂದಾಜು 24,982ರೂ) ಬೆಲೆಯನ್ನು ಹೊಂದಿದೆ. ಇದರ 16GB + 256GB CNY 2,399 (ಅಂದಾಜು 28,083ರೂ) ಮತ್ತು 16GB + 512GB ಕಾನ್ಫಿಗರೇಶನ್‌ ಆಯ್ಕೆಗೆ CNY 2,599 (ಅಂದಾಜು 30,924ರೂ) ಬೆಲೆಯನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ನ ಟಾಪ್-ಎಂಡ್ ಮಾಡೆಲ್‌ 16GB + 1TB ರೂಪಾಂತರದ ಆಯ್ಕೆಯು CNY 2,899 (ಅಂದಾಜು 34,493ರೂ) ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಮಿಡ್ನೈಟ್ ಬ್ಲ್ಯಾಕ್ ಮತ್ತು ಸ್ಟಾರ್ ವಿಂಗ್ ಗಾಡ್ ಆಫ್ ವಾರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Honor X50 GT With Snapdragon 8+ Gen 1 Launched: Specs Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+